Advertisement

ಮತ್ತೆ ಎಡವಿದ ಆರ್‌ಸಿಬಿ; ಚಾಂಪಿಯನ್‌ ಹೈದರಾಬಾದ್‌ ಗೆಲುವಿನ ಆರಂಭ

12:29 AM May 05, 2022 | Team Udayavani |

2016ರ ಫೈನಲಿಸ್ಟ್‌ಗಳಾದ ಸನ್‌ರೈಸರ್ ಹೈದರಾಬಾದ್‌ ಮತ್ತು ರಾಯಲ್‌ ಚಾಲೆಂಜರ್ ಬೆಂಗಳೂರೂ ತಂಡಗಳೇ 2017ರ ಉದ್ಘಾಟನಾ ಪಂದ್ಯದಲ್ಲಿ ಎದುರಾದುದೊಂದು ವಿಶೇಷ. ತಾಣ: ಹೈದರಾಬಾದ್‌ನ “ರಾಜೀವ್‌ ಗಾಂಧಿ ಇಂಟರ್‌ನ್ಯಾಶನಲ್‌ ಸ್ಟೇಡಿಯಂ’.

Advertisement

ಫ‌ಲಿತಾಂಶದಲ್ಲೇನೂ ಬದಲಾವಣೆ ಆಗಲಿಲ್ಲ. ಚಾಂಪಿಯನ್‌ ಹೈದರಾಬಾದ್‌ ಗೆಲುವಿನ ಆರಂಭ ಪಡೆಯಿತು. ಆರ್‌ಸಿಬಿ ಮತ್ತೆ ಸೋತಿತು. ಅಂತರ 35 ರನ್‌. ಬೆಂಗಳೂರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ನಡೆದ 2016ರ ಫೈನಲ್‌ನಲ್ಲಿ ಹೈದರಾಬಾದ್‌ 8 ರನ್ನುಗಳ ರೋಚಕ ಜಯ ಸಾಧಿಸಿತ್ತು. 2017ರ ಆರಂಭ ಅದರ ಮುಂದುವರಿದ ಭಾಗದಂತಿತ್ತು.

ಕೂಟದ ಮೊದಲ ಪಂದ್ಯವೇ ದೊಡ್ಡ ಮೊತ್ತದ ಮೇಲಾಟವಾಗಿತ್ತು. ಹೈದರಾಬಾದ್‌ ನಾಲ್ಕೇ ವಿಕೆಟಿಗೆ 207 ರನ್‌ ಬಾರಿಸಿದರೆ, ಆರ್‌ಸಿಬಿ 19.4 ಓವರ್‌ಗಳಲ್ಲಿ 172ಕ್ಕೆ ಆಲೌಟಾಯಿತು.

ಹೈದರಾಬಾದ್‌ ಸರದಿಯಲ್ಲಿ ಇಬ್ಬರಿಂದ ಅರ್ಧ ಶತಕ ದಾಖಲಾಯಿತು. ಯುವರಾಜ್‌ ಸಿಂಗ್‌ ಬರೀ 27 ಎಸೆತಗಳಿಂದ ಸರ್ವಾಧಿಕ 62 ರನ್‌ ಬಾರಿಸಿದರು. ಇದರಲ್ಲಿ 7 ಫೋರ್‌, 3 ಸಿಕ್ಸರ್‌ ಸೇರಿತ್ತು. ಮೊಸಸ್‌ ಹೆನ್ರಿಕ್ಸ್‌ 37 ಎಸೆತ ಎದುರಿಸಿ 52 ರನ್‌ ಕೊಡುಗೆ ಸಲ್ಲಿಸಿದರು (3 ಬೌಂಡರಿ, 2 ಸಿಕ್ಸರ್‌). ಓಪನರ್‌ ಶಿಖರ್‌ ಧವನ್‌ ಅವರಿಂದ 40 ರನ್‌ ಕೊಡುಗೆ ಸಂದಾಯವಾಯಿತು. ಆರ್‌ಸಿಬಿ ಬೌಲಿಂಗ್‌ ಸರದಿಯಲ್ಲಿ ಯಜುವೇಂದ್ರ ಚಹಲ್‌ ಹೊರತುಪಡಿಸಿ ಯಾರೂ ಪರಿಣಾಮ ಬೀರಲಿಲ್ಲ.

ಬೆಂಗಳೂರು ತಂಡದ ಆರಂಭ ಬಿರುಸಿನಿಂದಲೇ ಕೂಡಿತ್ತು. ಕ್ರಿಸ್‌ ಗೇಲ್‌-ಮನ್‌ದೀಪ್‌ ಸಿಂಗ್‌ ಹತ್ತರ ಸರಾಸರಿಯಲ್ಲಿ ರನ್‌ ಪೇರಿಸತೊಡಗಿದರು. 5.4 ಓವರ್‌ಗಳಿಂದ 52 ರನ್‌ ಹರಿದು ಬಂತು. ಗೇಲ್‌ 21 ಎಸೆತಗಳಿಂದ 32 ರನ್‌ ಹೊಡೆದರು. ಇದೇ ಆರ್‌ಸಿಬಿ ಸರದಿಯ ಗರಿಷ್ಠ ವೈಯಕ್ತಿಕ ಗಳಿಕೆಯಾಗಿತ್ತು.

Advertisement

ಕೊಹ್ಲಿ ಗಾಯಾಳು, ರಶೀದ್‌ ಪದಾರ್ಪಣೆ
ಮನ್‌ದೀಪ್‌ 24, ಹೆಡ್‌ 30, ಕೇದಾರ್‌ ಜಾಧವ್‌ 31, ನಾಯಕ ಶೇನ್‌ ವಾಟ್ಸನ್‌ 22 ರನ್‌ ಮಾಡಿದರು. ಆದರೆ ಹೈದರಾಬಾದ್‌ ಬ್ಯಾಟಿಂಗ್‌ಗೆ ಆರ್‌ಸಿಬಿ ಸಾಟಿಯಾಗಲೇ ಇಲ್ಲ. ಭುಜದ ನೋವಿನಿಂದಾಗಿ ವಿರಾಟ್‌ ಕೊಹ್ಲಿ ಈ ಪಂದ್ಯ ಆಡಿರಲಿಲ್ಲ.

ಇದು ಲೆಗ್‌ಸ್ಪಿನ್ನರ್‌ ರಶೀದ್‌ ಖಾನ್‌ಗೆ ಮೊದಲ ಐಪಿಎಲ್‌ ಪಂದ್ಯವಾಗಿತ್ತು. ಇದರಲ್ಲಿ ಇವರ ಸಾಧನೆ 36ಕ್ಕೆ 2 ವಿಕೆಟ್‌. ಹೆಡ್‌ ಮತ್ತು ಮನ್‌ದೀಪ್‌ ವಿಕೆಟ್‌ ರಶೀದ್‌ ಪಾಲಾಯಿತು. ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದ ಯುವರಾಜ್‌ ಸಿಂಗ್‌ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು.

ಸ್ಕೋರ್‌ ಪಟ್ಟಿ
ಸನ್‌ರೈಸರ್ ಹೈದರಾಬಾದ್‌
ಡೇವಿಡ್‌ ವಾರ್ನರ್‌ ಸಿ ಮನ್‌ದೀಪ್‌ ಬಿ ಚೌಧರಿ 14
ಶಿಖರ್‌ ಧವನ್‌ ಸಿ ಬೇಬಿ ಬಿ ಬಿನ್ನಿ 40
ಮೊಸಸ್‌ ಹೆನ್ರಿಕ್ಸ್‌ ಸಿ ಬೇಬಿ ಬಿ ಚಹಲ್‌ 52
ಯುವರಾಜ್‌ ಸಿಂಗ್‌ ಬಿ ಮಿಲ್ಸ್‌ 62
ದೀಪಕ್‌ ಹೂಡಾ ಔಟಾಗದೆ 16
ಬೆನ್‌ ಕಟಿಂಗ್‌ ಔಟಾಗದೆ 16
ಇತರ 7
ಒಟ್ಟು (4 ವಿಕೆಟಿಗೆ) 207
ವಿಕೆಟ್‌ ಪತನ: 1-19, 2-93, 3-151, 4-190.
ಬೌಲಿಂಗ್‌:
ಟೈಮಲ್‌ ಮಿಲ್ಸ್‌ 4-0-31-1
ಅನಿಕೇತ್‌ ಚೌಧರಿ 4-0-55-1
ಯಜುವೇಂದ್ರ ಚಹಲ್‌ 4-0-22-1
ಎಸ್‌. ಅರವಿಂದ್‌ 3-0-36-0
ಶೇನ್‌ ವಾಟ್ಸನ್‌ 3-0-41-0
ಟ್ರ್ಯಾವಿಸ್‌ ಹೆಡ್‌ 1-0-11-0
ಸ್ಟುವರ್ಟ್‌ ಬಿನ್ನಿ 1-0-10-1

ರಾಯಲ್‌ ಚಾಲೆಂಜರ್ ಬೆಂಗಳೂರು

ಕ್ರಿಸ್‌ ಗೇಲ್‌ ಸಿ ವಾರ್ನರ್‌ ಬಿ ಹೂಡಾ 32
ಮನ್‌ದೀಪ್‌ ಸಿಂಗ್‌ ಬಿ ರಶೀದ್‌ 24
ಟ್ರ್ಯಾವಿಸ್‌ ಹೆಡ್‌ ಸಿ ಯುವರಾಜ್‌ ಬಿ ರಶೀದ್‌ 30
ಕೇದಾರ್‌ ಜಾಧವ್‌ ರನೌಟ್‌ 31
ಶೇನ್‌ ವಾಟ್ಸನ್‌ ಸಿ ಹೆನ್ರಿಕ್ಸ್‌ ಬಿ ನೆಹ್ರಾ 22
ಸಚಿನ್‌ ಬೇಬಿ ಸಿ ಹೆನ್ರಿಕ್ಸ್‌ ಬಿ ಬಿಪುಲ್‌ 1
ಸ್ಟುವರ್ಟ್‌ ಬಿನ್ನಿ ಸಿ ಯುವರಾಜ್‌ ಬಿ ಭುವನೇಶ್ವರ್‌ 11
ಶ್ರೀನಾಥ್‌ ಅರವಿಂದ್‌ ಬಿ ನೆಹ್ರಾ 0
ಟೈಮಲ್‌ ಮಿಲ್ಸ್‌ ಸಿ ವಾರ್ನರ್‌ ಬಿ ಭುವನೇಶ್ವರ್‌ 6
ಯಜುವೇಂದ್ರ ಚಹಲ್‌ ರನೌಟ್‌ 3
ಅನಿಕೇತ್‌ ಚೌಧರಿ ಔಟಾಗದೆ 6
ಇತರ 6
ಒಟ್ಟು (19.4 ಓವರ್‌ಗಳಲ್ಲಿ ಆಲೌಟ್‌) 172
ವಿಕೆಟ್‌ ಪತನ: 1-52, 2-60, 3-115, 4-126, 5-128, 6-154, 7-156, 8-156, 9-164.
ಬೌಲಿಂಗ್‌:
ಆಶಿಷ್‌ ನೆಹ್ರಾ 4-0-42-2
ಭುವನೇಶ್ವರ್‌ ಕುಮಾರ್‌ 4-0-27-2
ಬೆನ್‌ ಕಟಿಂಗ್‌ 3.4-0-35-0
ರಶೀದ್‌ ಖಾನ್‌ 4-0-36-2
ದೀಪಕ್‌ ಹೂಡಾ 1-0-7-1
ಮೊಸಸ್‌ ಹೆನ್ರಿಕ್ಸ್‌ 2-0-20-0
ಬಿಪುಲ್‌ ಶರ್ಮ 1-0-4-1
ಪಂದ್ಯಶ್ರೇಷ್ಠ: ಯುವರಾಜ್‌ ಸಿಂಗ್‌

Advertisement

Udayavani is now on Telegram. Click here to join our channel and stay updated with the latest news.

Next