Advertisement
ʼದಿ ಸೇಲ್ಸ್ ಮ್ಯಾನ್ʼ ಚಿತ್ರದಲ್ಲಿನ ನಟನೆಗಾಗಿ ಆಸ್ಕರ್ ಪ್ರಶಸ್ತಿ ಪಡೆದಿರುವ ತರನೆಹ್ ಅಲಿದೋಸ್ತಿ ಇತ್ತೀಚೆಗೆ ಇರಾನಿನಲ್ಲಿ ಮರಣದಂಡನೆಗೆ ಒಳಗಾದ ಮೊಹ್ಸೆನ್ ಶೇಕರಿ ಎಂಬಾತನ ಪರವಾಗಿ ಇನ್ಸ್ಟಾಗ್ರಾಮ್ ನಲ್ಲಿ ಬರಹವೊಂದು ಬರೆದು, ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿದ್ದರು. ಇದು ಆಡಳಿತಕ್ಕೆ ವಿರೋಧವಾದ ನಡೆಯಾಗಿದ್ದು ಅದಕ್ಕಾಗಿ ನಟಿಯನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.
Related Articles
Advertisement
ಇದಲ್ಲದೆ ಪ್ರತಿಭಟನಾಕಾರರಿಗೆ ಬೆಂಬಲವಾಗಿ ಭಿತ್ತಿ ಪತ್ರವನ್ನು ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದರು.
8 ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ನಟಿಯ ಇನ್ಸ್ಟಾಗ್ರಾಮ್ ಖಾತೆಯನ್ನು ಅಮಾನತುಗೊಳಿಸಲಾಗಿದೆ. ಈ ಹಿಂದೆಯೂ ಅಲಿದೋಸ್ತಿ ಸರ್ಕಾರ ಹಾಗೂ ಪೊಲೀಸರ ವಿರುದ್ಧ ಟೀಕೆಗಳನ್ನು ಮಾಡಿದ್ದರು.
ಬ್ಯೂಟಿಫುಲ್ ಸಿಟಿ ಮತ್ತುಅಬೌಟ್ ಎಲಿ ಸಿನಿಮಾದಲ್ಲೂ ಅಲಿದೋಸ್ತಿ ನಟಿಸಿದ್ದಾರೆ. ಇರಾನ್ ಸಿನಿಮಾರಂಗದಲ್ಲಿನ ಮೀಟೂ ಘಟನೆಯನ್ನು ಬೆಳಕಿಗೆ ತಂದಿದ್ದರು.
ಹೆಂಗಮೆಹ್ ಘಜಿಯಾನಿ ಮತ್ತು ಕಟಯೌನ್ ರಿಯಾಹಿ ಎಂಬ ನಟಿಯರನ್ನೂ ಕೆಲದಿನಗಳ ಹಿಂದೆ ಅಧಿಕಾರಿಗಳು ಪ್ರತಿಭಟನಾಕಾರರನ್ನು ಬೆಂಬಲಿಸಿದ್ದಕ್ಕಾಗಿ ಬಂಧಿಸಿ ಬಳಿಕ ಬಿಡುಗಡೆ ಮಾಡಲಾಗಿತ್ತು.