Advertisement

ನೀರವ್‌ ಮೋದಿಗೆ ರೆಡ್‌ ಕಾರ್ನರ್‌ ನೋಟಿಸ್‌

06:00 AM Jul 03, 2018 | Team Udayavani |

ಹೊಸದಿಲ್ಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಲ್ಲಿ ಅಕ್ರಮವಾಗಿ 13 ಸಾವಿರ ಕೋಟಿ ರೂ. ಸಾಲ ಪಡೆದು ತಲೆಮರೆಸಿಕೊಂಡಿರುವ ವಜ್ರ ವ್ಯಾಪಾರಿ ನೀರವ್‌ ಮೋದಿಗೆ ಇಂಟರ್‌ ಪೋಲ್‌, ರೆಡ್‌ ಕಾರ್ನರ್‌ ನೋಟಿಸ್‌ ಜಾರಿಗೊಳಿಸಿದೆ. ಮುಂಬೈ ವಿಶೇಷ ನ್ಯಾಯಾಲಯದಲ್ಲಿ ನೀರವ್‌ ಮೋದಿ ವಿರುದ್ಧ ಸಿಬಿಐ ಚಾರ್ಜ್‌ಶೀಟ್‌ ಸಲ್ಲಿಸಿದ್ದರಿಂದ ಅವರ ಬಂಧನಕ್ಕೆ ಜಾಮೀನುರಹಿತ ವಾರಂಟ್‌ ಜಾರಿಯಾಗಿತ್ತು. 

Advertisement

ವಿದೇಶಿ ಪ್ರವೇಶ ನಿರ್ಬಂಧ: ಈ ಹಿನ್ನೆಲೆಯಲ್ಲಿ ಸಿಬಿಐ ಕೋರಿಕೆ ಮೇರೆಗೆ ಅಂತಾರಾಷ್ಟ್ರೀಯ ಪೊಲೀಸ್‌ ಸಂಘಟನೆ ಸಂಸ್ಥೆಯು, 192 ರಾಷ್ಟ್ರಗಳಿಗೆ ನೀರವ್‌ ಮೋದಿ, ಆತನ ಸೋದರ ನಿಶಾಲ್‌ ಮೋದಿ, ಸಹೋದ್ಯೋಗಿ ಸುಭಾಷ್‌ ಪ್ರರಾಬ್‌ಗ ಪ್ರವೇಶ ನೀಡದಂತೆ ರೆಡ್‌ ಕಾರ್ನರ್‌ ನೋಟಿಸ್‌ ನೀಡಿದೆ.   

ದೇಶದಲ್ಲೇ ಅತಿ ದೊಡ್ಡ ಬ್ಯಾಂಕಿಂಗ್‌ ಅವ್ಯವಹಾರ ಎಂದೇ ಕುಖ್ಯಾತಿ ಪಡೆದಿರುವ ಪಿಎನ್‌ಬಿ ಹಗರಣದಲ್ಲಿ ಪ್ರಮುಖ ಆರೋಪಿಯಾಗಿರುವ ನೀರವ್‌ ಮೋದಿ, ಸ್ವದೇಶಕ್ಕೆ ಮರಳಿ ವಿಚಾರಣೆಗೆ ಹಾಜರಾಗಲು ಅನಾರೋಗ್ಯದ ನೆಪವೊಡ್ಡಿ ನಿರಾಕರಿಸಿದ್ದರು. ನೀರವ್‌ ಮೋದಿ ಇಂಗ್ಲೆಂಡ್‌ನ‌ಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದ್ದು, 2008ರಿಂದ 2017ರ ಅವಧಿಯೊಳಗೆ ನೀರವ್‌ 5 ಪಾಸ್‌ಪೋರ್ಟ್‌ ಪಡೆದಿದ್ದು, ಈ ಎಲ್ಲಾ ಮಾಹಿತಿಗಳನ್ನು ಇಂಟರ್‌ಪೋಲ್‌ ಕಲೆ ಹಾಕಿದೆ. ಹೀಗಾಗಿ ಅವರನ್ನು ಬಂಧಿಸಿ ಭಾರತಕ್ಕೆ ಕರೆ ತರುವ ಪ್ರಕ್ರಿಯೆ ಚುರುಕಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next