ಇನ್ನೊಂದೆಡೆ ಹೈದರಾಬಾದ್ ಕಳೆದ ಪಂದ್ಯದಲ್ಲಿ ಚೆನ್ನೈ ಅಂಗಳದಲ್ಲಿ 7 ವಿಕೆಟ್‌ಗಳಿಂದ ಎಡವಿ ಗಾಯ ಮಾಡಿಕೊಂಡಿತ್ತು. ಇದನ್ನು ತವರಿನಂಗಳದಲ್ಲಿ ಉಪ ಶಮನ ಮಾಡಿಕೊಳ್ಳುವುದು ಐಡನ್ ಮಾರ್ಕ್‌ರಮ್ ಬಳಗದ ಗುರಿ.
Advertisement
ಆದರೆ ಈ ಎರಡೂ ತಂಡಗಳು ಬಹುತೇಕ ಒಂದೇ ದೋಣಿಯ ಪಯಣಿಗರೆಂಬುದನ್ನು ಮರೆ ಯುವಂತಿಲ್ಲ. ಡೆಲ್ಲಿ ಆರರಲ್ಲಿ ಒಂದನ್ನು ಗೆದ್ದು ಕೊನೆಯ ಸ್ಥಾನವನ್ನು ಖಾಯಂ ಮಾಡಿಕೊಂಡರೆ, ಹೈದರಾಬಾದ್ ಆರರಲ್ಲಿ ಎರಡನ್ನಷ್ಟೇ ಜಯಿಸಿ ಡೆಲ್ಲಿಗಿಂತ ಒಂದು ಮೆಟ್ಟಿಲು ಮೇಲಿದೆ. ಇನ್ನು ಸೋಲುತ್ತ ಹೋದ ತಂಡಕ್ಕೆ ಪ್ಲೇ ಆಫ್ ಬಾಗಿಲು ಮುಚ್ಚುವುದು ಖಚಿತ ಎಂಬುದು ಸದ್ಯದ ಲೆಕ್ಕಾಚಾರ. ಹೀಗಾಗಿ ಎರಡೂ ತಂಡಗಳಿಗೆ ಇದು ಪ್ರತಿಷ್ಠೆಯ ಕದನ.
ಸತತ 5 ಪಂದ್ಯಗಳನ್ನು ಕಳೆದುಕೊಂಡ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನ ಖಾತೆ ತೆರೆದರೂ ಇದೇನೂ ಅಧಿಕಾರಯುತ ಜಯವಾಗಿರಲಿಲ್ಲ. ಬಲಿಷ್ಠ ಕೆಕೆಆರ್ ತಂಡವನ್ನು 127ಕ್ಕೆ ಉದುರಿಸಿತಾದರೂ ಈ ಸಣ್ಣ ಮೊತ್ತವನ್ನು ಬೆನ್ನಟ್ಟುವಾಗ ಭಾರೀ ಪರದಾಟ ನಡೆಸಿತು. ಪಂದ್ಯ ಕೊನೆಯ ಓವರ್ ತನಕ ಸಾಗಿತು. ಗೆಲುವಿನ ಅಂತರ ಕೇವಲ 3 ವಿಕೆಟ್ ಆಗಿತ್ತು.
ನಾಯಕ ಡೇವಿಡ್ ವಾರ್ನರ್ ಒಂದೆಡೆ ಕ್ರೀಸ್ ಆಕ್ರಮಿಸಿಕೊಂಡು 57 ರನ್ ಮಾಡಿದ್ದರಿಂದ ಡೆಲ್ಲಿ ಈ ಗೆಲುವನ್ನು ಕಾಣುವಂತಾಯಿತು.