Advertisement

ಸ್ಟೀವ್‌ ಸ್ಮಿತ್‌ ಜಾಗಕ್ಕೆ ಕ್ಲಾಸೆನ್‌ ಆಯ್ಕೆ ಖಚಿತ

07:00 AM Apr 02, 2018 | Team Udayavani |

ಜೈಪುರ: ಚೆಂಡು ವಿರೂಪ ಪ್ರಕರಣದಿಂದ ಐಪಿಎಲ್‌ನಲ್ಲೂ ಸ್ಥಾನ ಕಳೆದುಕೊಂಡಿರುವ ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವ್‌ ಸ್ಮಿತ್‌ ಜಾಗಕ್ಕೆ ರಾಜಸ್ಥಾನ ರಾಯಲ್ಸ್‌ ತಂಡ ದ.ಆಫ್ರಿಕಾದ ಹೆನ್ರಿಚ್‌ ಕ್ಲಾಸೆನ್‌ರನ್ನು ಆಯ್ಕೆ ಮಾಡಿದೆ. ಇದನ್ನು ರಾಜಸ್ಥಾನ್‌ ನಾಯಕ ಅಜಿಂಕ್ಯ ರಹಾನೆ ಅವರು ಖಚಿತಪಡಿಸಿದ್ದಾರೆ. 

Advertisement

ಕ್ಲಾಸೆನ್‌ ಅವರು ಭಾರತ ತಂಡ ದ.ಆಫ್ರಿಕಾ ಪ್ರವಾಸ ಮಾಡುವವರೆಗೆ ಅಪರಿಚಿತ ಆಟಗಾರನಾಗಿದ್ದರು. ಕ್ವಿಂಟನ್‌ ಡಿ ಕಾಕ್‌ ಗಾಯಗೊಂಡಾಗ ಬದಲೀ ಆಟಗಾರರಾಗಿ ಬಂದ ಅವರು ಮಿಂಚಿ ಆಫ್ರಿಕಾ ಗೆಲುವಿಗೆ ಕಾರಣವಾಗಿದ್ದರು. ಅದೇ ಅವರನ್ನು ಆಯ್ಕೆ ಮಾಡಿಕೊಳ್ಳಲು ರಾಜಸ್ಥಾನಕ್ಕೆ ಪ್ರೇರಣೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next