Advertisement

Ireland V\s England: ಇಂಗ್ಲೆಂಡ್‌ 10 ವಿಕೆಟ್‌ ಜಯಭೇರಿ

11:03 PM Jun 04, 2023 | Team Udayavani |

ಲಂಡನ್‌: ಪ್ರವಾಸಿ ಐರ್ಲೆಂಡ್‌ ಎದುರಿನ ಏಕೈಕ ಟೆಸ್ಟ್‌ ಪಂದ್ಯವನ್ನು 10 ವಿಕೆಟ್‌ಗಳಿಂದ ಗೆದ್ದ ಇಂಗ್ಲೆಂಡ್‌ ಆ್ಯಶಸ್‌ ಸರಣಿಗೆ ಸಜ್ಜಾಗಿದೆ.

Advertisement

352 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿದ ಐರ್ಲೆಂಡ್‌ ದ್ವಿತೀಯ ಸರದಿಯಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿ 362 ರನ್‌ ಗಳಿಸಿತು. 7ನೇ ವಿಕೆಟಿಗೆ ಜತೆಗೂಡಿದ ಆ್ಯಂಡಿ ಮೆಕ್‌ಬ್ರೈನ್‌ (ಅಜೇಯ 86) ಮತ್ತು ಮಾರ್ಕ್‌ ಅಡೈರ್‌ (88) 163 ರನ್‌ ಜತೆಯಾಟ ನಡೆಸಿ ತಂಡವನ್ನು ಇನ್ನಿಂಗ್ಸ್‌ ಸೋಲಿನಿಂದ ಪಾರುಮಾಡಿದರು. ಇಂಗ್ಲೆಂಡ್‌ ಜಯಕ್ಕೆ ಕೇವಲ 11 ರನ್‌ ಬೇಕಿತ್ತು. ಜಾಕ್‌ ಕ್ರಾಲಿ 3 ಬೌಂಡರಿ ಬಾರಿಸಿ ಕೇವಲ ನಾಲ್ಕೇ ಎಸೆತಗಳಲ್ಲಿ ಗೆಲುವನ್ನು ಸಾರಿದರು.

ಐರ್ಲೆಂಡ್‌ ಮೊದಲ ಇನ್ನಿಂಗ್ಸ್‌
ನಲ್ಲಿ 172 ರನ್‌ ಮಾಡಿತ್ತು. ಜವಾಬಿತ್ತ ಇಂಗ್ಲೆಂಡ್‌ 4 ವಿಕೆಟಿಗೆ 524 ರನ್‌ ಗಳಿಸಿ ಡಿಕ್ಲೇರ್‌ ಮಾಡಿತು. ಓಲೀ ಪೋಪ್‌ 205, ಬೆನ್‌ ಡಕೆಟ್‌ 182 ರನ್‌ ಬಾರಿಸಿದರು. ಇವರಿಬ್ಬರ ನಡುವೆ ದ್ವಿತೀಯ ವಿಕೆಟಿಗೆ 252 ರನ್‌ ಒಟ್ಟುಗೂಡಿತು. ಮೊದಲ ಸರದಿಯಲ್ಲಿ ಸ್ಟುವರ್ಟ್‌ ಬ್ರಾಡ್‌ 5 ವಿಕೆಟ್‌, ದ್ವಿತೀಯ ಸರದಿಯಲ್ಲಿ ಜೋಶ್‌ ಟಂಗ್‌ 5 ವಿಕೆಟ್‌ ಉರುಳಿಸಿ ಐರಿಷ್‌ ಪಡೆಯನ್ನು ಕಾಡಿದರು.

ಸ್ಟೋಕ್ಸ್‌ ವಿಶಿಷ್ಟ ದಾಖಲೆ
ಈ ಪಂದ್ಯದಲ್ಲಿ ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌ ವಿಶಿಷ್ಟ ದಾಖಲೆಯೊಂದನ್ನು ಬರೆದರು. ಅವರು ಈ ಪಂದ್ಯದಲ್ಲಿ ಬ್ಯಾಟಿಂಗ್‌ ನಡೆಸಲಿಲ್ಲ, ಬೌಲಿಂಗ್‌ ಕೂಡ ಮಾಡಲಿಲ್ಲ. ಹೀಗೆ ಬ್ಯಾಟಿಂಗ್‌, ಬೌಲಿಂಗ್‌ ನಡೆಸದೆ ಟೆಸ್ಟ್‌ ಪಂದ್ಯವೊಂದನ್ನು ಗೆದ್ದ ವಿಶ್ವದ ಪ್ರಥಮ ನಾಯಕನಾಗಿ ಮೂಡಿಬಂದರು!

ಸಂಕ್ಷಿಪ್ತ ಸ್ಕೋರ್‌: ಐರ್ಲೆಂಡ್‌-172 ಮತ್ತು 362. ಇಂಗ್ಲೆಂಡ್‌-4 ವಿಕೆಟಿಗೆ 524 ಡಿಕ್ಲೇರ್‌ ಮತ್ತು ವಿಕೆಟ್‌ ನಷ್ಟವಿಲ್ಲದೆ 12.
ಪಂದ್ಯಶ್ರೇಷ್ಠ: ಓಲೀ ಪೋಪ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next