ಅಹಮದಾಬಾದ್: ಕೊನೆಗೂ ಕಾಯುವಿಕೆ ಮುಗಿದಿದೆ. 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫೈನಲ್ ಆರಂಭ ಕಂಡಿದೆ. ರವಿವಾರದ ಮಳೆಯ ಕಾರಣಕ್ಕೆ ಇಂದಿಗೆ ಮುಂದೂಡಿಕೆಯಾಗಿದ್ದ ಫೈನಲ್ ಪಂದ್ಯ ಆರಂಭವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಕಾದಾಟದಲ್ಲಿ ಟಾಸ್ ಗೆದ್ದ ಮಹೇಂದ್ರ ಸಿಂಗ್ ಧೋನಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿದೆ.
ರವಿವಾರ ಬಿಡದೆ ಸುರಿದಿದ್ದ ಮಳೆ ಸೋಮವಾರ ಬಿಡುವು ನೀಡಿದೆ. ಹೀಗಾಗಿ ಮೈದಾನ ತಯಾರಾಗಿದ್ದು, ಪೂರ್ಣ ಪಂದ್ಯ ನಡೆಯುವ ಸಾಧ್ಯತೆ ಹೆಚ್ಚಿದೆ.
ಹತ್ತನೇ ಬಾರಿಗೆ ಐಪಿಎಲ್ ಫೈನಲ್ ತಲುಪಿರುವ ಚೆನ್ನೈ ಸೂಪರ್ ಕಿಂಗ್ಸ್ ಐದನೇ ಟ್ರೋಫಿ ಗೆಲ್ಲುವ ಯೋಜನೆಯಲ್ಲಿದ್ದರೆ, ಎರಡು ವರ್ಷದಲ್ಲಿ ಸತತ ಎರಡನೇ ಫೈನಲ್ ಆಡುತ್ತಿರುವ ಗುಜರಾತ್ ಟ್ರೋಫಿ ಉಳಿಸಿಕೊಳ್ಳುವ ಇರಾದೆ ಹೊಂದಿದೆ.
ಇದನ್ನೂ ಓದಿ:ಅಳಿವಿನಂಚಿನಲ್ಲಿರುವ ಗೀಜಗದ ಹಕ್ಕಿ ಗೂಡುಗಳು… ಗೀಜಗದ ಹೆಣಿಕೆಗೆ ಸರಿಸಾಟಿ ಯಾರಿಲ್ಲ
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಂಬಾಟಿ ರಾಯುಡು ಇಂದು ತಮ್ಮ ಅಂತಿಮ ಐಪಿಎಲ್ ಪಂದ್ಯವಾಡುತ್ತಿದ್ದಾರೆ. ರಾಯುಡು ರವಿವಾರ ತಮ್ಮ ನಿವೃತ್ತಿ ಘೋಷಣೆ ಮಾಡಿದ್ದರು. ನಾಯಕ ಎಂ.ಎಸ್.ಧೋನಿ ತಮ್ಮ 250ನೇ ಐಪಿಎಲ್ ಪಂದ್ಯವಾಡುತ್ತಿದ್ದಾರೆ. ಇದು ಅವರ ಕೊನೆಯ ಪಂದ್ಯವಾಗಲೂ ಬಹುದು.
ತಂಡಗಳು
ಗುಜರಾತ್ ಟೈಟಾನ್ಸ್ : ವೃದ್ಧಿಮಾನ್ ಸಹಾ (ವಿ.ಕೀ), ಶುಬ್ಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹ್ಮದ್, ಮೊಹಮ್ಮದ್ ಶಮಿ
ಚೆನ್ನೈ ಸೂಪರ್ ಕಿಂಗ್ಸ್: ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಅಂಬಟಿ ರಾಯುಡು, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾ/ವಿ.ಕೀ), ದೀಪಕ್ ಚಾಹರ್, ಮಥೀಶ ಪತಿರಣ, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ