Advertisement

ಕಳಪೆ ಪ್ರದರ್ಶನಕ್ಕೆ ಐಪಿಎಲ್‌ ಕಾರಣವಲ್ಲ: ಗೌತಮ್‌ ಗಂಭೀರ್‌

07:36 PM Nov 03, 2021 | Team Udayavani |

ಹೊಸದಿಲ್ಲಿ: ಟಿ20 ವಿಶ್ವಕಪ್‌ನಲ್ಲಿ ಟೀಮ್‌ ಇಂಡಿಯಾ ಆಟಗಾರರು ನೀಡುತ್ತಿರುವ ಕಳಪೆ ಪ್ರದರ್ಶನಕ್ಕೆ ಐಪಿಎಲ್‌ ಪಂದ್ಯಾವಳಿಯನ್ನು ದೂಷಿಸುವುದು ಸರಿಯಲ್ಲ ಎಂದು ಮಾಜಿ ಆಟಗಾರ ಗೌತಮ್‌ ಗಂಭೀರ್‌ ಹೇಳಿದ್ದಾರೆ.

Advertisement

ಮೊದಲೆರಡು ಪಂದ್ಯಗಳಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಭಾರತ, ಎದುರಾಳಿ ವಿರುದ್ಧ ಯಾವ ಹಂತದಲ್ಲಿಯೂ ಮೇಲುಗೈ ಸಾಧಿಸುವ ಹಂತವನ್ನು ತಲುಪಿರಲಿಲ್ಲ. ಈ ಎರಡು ದೊಡ್ಡ ಸೋಲುಗಳ ಬಳಿಕ ಟೀಮ್‌ ಇಂಡಿಯಾ ಆಟಗಾರರ ಕಳಪೆ ಪ್ರದರ್ಶನಕ್ಕೆ ಐಪಿಎಲ್‌ ಪಂದ್ಯಾವಳಿಯೇ ಕಾರಣ, ಈ ದುಡ್ಡಿನ ಕೂಟವನ್ನು ರದ್ದು ಮಾಡುವಂತೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು.

ಗೆಲ್ಲುವ ಬಗ್ಗೆ ಯೋಚಿಸಬೇಕು
ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಗಂಭೀರ್‌, “ಟೀಮ್‌ ಇಂಡಿಯಾ ಆಟಗಾರರ ಕಳಪೆ ಪ್ರದರ್ಶನಕ್ಕೆ ಐಪಿಎಲ್‌ ಕೂಟವನ್ನು ದೂಷಿಸುವುದು ತಪ್ಪು ಆಟಗಾರರು ನೆಟ್‌ ರನ್‌ರೇಟ್‌ ಬಗ್ಗೆ ಚಿಂತಿಸುವ ಬದಲು ಗೆಲ್ಲುವ ಬಗ್ಗೆ ಯೋಚಿಸಬೇಕಿದೆ’ ಎಂದರು.

ಇದನ್ನೂ ಓದಿ:ಟಿ20: ಪಾಕ್ ನಾಯಕ ಬಾಬರ್ ಅಜಮ್ ನಂ.1 ; ಹಸರಂಗಾ ನಂ.1 ಬೌಲರ್

“ಭಾರತೀಯ ಕ್ರಿಕೆಟ್‌ನಲ್ಲಿ ಇಂಥ ಸಂದರ್ಭ ಎದುರಾದಾಗಲೆಲ್ಲ ನೇರವಾಗಿ ಐಪಿಎಲ್‌ ಅನ್ನು ದೂಷಿಸಲಾಗುತ್ತದೆ. ಇದು ಬಹಳ ತಪ್ಪು. ಉಳಿದ ತಂಡಗಳು ನಿಮಗಿಂತ ಉತ್ತಮ ಆಟವನ್ನು ಆಡುತ್ತಿವೆ ಎಂಬುದನ್ನು ಒಪ್ಪಿಕೊಳ್ಳಬೇಕು. ಐಪಿಎಲ್‌ನಿಂದ ಭಾರತಕ್ಕೆ ಒಳ್ಳೆಯ ಆಟಗಾರರು ದೊರಕ್ಕಿದ್ದನ್ನು ಮರೆಯುವಂತಿಲ್ಲ. ಆದ್ದರಿಂದ ಆಟಗಾರರ ವೈಫ‌ಲ್ಯಕ್ಕೆ ಐಪಿಎಲ್‌ ಕಾರಣ ಎಂಬುದು ತಪ್ಪಾಗುತ್ತದೆ’ ಎಂದು ಗಂಭೀರ್‌ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next