Advertisement

ಡ್ವೇನ್‌ ಬ್ರಾವೊ ಸ್ಥಾನಕ್ಕೆ ಇರ್ಫಾನ್‌ ಪಠಾಣ್‌

02:14 PM Apr 26, 2017 | Karthik A |

ಹೊಸದಿಲ್ಲಿ: ಭಾರತದ ಮಾಜಿ ಆಲ್‌ರೌಂಡರ್‌ ಇರ್ಫಾನ್‌ ಪಠಾಣ್‌ ಅವರಿಗೆ ಕೊನೆಗೂ 10ನೇ ಐಪಿಎಲ್‌ ಬಾಗಿಲು ತೆರೆದಿದೆ. ಗುಜರಾತ್‌ ಲಯನ್ಸ್‌ ತಂಡದ ಗಾಯಾಳು ಆಟಗಾರ, ವೆಸ್ಟ್‌ ಇಂಡೀಸಿನ ಡ್ವೇನ್‌ ಬ್ರಾವೊ ಬದಲು ಪಠಾಣ್‌ ಅವರನ್ನು ಸೇರಿಸಿಕೊಳ್ಳಲಾಗಿದೆ.

Advertisement

ಫೆಬ್ರವರಿಯಲ್ಲಿ ನಡೆದ ಐಪಿಎಲ್‌ ಹರಾಜಿನ ವೇಳೆ ಮಾರಾಟವಾಗದೆ ಉಳಿದ ಪ್ರಮುಖ ಕ್ರಿಕೆಟಿಗರಲ್ಲಿ ಇರ್ಫಾನ್‌ ಪಠಾಣ್‌ ಕೂಡ ಒಬ್ಬರಾಗಿದ್ದರು. ಅವರಿಗೆ 50 ಲಕ್ಷ ರೂ. ಮೂಲಬೆಲೆ ನಿಗದಿಗೊಳಿಸಲಾಗಿತ್ತು. 2 ಸಲ ಪಠಾಣ್‌ ಹೆಸರನ್ನು ಕೂಗಲಾಯಿತಾದರೂ ಯಾರೂ ಅವರನ್ನು ಖರೀದಿಸಲು ಆಸಕ್ತಿ ತೋರಲಿಲ್ಲ. ಎಡ ಮಂಡಿಯ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಡ್ವೇನ್‌ ಬ್ರಾವೊ ಐಪಿಎಲ್‌ ಆಡಲೆಂದೇ ಭಾರತಕ್ಕೆ ಬಂದಿದ್ದರೂ ಇನ್ನೂ ಚೇತರಿಸಿಕೊಳ್ಳದ ಕಾರಣ ಈ ಕೂಟದಿಂದ ಹೊರಗುಳಿಯುವುದು ಅನಿವಾರ್ಯವಾಯಿತು. 32ರ ಹರೆಯದ ಇರ್ಫಾನ್‌ ಪಠಾಣ್‌ ಕಳೆದ 9 ಐಪಿಎಲ್‌ ಋತುಗಳಲ್ಲಿ 5 ಫ್ರಾಂಚೈಸಿಗಳ ಪರ 102 ಪಂದ್ಯಗಳನ್ನಾಡಿದ್ದು, 80 ವಿಕೆಟ್‌ ಹಾಗೂ 1,137 ರನ್‌ ಸಂಪಾದಿಸಿದ್ದಾರೆ. 

‘ಇಂಥದೊಂದು ಅದ್ಭುತ ತಂಡದ ಭಾಗವಾಗಿ ಆಡುವುದನ್ನು ಎದುರು ನೋಡುತ್ತಿದ್ದೇನೆ’ ಎಂದು ಗುಜರಾತ್‌ ಜೆರ್ಸಿ ಧರಿಸಿದ ಇರ್ಫಾನ್‌  ಟ್ವೀಟ್‌ ಮಾಡಿದ್ದಾರೆ. ಪಠಾಣ್‌ ಈವರೆಗೆ ಐಪಿಎಲ್‌ನಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌, ಡೆಲ್ಲಿ ಡೇರ್‌ಡೆವಿಲ್ಸ್‌, ಚೆನ್ನೈ ಸೂಪರ್‌ ಕಿಂಗ್ಸ್‌, ಸನ್‌ರೈಸರ್ಹೈ ದರಾಬಾದ್‌ ಮತ್ತು ರೈಸಿಂಗ್‌ ಪುಣೆ ತಂಡಗಳನ್ನು ಪ್ರತಿನಿಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next