Advertisement
ಸುಮಾರು 4 ದಶಕಗಳಿಂದ ಸುಮಾರು 40 ರಿಂದ 45 ಇರುಳಿಗ, ಬುಡಕಟ್ಟು ಸಮುದಾಯದ ಕುಟುಂಬಗಳು ಕೂಟಗಲ್ ಗ್ರಾಮದಲ್ಲಿ ವಾಸವಾಗಿದ್ದರು. ತೀವ್ರ ನಿರ್ಲಕ್ಷಕ್ಕೆ ಒಳಗಾಗಿದ್ದರು. ಜಿಲ್ಲಾಡಳಿತ,ತಾಲೂಕು ಆಡಳಿತ, ಗ್ರಾಪಂ ಇಲ್ಲಿ ಯಾವ ಮೂಲ ಸೌಕರ್ಯಗಳನ್ನು ಕಲ್ಪಿಸಿರಲಿಲ್ಲ. ಈ ಕುಟುಂಬಗಳಿಗೆಸ್ವಂತ ನಿವೇಶನ ಕಲ್ಪಿಸಿಕೊಡಲು ಸರ್ವೆಸಂಖ್ಯೆ 43ರಲ್ಲಿ 5 ಎಕರೆ ಭೂಮಿಯನ್ನು ಗುರುತಿಸಲಾಗಿದ್ದರೂ ಸಹ ನಿವೇಶನಗಳನ್ನು ವಿಂಗಡಿಸಿ ಕೊಟ್ಟಿರಲಿಲ್ಲ.
Related Articles
Advertisement
45 ಕುಟುಂಬದ ಆಸರೆಗೆ 5 ಎಕರೆ ಬೇಡಿಕೆ: ಈ ವೇಳೆ ಪತ್ರಿಕೆಯೊಂದಿಗೆ ಮಾತನಾಡಿದ ಇರುಳಿಗಸಂಘಟನೆಯ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಇರುಳಿಗ, 40 ವರ್ಷಗಳಿಂದ ಈ ಭಾಗದ ಇರುಳಿಗ ಕುಟುಂಬಗಳು ಅನುಭವಿಸಿದ ಯಾತನೆಗೆ ಸ್ಪಲ್ಪ ಮಟ್ಟಿಗೆ ಪರಿಹಾರ ಸಿಕ್ಕಂತಾಗಿದೆ. ತಮ್ಮೊಂದಿಗೆ ರಾಜು, ಬಾಲರಾಜ್ ಮಹದೇವಯ್ಯ, ಶಿವರಾಜ್ ಜೆ.ಎಲ್., ಸಂಶೋಧನಾ ವಿದ್ಯಾರ್ಥಿ ಎಸ್.ರುದ್ರೇಶ್ವರ, ಡಾ. ಕೆ.ವಿ.ಕೃಷ್ಣಮೂರ್ತಿ ಮುಂತಾದವರು ಜಿಲ್ಲಾಡಳಿತ, ಜಿಪಂ ಮೇಲೆ ಒತ್ತಡ ಹೇರಲು ನೆರವಾಗಿದ್ದಾರೆ. ಜಿಲ್ಲಾಡಳಿತ, ಜಿಪಂ ಸಹ ತಮ್ಮ ಮನವಿಗೆ ಸ್ಪಂದಿಸಿದೆ. ನಿವೇಶನ ವಿತರಿಸಲು ಮುಂದಾಗಿದ್ದಾರೆ.
ಆದರೆ 45 ಕುಟುಂಬಗಳಿಗೆ ನಿವೇಶನಗಳನ್ನು ವಿತರಿಸಬೇಕಾಗಿದೆ. ಈ ಹಿಂದೆ ಸರ್ವೆ ಸಂಖ್ಯೆ 43ರಲ್ಲಿ 5 ಎಕರೆ ಗುರುತಿಸಲಾಗಿತ್ತು. ತಾಲೂಕು ಆಡಳಿತ ಈಗ ಸರ್ವೆ ಸಂಖ್ಯೆ 94ರಲ್ಲಿ ಕೇವಲ 2 ಎಕರೆ ಭೂಮಿ ಕೊಟ್ಟಿದೆ. ಎಲ್ಲ 45 ಕುಟುಂಬಗಳಿ ಗೂ ನಿವೇಶನಬೇಕಾಗಿದ್ದು, 5 ಎಕರೆ ಭೂಮಿ ಮಂಜೂರು ಮಾಡ ಬೇಕು ಎಂದು ಒತ್ತಾಯಿಸಿದ್ದಾರೆ.
ರತ್ನಗಿರಿ ಹಾಡಿ ಎಂದು ನಾಮಕರಣ: ಇರುಳಿಗರ
ಭವಣೆಯನ್ನು ಕಂಡ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಮತ್ತು ಸಿಇಒ ಇಕ್ರಮ್ ಸ್ಪಂದಿಸಿದ್ದಾರೆ.ಭೂಮಿ ಗುರುತಿಸಿದ್ದಾರೆ. ಇರುಳಿಗ ಕುಟುಂಬಗಳುಗುರುತಿಸಿರುವ ಭೂಮಿಯಲ್ಲೇ ತಾತ್ಕಾಲಿಕವಾಗಿ ಗುಡಿಸಲುಗಳನ್ನು ನಿರ್ಮಿಸಿಕೊಳ್ಳಲಾರಂಭಿದ್ದಾರೆ. ತಮ್ಮದೇಆದ ಸ್ಥಳಕ್ಕೆ ಕುಟುಂ ಬಗಳು ರತ್ನಗಿರಿ ಹಾಡಿ ಎಂದು ನಾಮಕರಣ ಮಾಡಿದ್ದಾರೆ. ಊರಿನ ಪ್ರಮುಖರಾದಸಂಜೀವಯ್ಯ, ಮಂಜುನಾಥ್.ಕೆ.ಎಚ್ ಸೇರಿದಂತೆಹಲವರು ಸಹ ಸಹಕಾರ ಕೊಟ್ಟಿದ್ದಾರೆ. ಜಿಲ್ಲಾಡಳಿತ ನೂತನವಾಗಿ ನಿವೇಶನಗಳನ್ನು ವಿಂಗಡಿಸಿದ ನಂತರ ಅಗತ್ಯ ಮೂಲಭೂತ ಸೌಕರ್ಯಗಳನ್ನು ಸಹ ಕಲ್ಪಿಸಿಕೊಡಬೇಕು ಎಂದು ಅವರು ಜಿಲ್ಲಾಧಿಕಾರಿಗಳು ಹಾಗು ಸಿಇಒ ಅವರನ್ನು ಆಗ್ರಹಿಸಿದ್ದಾರೆ.
ಸಿಇಒ ಭೇಟಿ ಪರಿಶೀಲನೆ :
ಕೂಟಗಲ್ ಗ್ರಾಮದಲ್ಲಿ ಇರುಳಿಗ ಕುಟುಂಬಗಳಿಗೆ ನಿವೇಶನ ವಿತರಿಸಲು ಗುರುತಿಸಿರುವ ಸ್ಥಳಕ್ಕೆ ಜಿಪಂಸಿಇಒ ಇಕ್ರಮ್ ಇತ್ತೀಚಿಗಷ್ಟೇ ಭೇಟಿ ಕೊಟ್ಟಿದ್ದರು.ಭೂಮಿ ಸರ್ವೆ, ನಿವೇಶನಗಳ ವಿಂಗಡಣೆಗೆ ಕೈಗೊಂಡಿರುವ ಕ್ರಮಗಳು ಇತ್ಯಾದಿ ವಿಚಾರಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಇದೇ ವೇಳೆಅವರು ಇರುಳಿಗ ಕುಟುಂಬಗಳು ಮತ್ತು ಕೂಟಗಲ್ ಗ್ರಾಮಸ್ಥರ ಅಹವಾಲು ಆಲಿಸಿದರು.
ಕೂಟಗಲ್ ಗ್ರಾಮದ ಸರ್ವೆ ಸಂಖ್ಯೆ 94ರಲ್ಲಿ 2 ಎಕರೆ ಭೂಮಿ ಯನ್ನು ಇರುಳಿಗರ ವಸತಿ ಲೇಔಟ್‌ಗೆಂದು ಜಿಲ್ಲಾಧಿಕಾರಿಗಳು ಸೂಚಿಸಿ ಆದೇಶಿಸಿದ್ದಾರೆ. ಇನ್ನು ಸಾಕಷ್ಟು ಪ್ರಕ್ರಿಯೆಗಳು ನಡೆಯಬೇಕಾಗಿದೆ. ಅರ್ಹ ಕುಟುಂಬಗಳಿಂದ ಅಗತ್ಯ ದಾಖಲೆ ಪಡೆದುಕೊಂಡು, 30×40 ಅಳತೆಯ ನಿವಶೇನಗಳನ್ನು ವಿಂಗಡಿಸಲಾಗುವುದು. –ಮುನಿಯಪ್ಪ, ಪಿಡಿಒ, ಕೂಟಗಲ್ ಗ್ರಾಪಂ
–ಬಿ.ವಿ.ಸೂರ್ಯ ಪ್ರಕಾಶ್