Advertisement

ಶರ್ಮಾ ಅರ್ಧ ಶತಕ; ಕೊನೆಯಲ್ಲಿ ಮಿಂಚಿದ ಪೊಲಾರ್ಡ್; ರಾಹುಲ್ ಬಳಗಕ್ಕೆ 192  ಗೆಲುವಿನ ಗುರಿ

09:37 PM Oct 01, 2020 | mahesh |

ಅಬುಧಾಬಿ: ಮುಂಬೈ ಇಂಡಿಯನ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಐಪಿಎಲ್ ಟಿ20 ಲೀಗ್ ಪಂದ್ಯಾಟದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಗೆ 192 ರನ್ ಗುರಿ ಲಭಿಸಿದೆ.

Advertisement

ಕಪ್ತಾನ ರೋಹಿತ್ ಶರ್ಮಾ ಸೊಗಸಾದ ಅರ್ಧಶತಕ ಪೊಲಾರ್ಡ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ಗಳನ್ನು ಕಳೆದುಕೊಂಡು 191 ರನ್ ಗಳಿಸಿತು.

ಟಾಸ್ ಗೆದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ಕಪ್ತಾನ ಕೆ.ಎಲ್. ರಾಹುಲ್ ಮುಂಬೈ ಇಂಡಿಯನ್ಸ್ ತಂಡವನ್ನು ಬ್ಯಾಟಿಂಗ್ ಗೆ ಇಳಿಸಿದರು. ಮೊದಲ ಓವರ್ ನಲ್ಲಿ ಕ್ವಿಂಟನ್ ಡಿ ಕಾಕ್ ರನ್ ಗಳಿಸದೆ ತಮ್ಮ ವಿಕೆಟ್ ನೀಡಿ ನಿರ್ಗಮಿಸುದರೊಂದಿಗೆ ಆಘಾತವನ್ನು ನೀಡಿದರು.

ನಾಯಕ ರೋಹಿತ್ ಶರ್ಮ (70) ಜವಾಬ್ದಾರಿಯುತ ಬ್ಯಾಟಿಂಗ್ ನಿಂದ ತಂಡಕ್ಕೆ ಆಸರೆಯಾದರು. ಕೊನೆಯಲ್ಲಿ ಮಿಂಚಿದ ಹಾರ್ದಿಕ್ ಪಾಂಡ್ಯ ಹಾಗೂ ಕೀರನ್ ಪೊಲಾರ್ಡ್ ಅವರ ಸಾಹಸದಿಂದ ಮುಂಬೈ ಇಂಡಿಯನ್ಸ್ 20 ಓವರ್ ಗಳಲ್ಲಿ 191 ರನ್ ಗಳಿಸಿತು.

5000 ರನ್‌ ಗಡಿದಾಟಿದ ರೋಹಿತ್‌
ಐಪಿಎಲ್‌ ಇತಿಹಾಸದಲ್ಲಿ 5000 ರನ್‌ ಗಡಿದಾಟಿದ ಮೂರನೇ ಕ್ರಿಕೆಟಿಗ ರೋಹಿತ್‌ ಶರ್ಮ. ಅವರು ಗುರುವಾರ ಪಂಜಾಬ್‌ ವಿರುದ್ಧ ಈ ಮೈಲುಗಲ್ಲು ಸಾಧಿಸಿದರು. ಇದಕ್ಕಾಗಿ ಅವರು ಬಳಸಿಕೊಂಡ ಇನಿಂಗ್ಸ್‌ಗಳ ಸಂಖ್ಯೆ 187. ಇದಕ್ಕೂ ಮುನ್ನ ಈ ಸಾಧನೆ ಮಾಡಿದ ವಿರಾಟ್‌ ಕೊಹ್ಲಿ 157 ಇನಿಂಗ್ಸ್‌, ಸುರೇಶ್‌ ರೈನಾ 173 ಇನಿಂಗ್ಸ್‌ ಬಳಸಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next