ಅಬುಧಾಬಿ: ಐಪಿಎಲ್ 13ನೇ ಆವೃತ್ತಿಯ 8ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಸೆಣಸುತ್ತಿದ್ದು ಟಾಸ್ ಗೆದ್ದ ಡೇವಿಡ್ ವಾರ್ನರ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
ಇತ್ತಂಡಗಳೂ 17 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ 10 ಬಾರಿ ಕೆಕೆಆರ್ ಗೆಲುವು ಸಾಧಿಸಿದೆ. 7ರಲ್ಲಿ ಹೈದರಾಬಾದ್ ಜಯ ಗಳಿಸಿದೆ.
ಎರಡೂ ತಂಡಗಳೂ ಕೂಡ ಸೋಲಿನೊಂದಿಗೆ ಇನ್ನು ಈ ಆವೃತ್ತಿಯನ್ನು ಆರಂಭಗೊಳಿಸಿದ್ದು, ಇಂದಿನ ಪಂದ್ಯವನ್ನು ಸೋತವರ ನಡುವಿನ ಸೆಣಸು ಎಂದೇ ಪರಿಗಣಿಸಲಾಗಿದೆ.ಮೊದಲ ಪಂದ್ಯದಲ್ಲಿ ಹೈದರಾಬಾದ್ ಆರ್ ಸಿಬಿ ವಿರುದ್ಧ ಮುಗ್ಗರಿಸಿತ್ತು. ಕೆಕೆಆರ್ ಮುಂಬೈ ವಿರುದ್ಧ ಎಡವಿತ್ತು. ಹೀಗಾಗಿ ಎರಡೂ ತಂಡಗಳಿಗೂ ಇಂದು ಗೆಲ್ಲುವುದು ಅನಿವಾರ್ಯವಾಗಿದೆ.
ಆಡುವ ಹನ್ನೊಂದರ ಬಳಗ:
ಕೋಲ್ಕತಾ ನೈಟ್ ರೈಡರ್ಸ್: ಸುನಿಲ್ ನರೈನ್, ಶುಭ್ಮನ್ ಗಿಲ್, ದಿನೇಶ್ ಕಾರ್ತಿಕ್(ನಾಯಕ), ನಿತೀಶ್ ರಾಣಾ, ಇಯೊನ್ ಮೋರ್ಗಾನ್, ಆಂಡ್ರೆ ರಸ್ಸೆಲ್, ಪ್ಯಾಟ್ ಕಮ್ಮಿನ್ಸ್, ಕಮಲೇಶ್ ನಾಗರ್ಕೋಟಿ, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ಶಿವಂ ಮಾವಿ
ಸನ್ ರೈಸರ್ಸ್ ಹೈದರಾಬಾದ್: ಡೇವಿಡ್ ವಾರ್ನರ್ (ನಾಯಕ), ಜಾನಿ ಬೈರ್ಸ್ಟೋವ್, ಮನೀಶ್ ಪಾಂಡೆ, ಪ್ರಿಯಮ್ ಗರ್ಗ್, ಮೊಹಮ್ಮದ್ ನಬಿ, ವೃದ್ಧಿಮಾನ್ ಸಹಾ, ಅಭಿಷೇಕ್ ಶರ್ಮಾ, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಕೆ ಖಲೀಲ್ ಅಹ್ಮದ್, ಟಿ ನಟರಾಜನ್