Advertisement

ಅಹ್ಮದಾಬಾದ್‌ನಲ್ಲಿ IPL ಫೈನಲ್‌: ಚೆನ್ನೈಯಲ್ಲಿ ಕ್ವಾಲಿಫೈಯರ್‌-1, ಎಲಿಮಿನೇಟರ್‌

12:20 AM Apr 22, 2023 | Team Udayavani |

ಹೊಸದಿಲ್ಲಿ: ಸತತ ಎರಡನೇ ವರ್ಷವೂ ಐಪಿಎಲ್‌ ಫೈನಲ್‌ ಪಂದ್ಯದ ಆತಿಥ್ಯ ಅಹ್ಮದಾಬಾದ್‌ನ “ನರೇಂದ್ರ ಮೋದಿ ಸ್ಟೇಡಿಯಂ’ಗೆ ಒಲಿದಿದೆ. ಜತೆಗೆ ಇಲ್ಲಿ ಕ್ವಾಲಿಫೈಯರ್‌-2 ಪಂದ್ಯವನ್ನೂ ಆಡಲಾಗುವುದು. ಮೇ 26ರಂದು ಕ್ವಾಲಿಫೈಯರ್‌-2 ಹಾಗೂ ಮೇ 28ರಂದು ಫೈನಲ್‌ ಹಣಾಹಣಿ ನಡೆಯಲಿದೆ.

Advertisement

ಬಿಸಿಸಿಐ ಶುಕ್ರವಾರ ಐಪಿಎಲ್‌ ಪ್ಲೇ ಆಫ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿತು. ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ಕ್ವಾಲಿಫೈಯರ್‌-1 (ಮೇ 23) ಮತ್ತು ಎಲಿಮಿನೇಟರ್‌ (ಮೇ 24) ಪಂದ್ಯಗಳು ನಡೆಯಲಿವೆ. 16ನೇ ಐಪಿಎಲ್‌ ಪಂದ್ಯಾವಳಿ ಎ. 31ರಂದು ಅಹ್ಮದಾಬಾದ್‌ನಲ್ಲೇ ಆರಂಭಗೊಂಡಿತ್ತು. ಮೇ 21ರಂದು ಆರ್‌ಸಿಬಿ-ಗುಜರಾತ್‌ ನಡುವಿನ ಬೆಂಗಳೂರು ಪಂದ್ಯದೊಂದಿಗೆ ಈ ವರ್ಷದ ಲೀಗ್‌ ಹಣಾಹಣಿ ಕೊನೆಗೊಳ್ಳಲಿದೆ.

ಕಳೆದ ವರ್ಷದ ಫೈನಲ್‌ ಆತಿಥ್ಯವೂ ವಿಶ್ವದ ಈ ಬೃಹತ್‌ ಕ್ರೀಡಾಂಗಣಕ್ಕೆ ಒಲಿದಿತ್ತು. ಪ್ಲೇ ಆಫ್ ಪಂದ್ಯಗಳ ಮತ್ತೂಂದು ತಾಣವಾಗಿ ಕೋಲ್ಕತಾವನ್ನು ಆರಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next