ಮಹಾನಗರ: ಅಂತಾರಾಷ್ಟ್ರೀಯ ಶುಶ್ರೂಷಕಿಯರ ದಿನಾಚರಣೆ ಅಂಗವಾಗಿ ಪಾಲ್ದನೆಯ ಸಂತ ತೆರೇಜಾ ಚರ್ಚ್‌ನಲ್ಲಿ ರವಿವಾರ ಚರ್ಚ್ ವ್ಯಾಪ್ತಿಯ ಶುಶ್ರೂಷಕಿಯರನ್ನು ಸ್ಮರಣಿಕೆ ನೀಡಿ ಸಮ್ಮಾನಿಸಲಾಯಿತು. ವಿಶ್ವದ ಪ್ರಥಮ ಶುಶ್ರೂಷಕಿ ಫ್ಲೋರೆನ್ಸ್ ನೈಟಿಂಗೇಲ್ ಅವರ ಬಗ್ಗೆ ಚರ್ಚ್ ಧರ್ಮಗುರು ವಂ| ವಿನ್ಸೆಂ ಟ್ ವಿಕ್ಟರ್ ಮಿನೇಜಸ್ ಅವರು ವಿವ ರಿಸಿ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಶುಶ್ರೂಷಕಿ
ಯರು ವಹಿಸುತ್ತಿರುವ ಪಾತ್ರವನ್ನು ಕೊಂಡಾಡಿದರು. ಪಾಲ್ದನೆ ಚರ್ಚ್ ವ್ಯಾಪ್ತಿಯ ಶುಶ್ರೂಷಕಿಯರಿಗೆ ಶುಭಾಶಯ ಸಲ್ಲಿಸಿದರು.
ಪಾಲ್ದನೆಯ ನರ್ಸ್‌ಗಳಾದ ಸಂಗೀತಾ ಕ್ರಾಸ್ತಾ, ಹೆಲೆನ್ ಲೋಬೊ, ಫ್ಲೇವಿ ಪಾಯ್ಸ, ಲವಿನಾ ಪಿಂಟೊ, ಬಬಿತಾ ಪಿರೇರಾ, ಜಾನೆಟ್ ಡಿ’ಸೋಜಾ, ವನಿತಾ ಮಥಾಯಸ್, ರೀಮಾ ಬ್ರ್ಯಾಗ್ಸ್, ಸಬೀನಾ ಮಿನೇಜಸ್, ಫ್ಲಾವಿಯಾ ಅಲ್ವಾರಿಸ್, ಜೆಸಿಂತಾ ವಾಲ್ಡರ್, ಟ್ರೀಜಾ ಡಿ’ಕುನ್ಹಾ, ಐರಿನ್ ಡಿ’ಮೆಲ್ಲೊ, ಜೆಸಿಂತಾ ಲೋನಾ ಮೆಂಡೊನ್ಸಾ, ವೀಣಾ ರೀಟಾ ಕ್ರಾಸ್ತಾ ಅವರನ್ನು ಗೌರವಿಸಲಾಯಿತು.
ಸಮಾರಂಭದಲ್ಲಿ ಮಂಗಳೂರು ಧರ್ಮ ಪ್ರಾಂತದ ಜ್ಯುಡೀಶಿಯಲ್ ವಿಕಾರ್ ರೆ| ಡಾ| ವಾಲ್ಟರ್ ಡಿ’ಮೆಲ್ಲೊ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ರೋಶನ್ ಲಸ್ರಾದೊ, ಕಾರ್ಯದರ್ಶಿ ವೀಣಾ ಲೋಬೊ ಅವರು ಉಪಸ್ಥಿತರಿದ್ದರು.