Advertisement

ರಾಷ್ಟ್ರೋತ್ಥಾನ ಪರಿಷತ್‌ನಿಂದ “ತಪಸ್‌”, “ಸಾಧನಾ” ಪ್ರವೇಶ ಪರೀಕ್ಷೆಗೆ ಆಹ್ವಾನ

10:55 PM Nov 30, 2023 | Team Udayavani |

ಬೆಂಗಳೂರು: ರಾಷ್ಟ್ರೋತ್ಥಾನ ಪರಿಷತ್‌ನ “ತಪಸ್‌” ಹಾಗೂ “ಸಾಧನಾ” ಯೋಜನೆಗೆ 2024-25ರ ಸಾಲಿನ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ. “ತಪಸ್‌’ನಲ್ಲಿ ಆರ್ಥಿಕವಾಗಿ ಹಿಂದುಳಿದ, ರಾಜ್ಯದ ಪ್ರತಿಭಾವಂತ ಬಾಲಕರಿಗೆ ಉಚಿತ ಊಟ, ವಸತಿ ಸಹಿತ ಪಿಯುಸಿ ಶಿಕ್ಷಣದ ಜತೆಗೆ ಐಐಟಿ-ಜೆಇಇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುವುದು. ಇದರಲ್ಲಿ ಆಯ್ಕೆಯಾದವರಿಗೆ ಬನಶಂಕರಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ 2 ವರ್ಷ ಶಿಕ್ಷಣ ನೀಡಲಾಗುತ್ತದೆ. ಬಡ ಹೆಣ್ಮಕ್ಕಳಿಗಾಗಿ ಜಾರಿಗೆ ತಂದಿರುವ “ಸಾಧನಾ’ ಯೋಜನೆಯಡಿ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ನಗರದ ಥಣಿಸಂದ್ರದಲ್ಲಿರುವ ರಾಷ್ಟ್ರೋತ್ಥಾನ ಪದವಿಪೂರ್ವ ಕಾಲೇಜಿನಲ್ಲಿ ಸಂಪೂರ್ಣ ಉಚಿತ ಶಿಕ್ಷಣ, ಎನ್‌ಇಇಟಿ ಹಾಗೂ ಸಿಇಟಿಗೆ ತರಬೇತಿ ನೀಡಲಾಗುತ್ತದೆ.

Advertisement

ಜತೆಗೆ ಶಿಕ್ಷಕರಾಗಲು ಬಯಸುವವರಿಗೆ ಒಟ್ಟು ಆರು ವರ್ಷಗಳ ಪಿಯುಸಿ, ಬಿಎಸ್‌ಸಿ, ಇಂಟಗ್ರೇಟೆಡ್‌ ಬಿಎಡ್‌ ಶಿಕ್ಷಣ ನೀಡಲಾಗುತ್ತದೆ. 9ನೇ ತರಗತಿಯಲ್ಲಿ ಕನಿಷ್ಠ ಶೇ.85 ಅಂಕ ಪಡೆದು 10ನೇ ತರಗತಿಯಲ್ಲಿ ಓದುತ್ತಿರುವವರು (ಕುಟುಂಬದ ವಾರ್ಷಿಕ ಆದಾಯ 2 ಲಕ್ಷ ರೂ.ಗಿಂತ ಕಡಿಮೆ ಇರಬೇಕು) https://www.tapassaadhana.org/ ಮೂಲಕ ಆನ್‌ಲೈನ್‌ನಲ್ಲಿ ಡಿ.10ರೊಳಗಾಗಿ 9ನೇ ತರಗತಿಯ ಅಂಕಪಟ್ಟಿ ಹಾಗೂ ವಿದ್ಯಾರ್ಥಿ/ ವಿದ್ಯಾರ್ಥಿನಿಯ ಭಾವಚಿತ್ರದೊಂದಿಗೆ ಅರ್ಜಿ ಸಲ್ಲಿಸಬಹುದು. ಮೊದಲ ಹಂತದ ಪ್ರವೇಶ ಪರೀಕ್ಷೆ ಡಿ.25 ಹಾಗೂ 2ನೇ ಹಂತದ ಪ್ರವೇಶ ಪರೀಕ್ಷೆ ಜ.26ರಂದು ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next