ಬೆಂಗಳೂರು: ಮುಂದಿನ ವರ್ಷದ ಐಪಿಎಲ್ ಗಾಗಿ ಫ್ರಾಂಚೈಸಿಗಳು ತನ್ನ ತಂಡದಲ್ಲಿ ಉಳಿಯುವ ಹಾಗೂ ರಿಲೀಸ್ ಆಗುವ ಆಟಗಾರರ ಪಟ್ಟಿ ಅನೌನ್ಸ್ ಮಾಡಲು ಭಾನುವಾರ(ನ.26 ರಂದು) ಕೊನೆಯ ದಿನವಾಗಿದೆ. ಆ ನಿಟ್ಟಿನಲ್ಲಿ ಆರ್ ಸಿಬಿ ತಂಡ ಆಲ್ ರೌಂಡರ್ ಆಟಗಾರನನ್ನು ತಂಡಕ್ಕೆ ಸೇರಿಸಿಕೊಂಡಿದೆ.
ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡ ತನ್ನ ತಂಡದ ಆಟಗಾರರನ್ನು ವಿನಿಮಯ ಮಾಡಿಕೊಂಡಿದೆ.
2020 ರಿಂದ ಬೆಂಗಳೂರು ತಂಡದಲ್ಲಿದ್ದ ಆಲ್ ರೌಂಡರ್ ಶಹಬಾಜ್ ಅಹಮದ್ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಟ್ರೇಡ್ ಆಗಿದ್ದಾರೆ. ಇತ್ತ ಬೆಂಗಳೂರು ತಂಡಕ್ಕೆ ಹೈದರಾಬಾದ್ ನಲ್ಲಿದ್ದ ಮಯಾಂಕ್ ಡಗರ್ ಬಂದಿದ್ದಾರೆ.
ಶಹಬಾಜ್ ಅಹಮದ್ ಇಲ್ಲಿಯವರೆಗೆ 39 ಪಂದ್ಯಗಳನ್ನು ಆಡಿದ್ದಾರೆ ಮತ್ತು 3/7 ರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ.
ಮಯಾಂಕ್ ಡಗರ್ ಹೈದರಾಬಾದ್ ತಂಡಕ್ಕಿಂತ ಮೊದಲು ಪಂಜಾಬ್ ತಂಡದಲ್ಲಿದ್ದರು. 2023 ರಲ್ಲಿ ಅವರು 3 ಪಂದ್ಯಗಳನ್ನಾಡಿ 1 ವಿಕೆಟ್ ಪಡೆದಿದ್ದರು.
ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಅವೇಶ್ ಖಾನ್ ಮತ್ತು ದೇವದತ್ ಪಡಿಕ್ಕಲ್ ಅವರನ್ನು ವಿನಿಮಯ ಮಾಡಿಕೊಂಡ ಬಳಿಕ ಆದ ಎರಡನೇ ನೇರ ವಿನಿಮಯ ಇದಾಗಿದೆ.
ಮುಂದಿನ ತಿಂಗಳು ಆಟಗಾರರ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ.