Advertisement
ಪಂಜಾಬ್ ಕಿಂಗ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅಬ್ಬರಿಸಿದ ಕೆಕೆಆರ್ 6 ವಿಕೆಟಿಗೆ 261 ರನ್ ಪೇರಿಸಿ ದೊಡ್ಡ ಸವಾಲೊಡ್ಡಿತು.ಗುರಿ ಬೆನ್ನತ್ತಿದ ಪಂಜಾಬ್ 18.4 ಓವರ್ ಗಳಲ್ಲಿ 2ವಿಕೆಟ್ ನಷ್ಟಕ್ಕೆ 262 ರನ್ ಗಳಿಸಿ ಅತ್ಯಮೋಘ ಸ್ಮರಣೀಯ ಜಯದ ದಾಖಲೆ ಬರೆಯಿತು. ಬೈರ್‌ಸ್ಟೋ ಔಟಾಗದೆ 108 ರನ್ ಗಳಿಸಿದರು. 48 ಎಸೆತಗಳಲ್ಲಿ ಗೆಲುವಿನ ಇನ್ನಿಂಗ್ಸ್ ಕಟ್ಟಿದ ಅವರು 8 ಬೌಂಡರಿ ಮತ್ತು 9 ಭರ್ಜರಿ ಸಿಕ್ಸರ್ ಸಿಡಿಸಿದ್ದರು. ಪ್ರಭ್ ಸಿಮ್ರಾನ್ ಸಿಂಗ್ 20 ಎಸೆತಗಳಲ್ಲಿ 54 ರನ್ ಗಳಿಸಿ ರನ್ ಔಟ್ ಆದರು. ರಿಲೀ ರೋಸೌ 26 ರನ್ ಗಳಿಸಿ ಔಟಾದರೆ, ಶಶಾಂಕ್ ಸಿಂಗ್ ಔಟಾಗದೆ 28 ಎಸೆತಗಳಲ್ಲಿ 68 ರನ್ ಚಚ್ಚಿದರು. 2 ಬೌಂಡರಿ ಮತ್ತು 8 ಭರ್ಜರಿ ಸಿಕ್ಸರ್ ಬಾರಿಸಿದರು.ಐಪಿಎಲ್‌ನಲ್ಲಿ ಗರಿಷ್ಠ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿದ ದಾಖಲೆ ಪಂಜಾಬ್ ಬರೆಯಿತು. ಈ ಹಿಂದೆ 2020 ರಲ್ಲಿ ಶಾರ್ಜಾದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಪಂಜಾಬ್ ನೀಡಿದ್ದ 224 ರನ್ ಯಶಸ್ವಿಯಾಗಿ ಬೆನ್ನತ್ತಿ ಗೆಲುವು ಸಾಧಿಸಿತ್ತು.
Related Articles
Advertisement
ರಸೆಲ್ ಸಿಕ್ಸರ್ ದಾಖಲೆಆ್ಯಂಡ್ರೆ ರಸೆಲ್ ಕೆಕೆಆರ್ ಪರ 200 ಸಿಕ್ಸರ್ ಬಾರಿಸಿದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾದರು. ನಿತೀಶ್ ರಾಣಾ 106 ಸಿಕ್ಸರ್‌ಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ. ಕೆಕೆಆರ್ ಈ ಪಂದ್ಯದಲ್ಲಿ 18 ಸಿಕ್ಸರ್ ಸಿಡಿಸಿತು. ತನ್ನ ಸರ್ವಾಧಿಕ ಸಿಕ್ಸರ್‌ಗಳ ದಾಖಲೆಯನ್ನು ಸರಿದೂಗಿಸಿತು. ಮೊನ್ನೆ ಡೆಲ್ಲಿ ವಿರುದ್ಧವೂ 18 ಸಿಕ್ಸರ್ ಬಾರಿಸಿತ್ತು. ಮಿಚೆಲ್ ಸ್ಟಾರ್ಕ್ ಗಾಯಾಳು
ಕೆಕೆಆರ್ ವೇಗಿ ಮಿಚೆಲ್ ಮಾರ್ಷ್ ಕೈಬೆರಳಿನ ನೋವಿನಿಂದ ಈ ಪಂದ್ಯದಿಂದ ಹೊರಗುಳಿದರು. ಇವರ ಬದಲು ದುಷ್ಮಂತ ಚಮೀರ ಆಡಲಿಳಿದರು.