Advertisement
ರಾಜಸ್ಥಾನ ರಾಯಲ್ಸ್ ಹಾಗೂ ಕೊಲ್ಕೊತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ಇಂದಿನ ಪಂದ್ಯ ನಡೆಯಲಿದೆ.
ಆದರೆ ಇಲ್ಲೊಂದು ಸಂಗತಿ ಇದೆ. ರಾಜಸ್ಥಾನ್ ತನ್ನ ಎರಡೂ ಪಂದ್ಯಗಳನ್ನು ಆಡಿದ್ದು ಶಾರ್ಜಾದಲ್ಲಿ. ಇದು ಯುಎಇಯ ಅತೀ ಸಣ್ಣ ಅಂಗಳ. ಬೌಂಡರಿ ಅಂತರವೂ ಚಿಕ್ಕದು. ಹೀಗಾಗಿ ಬಾರಿಸಿದ್ದೆಲ್ಲ ಬೌಂಡರಿ, ಸಿಕ್ಸರ್ ಆಗಿ ಪರಿವರ್ತನೆಗೊಳ್ಳುತ್ತದೆ. ಅಲ್ಲಿನದೇ ರೀತಿಯಲ್ಲಿ ತಮಾಷೆಯಾಗಿ ಹೇಳಬೇಕೆಂದರೆ, ಶಾರ್ಜಾದಲ್ಲಿ ಬಾರಿಸಿದ ಚೆಂಡು ದುಬಾಯಿಗೋ, ಅಬುಧಾಬಿಗೋ ಹೋಗಿ ಬೀಳುತ್ತದೆ! ಆದರೆ ರಾಜಸ್ಥಾನ್ ಮೊದಲ ಸಲ ಶಾರ್ಜಾದ ಆಚೆ ಆಡಲಿಳಿ ಯುತ್ತದೆ. ಹೀಗಾಗಿ ದುಬಾೖ ಅಂಗಳ ಸ್ಮಿತ್ ಪಡೆಗೆ ನಿಜವಾದ ಅಗ್ನಿಪರೀಕ್ಷೆ. ಇಲ್ಲಿಯೂ ಸ್ಫೋಟಕ ಆಟವಾಡಿದರೆ ರಾಜಸ್ಥಾನ್ ನಿಜಕ್ಕೂ ಗ್ರೇಟ್ ಎನಿಸಲಿದೆ.
Related Articles
Advertisement
ರಕ್ಷಣಾತ್ಮಕ ಆಟ ನಡೆಯದುಕೋಲ್ಕತಾ ಕೂಡ ಬಿಗ್ ಹಿಟ್ಟರ್‌ಗಳನ್ನು ಹೊಂದಿದೆ. ಶುಭಮನ್ ಗಿಲ್, ಆ್ಯಂಡ್ರೆ ರಸೆಲ್, ಸುನೀಲ್ ನಾರಾಯಣ್, ಮಾರ್ಗನ್ ಬಲವನ್ನು ಹೊಂದಿದೆ. ಆದರೆ ಇವರು ರಕ್ಷಣಾತ್ಮಕ ಆಟವನ್ನು ಬದಲಿಸಿ ಮುನ್ನುಗ್ಗಿ ಬಾರಿಸ ಬೇಕಾದುದು ಅನಿವಾರ್ಯ. ಇವರಲ್ಲಿ ಇಬ್ಬರಾದರೂ ಸಿಡಿದು ನಿಲ್ಲುವುದು ಮುಖ್ಯ. ಹಾಗೆಯೇ ಕಾರ್ತಿಕ್ ಕಪ್ತಾನನ ಆಟ ಆಡುವುದೂ ಅಗತ್ಯ. ರಾಜಸ್ಥಾನ್‌ನಂತೆ ಕೆಕೆಆರ್ ಕೂಡ ಇದೇ ಮೊದಲ ಸಲ ದುಬಾೖಯಲ್ಲಿ ಆಡುತ್ತಿದೆ. ಈ ಸಾಲಿನ ಎರಡೂ ಸೂಪರ್ ಓವರ್ ಪಂದ್ಯಗಳಿಗೆ ಸಾಕ್ಷಿಯಾದ ಸ್ಟೇಡಿಯಂ ಇದಾಗಿದೆ. ಇಲ್ಲಿ 5 ಪಂದ್ಯಗಳು ನಡೆದಿದ್ದು, ಎಲ್ಲದರಲ್ಲೂ ಮೊದಲು ಬ್ಯಾಟಿಂಗ್ ನಡೆಸಿದ ತಂಡಗಳೇ ಗೆಲುವು ಕಂಡಿವೆ.