Advertisement

ಪೈ ಇಂಟರ್‌ನ್ಯಾಷನಲ್‌ ಗ್ರಾಹಕರಿಗೆ ವಾರ್ಷಿಕೋತ್ಸವ ಮಾರಾಟ ಕೊಡುಗೆ

11:46 AM Mar 05, 2017 | |

ಬೆಂಗಳೂರು: ದಕ್ಷಿಣ ಭಾರತದ ಖ್ಯಾತ ಗೃಹೋಪಯೋಗಿ ವಸ್ತುಗಳ ಮಾರಾಟ ಸಂಸ್ಥೆ ಪೈ ಇಂಟರ್‌ನ್ಯಾಷನಲ್‌ 2017ರ ಹೊಸ ವರ್ಷದ ಅಂಗವಾಗಿ ವಾರ್ಷಿಕೋತ್ಸವ ಮಾರಾಟ ಯೋಜನೆ ಆರಂಭಿಸಿದೆ.

Advertisement

ಸಂಸ್ಥೆ ನಿರ್ದೇಶಕ ರಾಜ್‌ಕುಮಾರ್‌ ಪೈ ಮಾತನಾಡಿ, ಕರ್ನಾಟಕ ಹಾಗೂ ಹೈದರಾಬಾದ್‌ನ ಪೈ ಇಂಟರ್‌ನ್ಯಾಷನಲ್‌, ಪೈ ಮೊಬೈಲ್ಸ್‌, ಪೈ ಡಿಜಿಟಲ್‌ ಮತ್ತು ಪೈ ಫರ್ನಿಚರ್‌ನ ಎಲ್ಲ ಮಳಿಗೆಗಳಲ್ಲಿ ಈ ವಾರ್ಷಿಕೋತ್ಸವ ಮಾರಾಟ, ಕೊಡುಗೆ ಹಾಗೂ ರಿಯಾಯಿತಿ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ 2 ಸಾವಿರ ರೂ. ಮೇಲ್ಪಟ್ಟು ಖರೀದಿಸಿದ ಗ್ರಾಹಕರಿಗೆ ಕೂಪನ್‌ ನೀಡಲಾಗುವುದು ಎಂದರು. 

1ನೇ ಬಹುಮಾನ ನೂರು ಮಂದಿಗೆ 1 ಲಕ್ಷ ರೂ. ಉಚಿತ ಶಾಪಿಂಗ್‌, 2ನೇ ಬಹುಮಾನವಾಗಿ 50 ಸಾವಿರ ರೂ.ವರೆಗೆ ಉಚಿತ ಶಾಪಿಂಗ್‌ ಮಾಡುವ ಅವಕಾಶ ನೂರು ಮಂದಿಗೆ. 3ನೇ ಬಹುಮಾನ 5 ಸಾವಿರ ರೂ. ಉಚಿತ ಶಾಪಿಂಗ್‌ (100 ಮಂದಿಗೆ) ಹಾಗೂ ಇತರೆ 52,300 ರವರೆಗೆ ಇತರೆ ಬಹುಮಾನ ಗೆಲ್ಲಬಹುದಾಗಿದೆ.

ಲಕ್ಕಿ ಕೂಪನ್‌ ಡ್ರಾ ಸಾರ್ವಜನಿಕರೆದುರು ಪಾರದರ್ಶಕತೆಯಿಂದ ನಡೆಸಲಾಗುತ್ತದೆ. ಇದುವರೆಗೆ ಪೈ ಇಂಟರ್‌ನ್ಯಾಷನಲ್‌ನಿಂದ ಬಂಪರ್‌ ಬಹುಮಾನ ರೂಪವಾಗಿ 204 ಕಾರುಗಳನ್ನು, ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು, ಉಚಿತ ಶಾಪಿಂಗ್‌ ಹಾಗೂ ಇತರೆ ಗೃಹೋಪಕರಣ ವಿತರಿಸಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next