Advertisement

ಜೆಡಿಎಸ್‌ ಅಧಿಕಾರಕ್ಕೆ ಬಂದರೆ ನೀರಾವರಿಗೆ ಆದ್ಯತೆ

12:53 PM Apr 28, 2022 | Team Udayavani |

 ರಾಯಚೂರು: ರಾಜ್ಯದಲ್ಲಿ ಜೆಡಿಎಸ್‌ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬಂದಲ್ಲಿ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದು ಶತಃಸಿದ್ಧ ಎಂದು ಸಿಂಧನೂರು ಶಾಸಕ ವೆಂಕಟರಾವ್‌ ನಾಡಗೌಡ ತಿಳಿಸಿದರು.

Advertisement

ನಗರಕ್ಕೆ ಆಗಮಿಸಿದ ಜನತಾ ಜಲಧಾರೆ ಯಾತ್ರೆಯನ್ನು ಅಸ್ಕಿಹಾಳ ಗ್ರಾಮದ ಮಾರೆಮ್ಮ ದೇವಸ್ಥಾನದ ಬಳಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯರು ರಥದಲ್ಲಿ ತುಂಗಭದ್ರಾ ನೀರನ್ನು ತುಂಬಿಸುವ ಮೂಲಕ ಯಾತ್ರೆಗೆ ಚಾಲನೆ ನೀಡಿದರು.

ನಗರದ ಪ್ರಮುಖ ಬೀದಿಗಳಲ್ಲಿ ಯಾತ್ರೆ ಸಂಚರಿಸಿದ ಬಳಿಕ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬಹಿರಂಗ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಅವರು, ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಜನರಿಗೆ ನೀಡಿದ್ದ ಎಲ್ಲ ಆಶ್ವಾಸನೆಗಳನ್ನು ಈಡೇರಿಸಿದ್ದಾರೆ. ಅವರು ಮಾತು ಕೊಟ್ಟಲ್ಲಿ ತಪ್ಪಿದ ಉದಾಹರಣೆಗಳೇ ಕಡಿಮೆ. ಅದಕ್ಕೆ ಉತ್ತಮ ನಿದರ್ಶನವೇ ರೈತರ ಸಾಲಮನ್ನಾ. ಅದೇ ಈಗ ಅವರು ರಾಜ್ಯದ ನೀರಾವರಿ ವಲಯಕ್ಕೆ ವಿಶೇಷ ಆದ್ಯತೆ ನೀಡುವ ಮಾತನ್ನಾಡಿದ್ದು. ಅಧಿಕಾರಕ್ಕೆ ಬಂದರೆ ಆ ಸಂಕಲ್ಪ ಈಡೇರುವುದರಲ್ಲಿ ಅನುಮಾನವೇ ಬೇಡ ಎಂದರು.

ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಹೊಸಪೇಟೆಯಿಂದ ಶುರುವಾದ ಈ ಜನತಾ ಜಲಧಾರೆ ಯಾತ್ರೆಯು ಜಿಲ್ಲೆಯ ಎಲ್ಲ ಕ್ಷೇತ್ರಗಳಿಗೂ ಸಂಚರಿಸಿದೆ. ಪ್ರತಿ ಕ್ಷೇತ್ರದಲ್ಲೂ ನೀರಾವರಿ ಸೌಲಭ್ಯಗಳ ಕೊರತೆ ಮತ್ತು ಅವುಗಳ ಅನುಷ್ಠಾನದ ಬಗ್ಗೆ ಜನರಿಗೆ ಮನವರಿಕೆ ಮಾಡಲಾಗುವುದು. ನಮಗೆ ನೀರಿನ ಲಭ್ಯತೆ ಇದ್ದರೂ ಅವುಗಳ ಸರಿಯಾಗಿ ಬಳಸಿಕೊಳ್ಳುವ ಇಚ್ಛಾಶಕ್ತಿ ಕಾಣುತ್ತಿಲ್ಲ. ಜೆಡಿಎಸ್‌ ಅಧಿಕಾರಕ್ಕೆ ಬಂದಲ್ಲಿ ಅದು ಸಾಧ್ಯವಾಗಲಿದೆ ಎಂದರು.

ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಮಾತನಾಡಿ, ಬಿಜೆಪಿ ದೇಶದಲ್ಲಿ ಮತೀಯ ಗಲಭೆಗಳಿಗೆ ಇಂಬು ನೀಡುತ್ತಿದೆ. ದ್ವೇಷ ರಾಜಕಾರಣವೇ ಬಿಜೆಪಿ ಅಜೆಂಡಾವಾಗಿದೆ ಎಂದು ದೂರಿದರು.

Advertisement

ಜಿಲ್ಲಾ ಕಾರ್ಯಾಧ್ಯಕ್ಷ ಎನ್‌.ಶಿವಶಂಕರ ಮಾತನಾಡಿದರು. ಮುಖಂಡರಾದ ಯೂಸೂಫ್‌ಖಾನ್‌, ಕರೆಮ್ಮ ನಾಯಕ, ಪವನಕುಮಾರ, ಬಿ.ತಿಮ್ಮಾರೆಡ್ಡಿ, ಮಲ್ಲಿಕಾರ್ಜುನ ದೋತರಬಂಡಿ, ವಿಶ್ವನಾಥ ಪಟ್ಟಿ, ಅಕ್ಬರ್‌ ಹುಸೇನ್‌, ರವಿ ಆಶಾಪೂರ, ಜಂಬುನಾಥ ಯಾದವ್‌, ಬುಡ್ಡನಗೌಡ, ರಾಮನಗೌಡ ಏಗನೂರು ಸೇರಿದಂತೆ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next