ಹೊಸದಿಲ್ಲಿ: ಪ್ರವಾಸಿ ಐರ್ಲೆಂಡ್ ಎದುರಿನ ವನಿತಾ ಏಕದಿನ ಸರಣಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಪೇಸ್ ಬೌಲರ್ ರೇಣುಕಾ ಸಿಂಗ್ ಠಾಕೂರ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಸ್ಮತಿ ಮಂಧನಾ ತಂಡವನ್ನು ಮುನ್ನಡೆಸಲಿದ್ದು, ಆಲ್‌ರೌಂಡರ್ ದೀಪ್ತಿ ಶರ್ಮ ಉಪನಾಯಕಿ ಆಗಿದ್ದಾರೆ.
3 ಪಂದ್ಯಗಳ ಈ ಸರಣಿ ಜ. 10, 12 ಮತ್ತು 15ರಂದು ರಾಜ್‌ಕೋಟ್‌ನಲ್ಲಿ ನಡೆಯಲಿದೆ. ಎಲ್ಲ ಪಂದ್ಯಗಳು ಬೆಳಗ್ಗೆ 11 ಗಂಟೆಗೆ ಆರಂಭವಾಗಲಿವೆ.
ವೆಸ್ಟ್ ಇಂಡೀಸ್ ಎದುರಿನ ತವರಿನ ಸರಣಿಯಲ್ಲಿ ಮಂಡಿ ನೋವಿಗೆ ಸಿಲುಕಿದ ಕಾರಣ ಹರ್ಮನ್‌ಪ್ರೀತ್ ಕೌರ್ ಕೊನೆಯ 2 ಟಿ20 ಪಂದ್ಯಗಳಿಂದ ಹೊರಗುಳಿದಿದ್ದರು. ರೇಣುಕಾ ಸಿಂಗ್ ಠಾಕೂರ್ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮುಖಾಮುಖೀಯಲ್ಲಿ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು. ಸತತ ಪಂದ್ಯಗಳ ಒತ್ತಡದಿಂದಾಗಿ ಅವರಿಗೆ ವಿಶ್ರಾಂತಿ ನೀಡಲಾಯಿತು. ಆದರೆ ಕರ್ನಾಟಕದ ಸ್ಪಿನ್ ಬೌಲರ್ ಶ್ರೇಯಾಂಕಾ ಪಾಟೀಲ್ ತಂಡಕ್ಕೆ ಮರಳುವಲ್ಲಿ ವಿಫಲರಾಗಿದ್ದಾರೆ.
ಭಾರತ ತಂಡ: ಸ್ಮತಿ ಮಂಧನಾ (ನಾಯಕಿ), ಪ್ರತೀಕಾ ರಾವಲ್, ಹರ್ಲೀನ್ ದೇವಲ್, ಜೆಮಿಮಾ ರೋಡ್ರಿಗಸ್, ಉಮಾ ಛೆತ್ರಿ, ರಿಚಾ ಘೋಷ್, ದೀಪ್ತಿ ಶರ್ಮ, ತೇಜಲ್ ಹಸಬಿ°ಸ್, ರಾಘವಿ ಬಿಷ್ಟ್, ಮಿನ್ನು ಮಣಿ, ಪ್ರಿಯಾ ಮಿಶ್ರಾ, ತನುಜಾ ಕನ್ವರ್, ತಿತಾಸ್ ಸಾಧು, ಸೈಮಾ ಠಾಕೂರ್, ಸಯಾಲಿ ಸತ್ಕರೆ.