Advertisement

ಉಚಿತ ಸಾಮೂಹಿಕ ವಿವಾಹಕ್ಕೆ ನೋಂದಣಿಗೆ ಆಹ್ವಾನ: ಶ್ರೀವೀರಭದ್ರ ಶಿವಾಚಾರ್ಯಸ್ವಾಮೀಜಿ

08:09 PM Apr 27, 2022 | Team Udayavani |

ಕೊರಟಗೆರೆ : ಸಿದ್ದರಬೆಟ್ಟ ರಂಭಾಪುರಿ ಖಾಸಾ ಶಾಖಾ ಮಠದ 16ನೇ ವಾರ್ಷಿಕೋತ್ಸವ ಅಂಗವಾಗಿ ೫೧ ಜೋಡಿಗಳ ಉಚಿತ ಸಾಮೂಹಿ ವಿವಾಹ ಏರ್ಪಡಿಸಿದ್ದು ವಿವಾಹವಾಗ ಬಯಸುವ ವಧು-ವರರು ಹಾಗೂ ಪೋಷಕರು ವಧೂ ವರರ ಮಾಹಿತಿಯೊಂದಿಗೆ ದಾಖಲಾತಿ ಜೂ.2  ರ ಒಳಗೆ ಶ್ರೀಮಠಕ್ಕೆ ನೀಡುವಂತೆ ಶ್ರೀ ವೀರಭದ್ರಶಿವಾಚಾರ್ಯಸ್ವಾಮೀಜಿಗಳು ಕೋರಿದ್ದಾರೆ.

Advertisement

ಅವರು ಪಟ್ಟಣದ ಬಸವೇಶ್ವರ ದೇವಾಲಯದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿ ಮಾತನಾಡಿ ಸದ್ಬಕ್ತರ ಆಶಯದೊಂದಿಗೆ ತಾಲೂಕಿನ ಸಿದ್ದರಬೆಟ್ಟದ ರಂಭಾಪುರಿ ಖಾಸಾ ಶಾಖಾ ಮಠ 16 ನೇ ವಾರ್ಷಿಕೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮ ಎಂದಿನಂತೆ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ 51 ಜೋಡಿಗಳಿಗೆ ಉಚಿತ ಸಮೂಹಿಕ ವಿವಾಹ ಏರ್ಪಡಿಸಿದ್ದು, ವಿವಾಹವಾಗ ಬಯಸುವ ವಧು -ವರರು ಅಧವಾ ಅವರ ಪರವಾಗಿ ಪೋಷಕರು ಸಾಮೂಹಿ ವಿವಾಹಕ್ಕೆ ಅರ್ಹ ದಾಖಲಾತಿಗೊಂದಿಗೆ ಜೂ. 2  ರ ಒಳಗೆ ಶ್ರೀ ಮಠದಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ತಿಳಿಸಿದ್ದಾರೆ.

ವಿವಾಹ ವಾಗುವ ವಧುವಿಗೆ 18  ವರ್ಷ ಮತ್ತು ವರನಿಗೆ 21  ವರ್ಷಗಳಾಗಿರಬೇಕು, ವಿವಾಹವಾಗುವ ನೂತನ ವಧೂ-ವರರಿಗೆ ಶ್ರೀಮಠದಿಂದ ಮಾಂಗಲ್ಯ ಮತ್ತು ಬಟ್ಟೆಗಳನ್ನು ನೀಡಲಾಗುವುದು, ವಧುವರರ ಪ್ರಥಮ ವಿವಾಹವಾಗಿರಬೇಕು, ಜನ್ಮ ದಿನಾಂಕದ ಶಾಲಾ ದಾಖಲಾತಿ, ತಂದೆ-ತಾಯಿಯರ ಒಪ್ಪಿಗೆ ಪತ್ರ, ವಾಸಸ್ಥಳ ದೃಢೀಕರಣ ಪ್ರಮಾಣ ಪತ್ರ ಸೇರಿದಂತೆ ಇನ್ನಿತರ ದಾಖಲಾಗಿ ಕಡ್ಡಾಯವಾಗಿ ನೋಂದಣಿ ಸಮಯದಲ್ಲಿ ನೀಡಬೇಕು, ಹೆಚ್ಚಿನ ಮಾಹಿತಿಗಾಗಿ ಶ್ರೀಮಠದ ಸಿದ್ದಗಿರಿ ನಂಜುಂಡಸ್ವಾಮಿ ರವರನ್ನು ನೇರವಾಗಿ ಅಥವಾ ದೂರವಾಣಿ ಸಂಖ್ಯೆ 9449698466 ಸಂಪರ್ಕಿಸುವಂತೆ ಕೋರಿದ್ದಾರೆ.

ಪತ್ರಿಕಾ ಗೊಷ್ಠಿಯಲ್ಲಿ ಪ.ಪಂ.ಸದಸ್ಯರಾದ ಎ.ಡಿ.ಬಲರಾಮಯ್ಯ, ಗ್ರಾ.ಪಂ.ಅಧ್ಯಕ್ಷ ಮಲ್ಲಣ್ಣ, ತಾಲೂಕು ವೀರಶ್ಯವ ಸಂಘದ ಅಧ್ಯಕ್ಷ ಸಿದ್ದಮಲ್ಲಯ್ಯ, ಬಿಜೆಪಿ ತಾಲೂಕು ಅಧ್ಯಕ್ಷ ಎಸ್.ಪವನ್‌ಕುಮಾರ್, ಆರ್ಯವೈಶ್ಯ ಮಂಡಲಿಯ ಸಮಪಂಗಿರಾಮಯ್ಯಶ್ರೇಷ್ಠಿ, ಫ್ರೆಂಡ್ಸ್ ಗ್ರೂಪ್ ಅಧ್ಯಕ್ಷ ರವಿಕುಮಾರ್, ಸಮುದಾಯದ ಮುಖಂಡರುಗಳಾದ ಪರ್ವತಯ್ಯ, ಸಿದ್ದಗಿರಿ ನಂಜುಂಡಸ್ವಾಮಿ, ಸೋಮಶೇಖರ್, ಗಿರೀಶ್, ನಟರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next