Advertisement
ಇದೀಗ ಮಂಗಳವಾರ ಮುಂಬೈ ಇಂಡಿಯನ್ಸ್ ವಿರುದ್ಧ ತನ್ನ 13ನೇ ಪಂದ್ಯವನ್ನು ಆಡಲಿಳಿಯಲಿದೆ. ಒಂದೇ ಸಾಲಲ್ಲಿ ಹೇಳುವುದಾದರೆ, ಇದು ಹೈದರಾಬಾದ್ ಹೊರಬೀಳುವ ಹೊತ್ತು!
Related Articles
ಹೈದರಾಬಾದ್ ತಂಡದ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗವೆರಡೂ ಸತತವಾಗಿ ಹಿನ್ನಡೆ ಅನು ಭವಿಸುತ್ತ ಬಂದಿದೆ. ಮೊದಲಾಗಿ ನಾಯಕನೇ “ಕಪ್ತಾನನ ಆಟ’ ಆಡುತ್ತಿಲ್ಲ. ಕೇನ್ ವಿಲಿಯ ಮ್ಸನ್ ಮಟ್ಟಿಗೆ ಈ ಐಪಿಎಲ್ ಬಿಗ್ ಫ್ಲಾಪ್. ಇವರ ಜತೆಗಾರ ಅಭಿಷೇಕ್ ಶರ್ಮ ಒಂದು ಹಂತದ ತನಕವಷ್ಟೇ ಮಿಂಚಿ ದರು. ರಾಹುಲ್ ತ್ರಿಪಾಠಿ, ಐಡನ್ ಮಾರ್ಕ್‌ರಮ್, ನಿಕೋಲಸ್ ಪೂರಣ್ ಅವರನ್ನೊಳಗೊಂಡ ಮಧ್ಯಮ ಕ್ರಮಾಂಕ ಎಂದೂ “ಟೀಮ್’ ಆಗಿ ಆಡಿಲ್ಲ. ವಾಷಿಂಗ್ಟನ್ ಸುಂದರ್, ಶಶಾಂಕ್ ಸಿಂಗ್ “ಫಿನಿಶಿಂಗ್ ರೋಲ್’ನಲ್ಲಿ ವೈಫಲ್ಯವನ್ನೇ ಕಾಣುತ್ತಿದ್ದಾರೆ.
Advertisement
ಹೈದರಾಬಾದ್ ಬೌಲಿಂಗ್ ವಿಭಾಗ ವೇಗಕ್ಕೆ ಹೆಸರುವಾಸಿ. ಆದರೆ ಒಮ್ಮೆ ಈ ವೇಗದ ಮರ್ಮ ಅರಿತರೆ ಇಡೀ ಬೌಲಿಂಗ್ ವಿಭಾಗವೇ ಚಿಂದಿಯಾಗುತ್ತದೆ. ಹೈದರಾಬಾದ್ ಈಗ ಇದೇ ಸ್ಥಿತಿಯಲ್ಲಿದೆ. ಉಮ್ರಾನ್ ಮಲಿಕ್ ಹೊರತುಪಡಿಸಿ ಬೇರೆ ಯಾವ ವೇಗಿಯೂ ಘಾತಕವಾಗಿ ಪರಿಣಮಿಸುತ್ತಿಲ್ಲ. ಪರ್ಯಾಯವಾಗಿ ಪರಿಣಾಮಕಾರಿ ಸ್ಪಿನ್ನರ್ ಕೂಡ ಇಲ್ಲ.
ಕೊನೆಯ ಸ್ಥಾನದ ಸಂಕಟಮುಂಬೈ ತನ್ನ ಕೊನೆಯ ಪಂದ್ಯದಲ್ಲಿ ಚೆನ್ನೈಯನ್ನು 97ಕ್ಕೆ ಉಡಾಯಿಸಿದ ಖುಷಿಯಲ್ಲಿದೆ. ಆದರೆ ಇದನ್ನು ಬೆನ್ನಟ್ಟುವಾಗ ಸಾಕಷ್ಟು ಪರದಾಡಿದ್ದು ಸುಳ್ಳಲ್ಲ. ಯುವ ಬ್ಯಾಟರ್ ತಿಲಕ್ ವರ್ಮ ಕ್ರೀಸ್ ಆಕ್ರಮಿಸಿಕೊಳ್ಳದೇ ಹೋಗಿದ್ದರೆ ಮುಂಬೈ ಕೂಡ ಪಲ್ಟಿ ಹೊಡೆಯುವ ಸಾಧ್ಯತೆ ಇತ್ತು. ಮುಂಬೈ ಮುಂದಿರುವ ಯೋಜನೆಯೆಂದರೆ ಕಟ್ಟಕಡೆಯ ಸ್ಥಾನದ ಅವಮಾನವನ್ನು ತಪ್ಪಿಸಿಕೊಳ್ಳು ವುದು. ಸದ್ಯ ಅದು 3 ಪಂದ್ಯಗಳನ್ನು ಗೆದ್ದು 6 ಅಂಕ ಹೊಂದಿದೆ. 2 ಪಂದ್ಯ ಬಾಕಿ ಇದೆ. ಎರಡನ್ನೂ ಗೆದ್ದರೆ ಅಂಕ 10ಕ್ಕೆ ಏರಲಿದೆ. ಇನ್ನೊಂದೆಡೆ ಚೆನ್ನೈ 13 ಪಂದ್ಯಗಳಿಂದ 8 ಅಂಕ ಗಳಿಸಿ ಮುಂಬೈಗಿಂತ ಒಂದು ಮೆಟ್ಟಿಲು ಮೇಲಿದೆ. ಧೋನಿ ಪಡೆಯನ್ನು ಹೊರದಬ್ಬಿದ ರೀತಿಯಲ್ಲಿ ಇದನ್ನು ಅಂಕಪಟ್ಟಿಯಲ್ಲಿ ಕೆಳಕ್ಕೆ ತಳ್ಳುವಲ್ಲೂ ರೋಹಿತ್ ಪಡೆ ಯಶಸ್ವಿಯಾದೀತೇ? ಈ ಹಾದಿಯ ಮೊದಲ ಹೆಜ್ಜೆಯೆಂದರೆ ಹೈದರಾಬಾದನ್ನು ಉರುಳಿಸುವುದು!