Advertisement

Udupi: ಪುತ್ತಿಗೆ ಶ್ರೀ ಪರ್ಯಾಯಕ್ಕೆ ಮುಖ್ಯಮಂತ್ರಿ, ಸಚಿವರಿಗೆ ಆಹ್ವಾನ

12:50 PM Dec 14, 2023 | Team Udayavani |

ಬೆಳಗಾವಿ: ಉಡುಪಿ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯ ಮಹೋ ತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತವಾಗಿ ಸಂಪುಟ ಸಚಿವರಿಗೆ ಪರ್ಯಾಯ ಸ್ವಾಗತ ಸಮಿತಿ ವತಿಯಿಂದ ಮಂಗಳವಾರ ಬೆಳಗಾವಿ ಯಲ್ಲಿ ಆಮಂತ್ರಣ ಪತ್ರ ನೀಡಿ ಆಹ್ವಾನಿಸಲಾಯಿತು.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಗೃಹ ಸಚಿವ ಡಾ| ಜಿ. ಪರಮೇಶ್ವರ್‌, ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್‌, ಸಚಿವರಾದ ಲಕ್ಷಿ$¾à ಹೆಬ್ಟಾಳ್ಕರ್‌, ಬೈರತಿ ಸುರೇಶ್‌, ಶಿವರಾಜ್‌ ತಂಗಡಿಗ, ಎಚ್‌.ಕೆ. ಪಾಟೀಲ್‌, ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಸೇರಿದಂತೆ ಹಾಗೂ ಸಚಿವರಿಗೆ ಆಮಂತ್ರಣ ಪತ್ರಿಕೆ ನೀಡಿ, ಆಹ್ವಾನ ನೀಡಲಾಯಿತು.
ಆಮಂತ್ರಣ ಸ್ವೀಕರಿಸಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು, ವಿಶ್ವಶಾಂತಿ ಸಮಿತಿಯ ಮೂಲಕ ಜಾಗತಿಕ ಶಾಂತಿಗಾಗಿ ಪುತ್ತಿಗೆ ಶ್ರೀಗಳು ನಡೆಸುತ್ತಿರುವ ಕಾರ್ಯಗಳು ಶ್ಲಾಘ ನೀಯವಾಗಿವೆ ಎಂದರು.

ಉಡುಪಿ ಪರ್ಯಾಯವನ್ನು ನಾಡ ಹಬ್ಬದ ಮಾದರಿಯಲ್ಲಿ ಆಚರಿಸು ವಂತೆ ಸಲಹೆ ನೀಡಿದ ಅವರು ಸರಕಾರದ ವತಿಯಿಂದ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುವುದು ಎಂದರು.
ಶಾಸಕರಾದ ಗುರ್ಮೆ ಸುರೇಶ್‌ ಶೆಟ್ಟಿ, ಯಶ್‌ಪಾಲ್‌ ಎ. ಸುವರ್ಣ, ಗುರುರಾಜ್‌ ಗಂಟಿಹೊಳೆ, ಸುನಿಲ್‌ ಕುಮಾರ್‌, ಕಿರಣ್‌ ಕುಮಾರ್‌ ಕೊಡ್ಗಿ ಹಾಗೂ ಪರ್ಯಾಯ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಕೆ. ರಘುಪತಿ ಭಟ್‌ ನೇತೃತ್ವದ ನಿಯೋಗದಲ್ಲಿ ಸಂಚಾಲಕ ಸಂತೋಷ್‌ ಪಿ. ಶೆಟ್ಟಿ ತೆಂಕರಗುತ್ತು, ಶರತ್‌ ಹೆಗ್ಡೆ ಬೆಳ್ಮಣ್‌, ಪ್ರವೀಣ್‌ ಶೆಟ್ಟಿ ಕಪ್ಪೆಟ್ಟು, ಕಿಶೋರ್‌ ಕುಮಾರ್‌ ಗುರ್ಮೆ, ಜಿ.ಎಸ್‌. ಕುಮಾರ ಗೌಡ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next