Advertisement

ಐಪಿಎಲ್‌ 2022: ಪಂಜಾಬ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ಗೆ 17 ರನ್‌ ಗೆಲುವು

12:12 AM May 17, 2022 | Team Udayavani |

ನವಿ ಮುಂಬಯಿ: ಆಲ್‌ರೌಂಡ್‌ ಆಟದ ಪ್ರದರ್ಶನ ನೀಡಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಸೋಮವಾರದ ಐಪಿಎಲ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವನ್ನು 17 ರನ್ನುಗಳಿಂದ ಸೋಲಿಸಿದೆ.

Advertisement

ಈ ಗೆಲುವಿನಿಂದ ಡೆಲ್ಲಿ ತಂಡವು ಆಡಿದ 13 ಪಂದ್ಯಗಳಿಂದ 7ರಲ್ಲಿ ಗೆಲುವು ದಾಖಲಿಸಿ 14 ಅಂಕ ಗಳಿಸಿದೆ. ಡೆಲ್ಲಿ ತಂಡವು ತನ್ನ ಅಂತಿಮ ಲೀಗ್‌ ಪಂದ್ಯದಲ್ಲಿ ಮುಂಬೈ ತಂಡವನ್ನು ಎದುರಿಸಲಿದ್ದು ಗೆದ್ದರೆ ಪ್ಲೇ ಆಫ್ ಗೆ ತೇರ್ಗಡೆಯಾಗುವ ಸಾಧ್ಯತೆಯಿದೆ. ಈ ಸೋಲಿನಿಂದ ಪಂಜಾಬ್‌ ಪ್ಲೇ ಆಫ್ ಗೆ ತೇರ್ಗಡೆಯಾಗುವುದು ಅನುಮಾನವಾಗಿದೆ.

ಅಕ್ಷರ್‌ ಪಟೇಲ್‌, ಶಾರ್ದೂಲ್ ಠಾಕೂರ್ ಮತ್ತು ಕುಲದೀಪ್‌ ಯಾದವ್‌ ಅವರ ಬಿಗು ದಾಳಿಗೆ ತತ್ತರಿಸಿದ ಪಂಜಾಬ್‌ ತಂಡವು ಆರಂಭದಲ್ಲಿಯೇ ಕುಸಿಯಿತು. ಈ ಕುಸಿತದಿಂದ ಚೇತರಿಸಿಕೊಳ್ಳಲು ವಿಫ‌ಲವಾದ ಪಂಜಾಬ್‌ ತಂಡವು ಅಂತಿಮವಾಗಿ 9 ವಿಕೆಟಿಗೆ 142 ರನ್‌ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು. ಈ ಮೊದಲು ಡೆಲ್ಲಿ ಕ್ಯಾಪಿಟಲ್ಸ್‌ ತಂಡವು 7 ವಿಕೆಟಿಗೆ 159 ರನ್‌ ಗಳಿಸಿತ್ತು.

ಬಿಗು ದಾಳಿ ಸಂಘಟಿಸಿದ ಶಾರ್ದೂಲ್ ಠಾಕೂರ್ 36 ರನ್ನಿಗೆ 4 ವಿಕೆಟ್‌ ಉರುಳಿಸಿದರು. ಅಕ್ಷರ್‌ ಪಟೇಲ್‌ ತನ್ನ 4 ಓವರ್‌ಗಳ ದಾಳಿಯಲ್ಲಿ ಕೇವಲ 14 ರನ್‌ ನೀಡಿ 2 ವಿಕೆಟ್‌ ಹಾರಿಸಿದರೆ ಕುಲದೀಪ್‌ ಯಾದವ್‌ 14 ರನ್ನಿಗೆ 2 ವಿಕೆಟ್‌ ಕಿತ್ತರು.

ಅಗ್ರಸ್ಥಾನದಲ್ಲಿ ಗುಜರಾತ್‌
ಆಡಿದ 13 ಪಂದ್ಯಗಳಲ್ಲಿ 10ರಲ್ಲಿ ಗೆದ್ದು 20 ಅಂಕ ಗಳಿಸಿರುವ ಗುಜರಾತ್‌ ಟೈಟಾನ್ಸ್‌ ಅಗ್ರಸ್ಥಾನದಲ್ಲಿದೆ. ಮಾತ್ರವಲ್ಲದೇ ಈಗಾಗಲೇ ಪ್ಲೇ ಆಫ್ಗೆ ತೇರ್ಗಡೆಯಾಗಿದೆ. ರಾಜಸ್ಥಾನ್‌ ಮತ್ತು ಲಕ್ನೋ ತಲಾ 16 ಅಂಕ ಗಳಿಸಿದ್ದು ಪ್ಲೇ ಆಫ್ ಗೆ ಬಹುತೇಕ ತೇರ್ಗಡೆಯಾಗುವ ಸಾಧ್ಯತೆಯಿದೆ. ಪ್ಲೇ ಆಫ್ನ ಇನ್ನೊಂದು ತಂಡಕ್ಕಾಗಿ ಬೆಂಗಳೂರು, ಡೆಲ್ಲಿ ಕೋಲ್ಕತಾ, ಪಂಜಾಬ್‌ ನಡುವೆ ಸ್ಪರ್ಧೆಯಿದೆ.

Advertisement

ನಿರ್ಣಾಯಕ ಪಂದ್ಯದ ಆರಂಭದಲ್ಲಿಯೇ ಡೆಲ್ಲಿ ಎಡವಿತು. ರನ್‌ ಖಾತೆ ತೆರೆಯುವ ಮೊದಲೇ ತಂಡ ಸ್ಫೋಟಕ ಖ್ಯಾತಿಯ ಡೇವಿಡ್‌ ವಾರ್ನರ್‌ ಅವರ ವಿಕೆಟನ್ನು ಕಳೆದುಕೊಂಡಿತು.

ಲಿವಿಂಗ್‌ಸ್ಟೋನ್‌ ಈ ವಿಕೆಟನ್ನು ಹಾರಿಸಿದ್ದರು. ಈ ಪಂದ್ಯದಲ್ಲಿ ಆಡಲು ಅವಕಾಶ ಪಡೆದ ಸರ್ಫರಾಜ್ ಖಾನ್‌ ಮತ್ತು ಮಿಚೆಲ್‌ ಮಾರ್ಷ್‌ ಪಂಜಾಬ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿ ದ್ವಿತೀಯ ವಿಕೆಟಿಗೆ 51 ರನ್‌ ಪೇರಿಸಿ ತಂಡವನ್ನು ಆರಂಭದ ಕುಸಿತದಿಂದ ಪಾರು ಮಾಡಿದರು. ಉತ್ತಮವಾಗಿ ಆಡುತ್ತಿದ್ದ ಸರ್ಫರಾಜ್ 32 ರನ್‌ ಗಳಿಸಿ ಅರ್ಷದೀಪ್‌ ಅವರ ಬೌಲಿಂಗ್‌ನಲ್ಲಿ ಔಟಾದರು.

ಪಂಜಾಬ್‌ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಮಿಚೆಲ್‌ ಮಾರ್ಷ್‌ ಆಕರ್ಷಕ ಅರ್ಧಶತಕ ದಾಖಲಿಸಿ ತಂಡವನ್ನು ಆಧರಿಸಿದರು. 48 ಎಸೆತ ಎದುರಿಸಿ 4 ಬೌಂಡರಿ ಮತ್ತು 3 ಸಿಕ್ಸರ್‌ ನೆರವಿನಿಂದ 63 ರನ್‌ ಗಳಿಸಿ ಔಟಾದರು. ಕೊನೆ ಹಂತದಲ್ಲಿ ಕೆಲವು ವಿಕೆಟ್‌ ಉರುಳಿದ ಕಾರಣ ತಂಡದ ರನ್‌ವೇಗಕ್ಕೆ ಕಡಿವಾಣ ಬಿತ್ತು. ಬಿಗು ದಾಳಿ ಸಂಘಟಿಸಿದ ಲಿವಿಂಗ್‌ಸ್ಟೋನ್‌ ಮತ್ತು ಅರ್ಷದೀಪ್‌ ತಲಾ ಮೂರು ವಿಕೆಟ್‌ ಕಿತ್ತರು. ರಾಹುಲ್‌ ಚಹರ್‌ ವಿಕೆಟ್‌ ಪಡೆಯದಿದ್ದರೂ ತನ್ನ 4 ಓವರ್‌ಗಳ ದಾಳಿಯಲ್ಲಿ ಕೇವಲ 19 ರನ್‌ ಬಿಟ್ಟುಕೊಟ್ಟು ಗಮನ ಸೆಳೆದರು.

ಡೆಲ್ಲಿ: ಎರಡು ಬದಲಾವಣೆ
ಈ ಪಂದ್ಯಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್‌ ಎರಡು ಬದಲಾವಣೆ ಮಾಡಿಕೊಂಡಿದೆ. ಖಲೀಲ್‌ ಅಹ್ಮದ್‌ ಮತ್ತು ಸರ್ಫರಾಜ್ ಖಾನ್‌ ಅವರು ಚೇತನ್‌ ಸಕಾರಿಯ ಮತ್ತು ಕೆಎಸ್‌ ಭರತ್‌ ಅವರ ಬದಲಿಗೆ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಪಂಜಾಬ್‌ ಕಿಂಗ್ಸ್‌ ತನ್ನ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಸ್ಕೋರ್‌ ಪಟ್ಟಿ
ಡೆಲ್ಲಿ ಕ್ಯಾಪಿಟಲ್ಸ್‌
ಡೇವಿಡ್‌ ವಾರ್ನರ್‌ ಸಿ ಚಹರ್‌ ಬಿ ಲಿವಿಂಗ್‌ಸ್ಟೋನ್‌ 0
ಸರ್ಫರಾಜ್ ಖಾನ್‌ ಸಿ ಚಹರ್‌ ಬಿ ಅರ್ಷದೀಪ್‌ 32
ಮಿಚೆಲ್‌ ಮಾರ್ಷ್‌ ಸಿ ರಿಶಿ ಬಿ ರಬಾಡ 63 ಲಲಿತ್‌ ಯಾದವ್‌ ಸಿ ರಾಜಪಕ್ಷ ಬಿ ಅರ್ಷದೀಪ್‌ 24
ರಿಷಬ್‌ ಪಂತ್‌ ಸ್ಟಂಪ್ಡ್ ಶರ್ಮ ಬಿ ಲಿವಿಂಗ್‌ಸ್ಟೋನ್‌ 7
ಪೊವೆಲ್‌ ಸಿ ಶಿಖರ್‌ ಬಿ ಲಿವಿಂಗ್‌ಸ್ಟೋನ್‌ 2
ಅಕ್ಷರ್‌ ಪಟೇಲ್‌ ಔಟಾಗದೆ 17
ಶಾರ್ದೂಲ್ ಠಾಕೂರ್ ಸಿ ಬ್ರಾರ್‌ ಬಿ ಅರ್ಷದೀಪ್‌ 3
ಕುಲದೀಪ್‌ ಯಾದವ್‌ ಔಟಾಗದೆ 2
ಇತರ: 9
ಒಟ್ಟು (20 ಓವರ್‌ಗಳಲ್ಲಿ 7 ವಿಕೆಟಿಗೆ) 159
ವಿಕೆಟ್‌ ಪತನ: 1-0, 2-51, 3-98, 4-107, 5-112, 6-149, 7-154
ಬೌಲಿಂಗ್‌: ಲಿಯಮ್‌ ಲಿವಿಂಗ್‌ಸ್ಟೋನ್‌ 4-0-27-3
ಕಾಗಿಸೊ ರಬಾಡ 3-0-24-1
ಹರ್‌ಪ್ರೀತ್‌ ಬ್ರಾರ್‌ 3-0-29-0
ರಿಶಿ ಧವನ್‌ 2-0-17-0
ಅರ್ಷದೀಪ್‌ ಸಿಂಗ್‌ 4-0-37-3
ರಾಹುಲ್‌ ಚಹರ್‌ 4-0-19-0

ಪಂಜಾಬ್‌ ಕಿಂಗ್ಸ್‌
ಜಾನಿ ಬೇರ್‌ಸ್ಟೋ ಸಿ ಪಟೇಲ್‌ ಬಿ ನೋರ್ಜೆ 28
ಶಿಖರ್‌ ಧವನ್‌ ಸಿ ಪಂತ್‌ ಬಿ ಠಾಕೂರ್ 19
ಭನುಕ ರಾಜಪಕ್ಷ ಸಿ ನೋರ್ಜೆ ಬಿ ಠಾಕೂರ್ 4
ಲಿವಿಂಗ್‌ಸ್ಟೋನ್‌ ಸ್ಟಂಪ್ಡ್ ಪಂತ್‌ ಬಿ ಕುಲದೀಪ್‌ 3
ಎಂ. ಅಗರ್ವಾಲ್‌ ಬಿ ಪಟೇಲ್‌ 0
ಜಿತೇಶ್‌ ಶರ್ಮ ಸಿ ವಾರ್ನರ್‌ ಬಿ ಠಾಕೂರ್ 44
ಹರ್‌ಪ್ರೀತ್‌ ಬ್ರಾರ್‌ ಬಿ ಕುಲದೀಪ್‌ 1
ರಿಶಿ ಧವನ್‌ ಬಿ ಪಟೇಲ್‌ 4
ರಾಹುಲ್‌ ಚಹರ್‌ ಔಟಾಗದೆ 25
ಕಾಗಿಸೊ ರಬಾಡ ಸಿ ಪೊವೆಲ್‌ ಬಿ ಠಾಕೂರ್ 6
ಅರ್ಷದೀಪ್‌ ಸಿಂಗ್‌ ಔಟಾಗದೆ 2 ಇತರ: 6
ಒಟ್ಟು (20 ಓವರ್‌ಗಳಲ್ಲಿ 9 ವಿಕೆಟಿಗೆ) 142
ವಿಕೆಟ್‌ ಪತನ: 1-38, 2-53, 3-54, 4-55, 5-61, 6-67, 7-82, 8-123, 9-131
ಬೌಲಿಂಗ್‌: ಖಲೀಲ್‌ ಅಹ್ಮದ್‌ 4-0-43-0
ಆ್ಯನ್ರಿಚ್‌ ನೋರ್ಜೆ 4-0-29-1
ಲಲಿತ್‌ ಯಾದವ್‌ 1-0-6-0
ಶಾರ್ದೂಲ್ ಠಾಕೂರ್ 4-0-36-4
ಅಕ್ಷರ್‌ ಪಟೇಲ್‌ 4-0-14-2
ಕುಲದೀಪ್‌ ಯಾದವ್‌ 3-0-14-2
ಪಂದ್ಯಶ್ರೇಷ್ಠ: ಶಾರ್ದೂಲ್ ಠಾಕೂರ್

Advertisement

Udayavani is now on Telegram. Click here to join our channel and stay updated with the latest news.

Next