ಬೆಂಗಳೂರು: ಪ್ರಧಾನಿ ಮೋದಿ ಭಾಗಿಯಾಗಲಿರುವ ಮೈಸೂರು ಸಹಿತ ರಾಜ್ಯಾದ್ಯಂತ ಜೂ. 21ರಂದು ನಡೆಯ ಲಿರುವ ಅಂತಾರಾಷ್ಟ್ರೀಯ ಯೋಗ ದಿನಾ ಚರಣೆಯಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಮಂದಿ ಭಾಗಿಯಾಗಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಪಾಲುಗೊಳ್ಳಲಿದ್ದಾರೆ. ಉಡುಪಿಯಲ್ಲಿ 30 ಸಾವಿರ ಮಂದಿ ಭಾಗಿ ಯಾಗಲಿದ್ದಾರೆ. ಎಲ್ಲ ಜಿಲ್ಲಾ ಸ್ಥಳಗಳಲ್ಲೂ ಅಗತ್ಯ ಸಿದ್ಧತೆ ಮಾಡಿ ಕೊಳ್ಳಲಾಗಿದೆ. ಈ ಬಾರಿ ಎಲ್ಲ ಪಾರಂಪರಿಕ ತಾಣಗಳಲ್ಲಿ ಯೋಗ ನಡೆಯಲಿದೆ. ಹಂಪಿ, ಪಟ್ಟದಕಲ್ಲು, ಶ್ರೀರಂಗಪಟ್ಟಣ, ಮೈಸೂರು, ವಿಧುರಾಶ್ವತ್ಥ, ಮೂಡುಬಿದಿರೆಯ ಸಾವಿರ ಕಂಬದ ಬಸದಿ, ಅಂಜನಾದ್ರಿ, ಗೋಲ್‌ಗುಂಬಜ್ ಸಹಿತ ಪ್ರಮುಖ ಸ್ಥಳಗಳಲ್ಲಿ ಯೋಗ ನಡೆಯಲಿದೆ.
ಹಂಪಿಯ ವಿರೂಪಾಕ್ಷ ದೇಗುಲದ ಎದುರಿನಲ್ಲಿ ಯೋಗ ನಡೆಯುವುದು ವಿಶೇಷ. ಇಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಶ್ವಾಸಗುರು ವಚನಾನಂದ ಶ್ರೀಗಳು ಭಾಗಿಯಾಗಲಿದ್ದಾರೆ. ಶಿವಮೊಗ್ಗದಲ್ಲಿ ವಿಶೇಷ ಅಂಚೆ ಮುದ್ರೆ ಬಿಡುಗಡೆಯಾಗಲಿದೆ.
ಕೊಪ್ಪಳ ಜಿಲ್ಲೆಯ ಅಂಜನಾದ್ರಿಯಲ್ಲಿ ಪ್ರಮುಖ ಕಾರ್ಯಕ್ರಮ ನಡೆಯಲಿದೆ. ಬಾಗಲಕೋಟೆ ಜಿಲ್ಲೆಯ ಪಟ್ಟದಕಲ್ಲಿನಲ್ಲಿ, ಹಾವೇರಿಯ ಶಿಗ್ಗಾವಿ ತಾಲೂಕು ಬಾಡ ಗ್ರಾಮದ ಸಂತ ಕನಕದಾಸ ಅರಮನೆ ಆವ ರಣ, ಕವಿ ಸರ್ವಜ್ಞ ಅವರ ಜನ್ಮಸ್ಥಳದಲ್ಲಿ, ವಿಜಯಪುರದ ಗೋಲ್‌ಗುಂಬಜ್ ಮುಂಭಾಗದಲ್ಲಿ ಯೋಗ ಕಾರ್ಯಕ್ರಮ ನಡೆಯಲಿದೆ.
ಹಾಸನ ಜಿಲ್ಲೆಯ ಹಳೇಬೀಡಿನಲ್ಲಿ ನಡೆ ಯುವ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭಾಗಿಯಾಗಲಿದ್ದಾರೆ. ಚಿಕ್ಕಬಳ್ಳಾಪುರದ ವಿಧುರಾಶ್ವತ್ಥದಲ್ಲಿ ಮತ್ತು ನಂದಿಯ ಐತಿಹಾಸಿಕ ಶ್ರೀ ಭೋಗನಂದೀಶ್ವರ ಆವರಣ, ಚಿಂತಾಮಣಿಯ ಕೈವಾರದಲ್ಲಿ ಜನ ಸಾಮೂಹಿಕವಾಗಿ ಯೋಗಾಭ್ಯಾಸ ಮಾಡ ಲಿದ್ದಾರೆ. ಶ್ರೀರಂಗ ಪಟ್ಟಣದ ಶ್ರೀರಂಗನಾಥ ಸ್ವಾಮಿ ದೇಗುಲದ ಮುಂದೆಯೂ ಕಾರ್ಯಕ್ರಮ ನಡೆಯಲಿದೆ.