Advertisement

ರಾತ್ರಿ 2 ಗಂಟೆ ತನಕ ಕ್ರಿಕೆಟ್‌: ನೈಲ್‌ ಅಸಮಾಧಾನ

03:45 AM May 19, 2017 | |

ಬೆಂಗಳೂರು: ರಾತ್ರಿ 2 ಗಂಟೆ ತನಕ ಕ್ರಿಕೆಟ್‌ ಆಡುವುದರಲ್ಲಿ ಅರ್ಥವಿಲ್ಲ, ಐಪಿಎಲ್‌ಗೆ ನಿಯಮವನ್ನು ಬದಲಿಸಲು ಇದು ಸೂಕ್ತ ಸಮಯ ಎಂದು ಕೆಕೆಆರ್‌ನ ಪಂದ್ಯಶ್ರೇಷ್ಠ ವೇಗಿ ನಥನ್‌ ಕೋಲ್ಟರ್‌ ನೈಲ್‌ ಸ್ವಲ್ಪ ಖಡಕ್‌ ಆಗಿ ಹೇಳಿದ್ದಾರೆ.

Advertisement

“ರಾತ್ರಿ 12.30ರ ವೇಳೆ ಅಂಪಾಯರ್‌ಗಳು ಅಂಗಳ ಪರಿಶೀಲನೆಗೆಂದು ಹೋದಾಗ ಯಾರೂ ನರ್ವಸ್‌ ಆಗಿರಲಿಲ್ಲ. ನಮ್ಮ ತಂಡದ ಎಲ್ಲರಿಗೂ ಆಡುವುದು ಅನಿವಾರ್ಯವಾಗಿತ್ತು. ಆಗ ಸಾಕಷ್ಟು ಸಮಯವೂ ಇತ್ತು. ಆದರೂ ಐಪಿಎಲ್‌ ನಿಯಮಾವಳಿಯಲ್ಲಿ ಪರಿವರ್ತನೆಯ ಅಗತ್ಯವಿದೆ. ರಾತ್ರಿ 2 ಗಂಟೆ ತನಕ ಕ್ರಿಕೆಟ್‌ ಆಡುವುದನ್ನು ಯಾವ ಆಟಗಾರನೂ ಬಯಸಲಾರ’ ಎಂದು ಆಸೀಸ್‌ ವೇಗಿ ಆಭಿಪ್ರಾಯಪಟ್ಟರು.

ಈ ಪಂದ್ಯದಲ್ಲಿ 4 ಓವರ್‌ಗಳ ಬಿಗಿಯಾದ ಬೌಲಿಂಗ್‌ ದಾಳಿ ಸಂಘಟಿಸಿದ ಕೋಲ್ಟರ್‌ ನೈಲ್‌ ಸಾಧನೆ 20 ರನ್ನಿಗೆ 3 ವಿಕೆಟ್‌. ವಿಲಿಯಮ್ಸನ್‌, ವಿಜಯ್‌ ಶಂಕರ್‌ ಮತ್ತು ಜೋರ್ಡನ್‌ ಅವರಿಗೆ ಪೆವಿಲಿಯನ್‌ ಹಾದಿ ತೋರಿಸಿದರು. ಈ ಸಾಧನೆಗಾಗಿ ಪಂದ್ಯಶ್ರೇಷ್ಠ ಗೌರವವೂ ಅವರಿಗೆ ಒಲಿಯಿತು.

“ನಮ್ಮ ಬೌಲಿಂಗ್‌ ಪಡೆ ಉತ್ತಮ ಅದೃಷ್ಟವನ್ನು ಹೊಂದಿತ್ತು. ಕೆಲವು ಲಕ್ಕಿ ವಿಕೆಟ್‌ಗಳು ನಮ್ಮ ಪಾಲಾದವು. ಒಟ್ಟಾರೆಯಾಗಿ ನಾವೆಲ್ಲ ಸೇರಿ ಅಮೋಘ ಮಟ್ಟದ ದಾಳಿ ಸಂಘಟಿಸಿದೆವು. ಕಳೆದ ಕೆಲವು ದಿನಗಳಿಂದ ನನ್ನ ಆರೋಗ್ಯ ಸರಿ ಇರಲಿಲ್ಲ. ಸಿಕ್ಕಾಪಟ್ಟೆ ಸುಸ್ತಾಗಿದ್ದೆ. ಆದರೆ ಬೆಳಗ್ಗೆ ಎದ್ದಾಗ ಹೆಚ್ಚು ನಿರಾಳನಾಗಿದ್ದಂತೆ ಕಂಡುಬಂತು. ಹೀಗಾಗಿ ಈ ಪಂದ್ಯದಲ್ಲಿ ಆಡುವಂತಾಯಿತು…’ ಎಂದು ಕೋಲ್ಟರ್‌ ನೈಲ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next