ಹೈದರಾಬಾದ್ : ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 35 ರನ್ ಜಯದ ನಗು ಬೀರಿದೆ.
ಹೈದರಾಬಾದ್ ಆಡಿದ 8 ನೇ ಪಂದ್ಯದಲ್ಲಿ 3 ನೇ ಸೋಲು ಅನುಭವಿಸಿತು. ಆರ್ ಸಿಬಿ ಆಡಿದ 9ನೇ ಪಂದ್ಯದಲ್ಲಿ 2 ನೇ ಗೆಲುವು ಸಾಧಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆರ್ ಸಿಬಿ 7 ವಿಕೆಟ್ ನಷ್ಟಕ್ಕೆ 206 ರನ್ ಕಲೆ ಹಾಕಿತು. ಕೊಹ್ಲಿ 51(43 ಎಸೆತ )ರನ್ ಗಳಿಸಿ ಔಟಾದರು. ನಾಯಕ ಡು ಪ್ಲೆಸಿಸ್ 25(12 ಎಸೆತ) ಔಟಾದರು. ವಿಲ್ ಜಾಕ್ಸ್ 6 ರನ್ ಗೆ ಆಟ ಮುಗಿಸಿದರು. ಆ ಬಳಿಕ ಅಬ್ಬರಿಸಿದ ರಜತ್ ಪಾಟಿದಾರ್ ಅಮೋಘ ಅರ್ಧಶತಕ ಗಳಿಸಿ ಔಟಾದರು. 20 ಎಸೆತಗಳಲ್ಲಿ 50 ರನ್ ಗಳಿಸಿದರು. 2 ಬೌಂಡರಿ ಮತ್ತು 5 ಸಿಕ್ಸರ್ ಸಿಡಿಸಿದರು. ಕ್ಯಾಮರೂನ್ ಗ್ರೀನ್ 37(20) ರನ್ ಗಳಿಸಿ ಔಟಾಗದೆ ಉಳಿದರು. ಲೊಮ್ರೋರ್ 7, ಕಾರ್ತಿಕ್11, ಸ್ವಪ್ನಿಲ್ ಸಿಂಗ್12 ರನ್ ಗಳಿಸಿ ಔಟಾದರು.
ಬಿಗಿ ದಾಳಿ ನಡೆಸಿದ ಜಯದೇವ್ ಉನದ್ಕತ್ 3 ವಿಕೆಟ್ ಕಿತ್ತರು.ನಟರಾಜನ್ 2 ವಿಕೆಟ್ ಪಡೆದರೆ, ಮಾರ್ಕಂಡೆ ಮತ್ತು ಕಮ್ಮಿನ್ಸ್ ತಲಾ ಒಂದು ವಿಕೆಟ್ ಪಡೆದರು.
ಗುರಿ ಬೆನ್ನಟ್ಟಿದ ಹೈದರಾಬಾದ್ ಸ್ಪೋಟಕ ಆಟಗಾರ ಟ್ರಾವಿಸ್ ಹೆಡ್ ಅವರ ವಿಕೆಟ್ ಆರಂಭದಲ್ಲೇ ಕಳೆದುಕೊಂಡಿತು. 1 ರನ್ ಗಳಿಸಿ ಹೆಡ್ ಮರಳಿದರು. ಅಬ್ಬರಿಸಲು ಆರಂಭಿಸಿದ ಅಭಿಷೇಕ್ ಶರ್ಮ 31 ರನ್(13 ಎಸೆತ) ಗಳಿಸಿದ್ದ ವೇಳೆ ಔಟಾದರು.7 ರನ್ ಗಳಿಸಿದ್ದ ಮಾರ್ಕ್ರಾಮ್ ಅವರನ್ನು ಸ್ವಪ್ನಿಲ್ ಸಿಂಗ್ ಎಲ್ಬಿಡಬ್ಲ್ಯೂ ಬಲೆಗೆ ಬೀಳಿಸಿದರು. ನಿತೀಶ್ ರೆಡ್ಡಿ 13 ರನ್ ಗಳಿಸಿ ಔಟಾದರು. ಹೆನ್ರಿಚ್ ಕ್ಲಾಸೆನ್ 7, ನಾಯಕ ಪ್ಯಾಟ್ ಕಮ್ಮಿನ್ಸ್ 31(15 ಎಸೆತ) ಗಳಿಸಿ ಔಟಾದರು. ಭುವನೇಶ್ವರ್ ಕುಮಾರ್ 13 ರನ್ ಗಳಿಸಿ ನಿರ್ಗಮಿಸಿದರು. ಶಹಬಾಜ್ ಅಹಮದ್ ಔಟಾಗದೆ 40, ಉನದ್ಕತ್ 8 ರನ್ ಗಳಿಸಿದರು. 8 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಲಷ್ಟೇ ಶಕ್ತವಾಯಿತು.
ಕರ್ಣ್ ಶರ್ಮ, ಸ್ವಪ್ನಿಲ್ ಸಿಂಗ್, ಗ್ರೀನ್ ತಲಾ 2, ಯಶ್ ದಯಾಳ್ 1 ವಿಕೆಟ್ ಪಡೆದರು.