ಲಕ್ನೋ: ಇಲ್ಲಿನ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ರವಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 33 ರನ್‌ಗಳ ಜಯ ಸಾಧಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಲಕ್ನೋ ಸೂಪರ್ ಜೈಂಟ್ಸ್ 5 ವಿಕೆಟ್ ನಷ್ಟಕ್ಕೆ 163 ರನ್ ಗಳ ಸಾಧಾರಣ ಮೊತ್ತ ಗಳಿಸಿತು. ಗುರಿ ಬೆನ್ನಟ್ಟಿದ ಗುಜರಾತ್ ಬಿಗಿ ದಾಳಿಗೆ ನಲುಗಿ 18.5 ಓವರ್ ಗೆ 130 ಕ್ಕೆ ಆಟ ಮುಗಿಸಿತು. ಯಶ್ ಠಾಕೂರ್ 30ಕ್ಕೆ 5 ವಿಕೆಟ್ ಕಿತ್ತು ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. 1 ಮೇಡನ್ ಓವರ್ ಕೂಡ ಎಸೆದು ಘಾತಕವಾಗಿ ಪರಿಣಮಿಸಿದರು. ಬಿಗಿ ದಾಳಿ ನಡೆಸಿದ ಕೃನಾಲ್ ಪಾಂಡ್ಯ ಕೂಡ 11 ಕ್ಕೆ 3 ವಿಕೆಟ್ ಪಡೆದು ಗುಜರಾತ್ ಪಾಲಿಗೆ ಸಿಂಹಸ್ವಪ್ನರಾಗಿ ಕಾಡಿದರು. ರವಿ ಬಿಷ್ನೋಯಿ ಮತ್ತು ನವೀನ ಉಲ್ ಹಕ್ ತಲಾ ಒಂದು ವಿಕೆಟ್ ಪಡೆದರು.
ಲಕ್ನೋ ಆಡಿದ 4 ಪಂದ್ಯದಲ್ಲಿ ಮೊದಲ ಸೋಲು ಅನುಭವಿಸಿತು. ಗುಜರಾತ್ ಆಡಿದ 5 ಪಂದ್ಯಗಳಲ್ಲಿ ಇದು 3 ನೇ ಸೋಲಾಗಿದೆ.
ಲಕ್ನೋ ನಾಯಕ ರಾಹುಲ್ 33ರನ್ (31ಎಸೆತ) ಡಿ ಕಾಕ್ 6 ಮತ್ತು ಪಡಿಕ್ಕಲ್ 7 ರನ್ ಗೆ ಔಟಾಗಿ ವೈಫಲ್ಯ ಅನುಭವಿಸಿದರು. ಸ್ಟೊಯಿನಿಸ್ 58, ಪೂರನ್ ಔಟಾಗದೆ 32, ಆಯುಷ್ ಬದೋನಿ 20 ರನ್ ಗಳಿಸಿದರು.
ಗುಜರಾತ್ ನಾಯಕ ಶುಭಮನ್ ಗಿಲ್ 19, ಸಾಯಿ ಸುದರ್ಶನ್ 31, ಕೇನ್ ವಿಲಿಯಮ್ಸನ್ 1, ಶರತ್ ಬಿಆರ್ 2, ವಿಜಯ್ ಶಂಕರ್ 17, ದರ್ಶನ್ ನಲ್ಕಂಡೆ 12, ರಾಹುಲ್ ತೆವಾಟಿಯಾ 30, ರಶೀದ್ ಖಾನ್ 0, ಉಮೇಶ್ ಯಾದವ್ 2, ನೂರ್ ಅಹ್ಮದ್ 4 ರನ್ ಗಳಿಸಿದರು. ನಿರೀಕ್ಷಿತ ಮಟ್ಟದ ಬ್ಯಾಟಿಂಗ್ ತೋರದ ಕಾರಣ ಅನಿರೀಕ್ಷಿತ ಸೋಲು ಅನುಭವಿಸಬೇಕಾಯಿತು. 12 ರನ್ ಇತರೆ ರೂಪದಲ್ಲಿ ಲಕ್ನೋ ಬೌಲರ್ ಗಳು ನೀಡಿದ್ದರು.