ಚಾಮರಾಜನಗರ: ಜಿಲ್ಲೆ ಸೇರಿದಂತೆ ಕರ್ನಾಟಕದ ರೈತರು ಬೆಳೆದ ಉತ್ಪನ್ನಗಳಿಗೆ ಸೂಕ್ತ ಬೆಲೆ ಒದಗಿಸಲು, ಬಾಯರ್ ಮತ್ತು ಕಾರ್ಗಿಲ್ ಸಂಸ್ಥೆಗಳು ರೈತರ ನಡುವೆ ಡಿಜಿಟಲ್ ಚರ್ಚಾ ವೇದಿಕೆ ಒದಗಿಸಲು ಆ್ಯಪ್ ಒಂದನ್ನು ಹೊರತಂದಿವೆ.
ಬಾಯರ್ ಸಂಸ್ಥೆ ಕಾರ್ಗಿಲ್ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಎಐ ಚಾಲಿತ ಸೇವಾ ವೇದಿಕೆ ಡಿಜಿಟಲ್ ಸಾಥಿ ಆ್ಯಪ್ ಅನ್ನು ವಿನ್ಯಾಸಗೊಳಿಸಲಾಗಿದೆ.
ಚಾಮರಾಜನಗರ ಜಿಲ್ಲೆ ಸೇರಿದಂತೆ ರಾಜ್ಯದ ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆಯನ್ನು ಒದಗಿಸುವ ಮೂಲಕ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಯನ್ನು ಉಂಟುಮಾಡುವ ಗುರಿಯನ್ನು ಡಿಜಿಟಲ್ ಸಾಥಿ ಹೊಂದಿದೆ. ಬಾಯರ್ ನ ಮೂಲಕ 5 ಲಕ್ಷಕ್ಕೂ ಅಧಿಕ ಸಣ್ಣ ಹಿಡುವಳಿದಾರರಿಗೆ ತಮ್ಮ ಉತ್ಪನ್ನಗಳ ಮಾರಾಟಕ್ಕೆ ಮಾರುಕಟ್ಟೆ ಒದಗಿಸುವ ಗುರಿ ಹೊಂದಲಾಗಿದೆ.
ಬಾಯರ್ ಮತ್ತು ಕಾರ್ಗಿಲ್ ಒಟ್ಟಾಗಿ ಚರ್ಚಾ ವೇದಿಕೆಗಳನ್ನು ರೂಪಿಸುವುದು, ಮಾರುಕಟ್ಟೆ ಬೆಲೆಗಳ ಸಮಗ್ರ ಮಾಹಿತಿ, ಹವಾಮಾನ ಮುನ್ಸೂಚನೆಗಳು ಮತ್ತು ಕೊಯ್ಲಿನ ನಂತರ ಕೈಗೊಳ್ಳಬಹುದಾದ ನೆರವನ್ನು ರೈತರಿಗೆ ಒದಗಿಸುತ್ತದೆ.
ಡಿಜಿಟಲ್ ಸಾಥಿಯಲ್ಲಿ ಈಗಾಗಲೇ 50,000 ಸಣ್ಣ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಇದು ಕನ್ನಡ, ಇಂಗ್ಲಿಷ್, ಮತ್ತು ಹಿಂದಿ ಭಾಷೆಗಳಲ್ಲಿ ಲಭ್ಯವಿದೆ. ಕರ್ನಾಟಕ ಮತ್ತು ಮಧ್ಯಪ್ರದೇಶ ರಾಜ್ಯಗಳ ರೈತರನ್ನು ಗಮನದಲ್ಲಿಟ್ಟುಕೊಂಡು ಇದನ್ನುವಿನ್ಯಾಸಗೊಳಿಸಲಾಗಿದೆ ಎಂದು ಕಾರ್ಗಿಲ್ ಸಂಸ್ಥೆ ತಿಳಿಸಿದೆ.