Advertisement
ಪಂಜಾಬ್ ಮತ್ತು ಮುಂಬೈ ತಲಾ 6 ಪಂದ್ಯಗಳ ನ್ನಾಡಿದ್ದು, ಎರಡರಲ್ಲಷ್ಟೇ ಜಯ ಸಾಧಿಸಿವೆ. ನಾಲ್ಕರಲ್ಲಿ ಸೋತಿವೆ. ಪಂಜಾಬ್ ರನ್‌ರೇಟ್‌ನಲ್ಲಿ ತುಸು ಮುಂದಿ ರುವ ಕಾರಣ 7ನೇ ಸ್ಥಾನದಲ್ಲಿದೆ. ಮುಂಬೈ 8ನೇ ಸ್ಥಾನಿ ಯಾಗಿದೆ. ಪ್ಲೇ ಆಫ್ ಪ್ರವೇಶ ಲಭಿಸಬೇಕಾದರೆ ಎರಡೂ ತಂಡಗಳು ಇಲ್ಲಿಂದ ಮೊದಲ್ಗೊಂಡು ಸಾಧ್ಯವಾದಷ್ಟು ಹೆಚ್ಚು ಗೆಲುವನ್ನು ಸಾಧಿಸಬೇಕಿದೆ. ಹೀಗಾಗಿ ಎರಡೂ ತಂಡಗಳ ಮೇಲೆ ಭಾರೀ ಪ್ರಮಾಣದ ಒತ್ತಡವಿದೆ.
ಚಾಂಪಿಯನ್ ಚೆನ್ನೈ ವಿರುದ್ಧ ವಾಂಖೇಡೆಯಲ್ಲೇ ಮುಗ್ಗರಿಸಿರುವ ಮುಂಬೈ ಭಾರೀ ಒತ್ತಡದಲ್ಲಿದೆ. ಮಾಜಿ ನಾಯಕ ರೋಹಿತ್ ಶರ್ಮ ಅವರೇನೋ ಶತಕ ಬಾರಿಸಿ ಸೇಫ್ ಝೋನ್‌ನಲ್ಲಿದ್ದಾರೆ. ಆದರೆ ಇಶಾನ್ ಕಿಶನ್, ಸೂರ್ಯಕುಮಾರ್ ಮಿಶ್ರ ಫಲ ಅನುಭವಿಸುತ್ತಿದ್ದಾರೆ. ತಿಲಕ್ ವರ್ಮ, ಟಿಮ್ ಡೇವಿಡ್ ಕೂಡ ಇದೇ ಸಾಲಿನಲ್ಲಿದ್ದಾರೆ. ರೊಮಾರಿಯೊ ಶೆಫರ್ಡ್ ಅಬ್ಬರ ಒಂದೇ ಪಂದ್ಯಕ್ಕೆ ಸೀಮಿತಗೊಂಡಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಹಾರ್ದಿಕ್ ಪಾಂಡ್ಯ ಅವರ ನಾಯ ಕತ್ವದ ಮೇಲೆ ಯಾರಿಗೂ ಸಮಾಧಾನ ವಿದ್ದಂತಿಲ್ಲ. ಸ್ವತಃ ಪಾಂಡ್ಯ ಕೂಡ ಕೆಲವು ಎಡವಟ್ಟು ನಿರ್ಧಾರಗಳಿಂದ ಹೊಡೆತ ಅನುಭವಿಸುತ್ತಿದ್ದಾರೆ. ಉದಾಹರಣೆಗೆ, ಚೆನ್ನೈ ವಿರುದ್ಧ ಕೊನೆಯ ಓವರ್ ಎಸೆದದ್ದು, ಶ್ರೇಯಸ್ ಗೋಪಾಲ್‌ಗೆ ಒಂದೇ ಓವರ್ ನೀಡಿದ್ದು… ಇತ್ಯಾದಿ.ಬೌಲಿಂಗ್‌ನಲ್ಲಿ ಬುಮ್ರಾ, ಕೋಟ್ಜಿ ಮತ್ತು ಮಧ್ವಾಲ್ ಪರಿ ಣಾಮ ಬೀರುತ್ತಿದ್ದಾರೆ. ಅದೃಷ್ಟ ತಾರದ ಅಂಗಳ
ಪಂಜಾಬ್‌ಗೆ ಇದು ತವರಿನ ಅಂಗಳವಾದರೂ ಈವರೆಗೆ ಅದೃಷ್ಟವನ್ನು ಮೊಗೆದು ಕೊಟ್ಟಿಲ್ಲ. ರಾಜಸ್ಥಾನ್ ವಿರುದ್ಧ ಇಲ್ಲಿ ಆಡಿದ ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿ 3 ವಿಕೆಟ್‌ಗಳ ಸೋಲಿಗೆ ತುತ್ತಾಗಿತ್ತು. ನಾಯಕ ಧವನ್ ಗೈರಲ್ಲಿ ಆಡಲಿಳಿದ ಪಂಜಾಬ್‌ಗೆ ಗಳಿ ಸಲು ಸಾಧ್ಯವಾದದ್ದು 8 ವಿಕೆಟಿಗೆ 147 ರನ್ ಮಾತ್ರ.
Related Articles
Advertisement
ಪಂಜಾಬ್ ಬೌಲಿಂಗ್ ಈವರೆಗೆ ಘಾತಕವಾಗಿ ಪರಿಣಮಿ ಸಿಲ್ಲ. ಮುಲ್ಲಾನ್‌ಪುರ್ ಟ್ರ್ಯಾಕ್ ನಿಧಾನ ಗತಿ ಹೊಂದಿರುವ ಕಾರಣ ಇಲ್ಲಿ ಬೌಲರ್‌ಗಳಿಗೆ ಯಶಸ್ಸು ಅಧಿಕ. ರಬಾಡ, ಅರ್ಷದೀಪ್, ಕರನ್, ಬ್ರಾರ್ ಅದೆಂಥ ಮ್ಯಾಜಿಕ್ ಮಾಡಬಲ್ಲರು ಎಂಬುದನ್ನು ಕಾದು ನೋಡಬೇಕಿದೆ.