Advertisement
ಪಂಜಾಬ್‌ಗ ಗೆಲುವು ಅಗತ್ಯಪಂಜಾಬ್ ಈಗಾಗಲೇ 10 ಪಂದ್ಯದಲ್ಲಿ 5 ಜಯ, 5 ಸೋಲಿನಿಂದ 10 ಅಂಕ ಸಂಪಾದಿಸಿದೆ. ಹೀಗಾಗಿ ಪ್ಲೇ ಆಫ್ ಹಾದಿ ಜೀವಂತವಾಗಿದೆ. ಒಮ್ಮೆ ಗುಜರಾತ್ ವಿರುದ್ಧ ಸೋತರೆ ಪ್ಲೇ ಆಫ್ ರೇಸ್‌ನಿಂದ ಬಹುತೇಕ ಹೊರಬಿದ್ದಂತೆ. ಕಳೆದ ಪಂದ್ಯದಲ್ಲಿ ಬೆಂಗಳೂರು ವಿರುದ್ಧ ಭರ್ಜರಿ ಜಯ ಸಾಧಿಸಿದ ಪಂಜಾಬ್ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ತಂಡದಲ್ಲಿ ಆಮ್ಲ, ಮ್ಯಾಕ್ಸ್‌ವೆಲ್, ಗಪ್ಟಿಲ್ ಅವರಂತಹ ದಿಗ್ಗಜ ಆಟಗಾರರಿದ್ದಾರೆ. ಬೌಲಿಂಗ್ ವೈಫಲ್ಯ ಎದುರಿಸುತ್ತಿದ್ದ ಪಂಜಾಜ್‌ಗೆ ಕಳೆದ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಅಕ್ಷರ್ ಪಟೇಲ್ ಮತ್ತು ಸಂದೀಪ್ ಶರ್ಮ ಯಶಸ್ವಿ ದಾಳಿ ನಡೆಸಿರುವುದು ತಂಡಕ್ಕೆ ಕೊಂಚ ನೆಮ್ಮದಿ ತಂದಿದೆ.
ಸುರೇಶ್ ರೈನಾ, ಬ್ರೆಂಡನ್ ಮೆಕಲಮ್, ದಿನೇಶ್ ಕಾರ್ತಿಕ್, ಫಿಂಚ್…ಅವರನ್ನು ಒಳಗೊಂಡ ಗುಜರಾತ್‌ನ ಬ್ಯಾಟಿಂಗ್ ವಿಭಾಗ ಭಾರೀ ಪ್ರಬಲವಾಗಿದೆ. ಬೌಲಿಂಗ್ ವಿಭಾಗದಲ್ಲಿ ರವೀಂದ್ರ ಜಡೇಜ ಬಂದ ಮೇಲೆ ಸುಧಾರಿಸಿಕೊಂಡಿದೆ. ಬಾಸಿಲ್ ಥಂಪಿ ಚುರುಕಿನ ದಾಳಿ ನಡೆಸುತ್ತಿದ್ದಾರೆ. ಆದರೆ ಸಂಘಟನಾತ್ಮಕ ಹೋರಾಟದ ಕೊರತೆ ಕಂಡುಬರುತ್ತಿದೆ. ಹೀಗಾಗಿ ಕೂಟದಲ್ಲಿ ಗೆಲುವಿಗಿಂತ ಸೋಲನ್ನೇ ಹೆಚ್ಚಿನದಾಗಿ ಕಂಡಿದೆ. ಬ್ಯಾಟಿಂಗ್ ವಿಭಾಗ ಬಲಾಡ್ಯವಾಗಿರುವುದರಿಂದ ಗುಜರಾತ್ ಅನ್ನು ಕಡೆಗಣಿಸಲಾಗದು.