Advertisement
ಐಸಿಎಒ ಸ್ಥಾಪನೆಅಂತಾರಾಷ್ಟ್ರೀಯ ಸಹಕಾರ ಮತ್ತು ಏಕರೂಪತೆಯನ್ನು ಭದ್ರ ಪಡಿಸುವ ಸಲುವಾಗಿ 1944ರ ಡಿಸೆಂಬರ್ 7ರಂದು ಅಂತಾ ರಾಷ್ಟ್ರೀಯ ನಾಗರಿಕ ವಿಮಾನ ಯಾನ ಸಂಸ್ಥೆ (ಐಸಿಎಒ) ಯನ್ನು ಸ್ಥಾಪಿಸಲಾಯಿತು. ಅಂತಾರಾಷ್ಟ್ರೀಯ ನಾಗರಿಕ ವಿಮಾನ ಯಾನ ಒಪ್ಪಂದಕ್ಕೆ ಸಹಿ ಹಾಕಿದ 50ನೇ ವಾರ್ಷಿಕೋತ್ಸವದ ನೆನಪಿಗಾಗಿ ಐಸಿಎಒ ನಾಗರಿಕ ವಿಮಾನ ಯಾನ ದಿನವನ್ನು ಆಚರಿಸುತ್ತಿದೆ. 1996ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಡಿಸೆಂಬರ್ 7ನ್ನು ಅಂತಾರಾಷ್ಟ್ರೀಯ ನಾಗರಿಕ ವಿಮಾನ ಯಾನ ದಿನ ಎಂದು ಅಧಿಕೃತವಾಗಿ ಘೋಷಿಸಿತು.
ಜಾಗತಿಕ ಸಂಪರ್ಕದ ಎಂಜಿನ್ ಆಗಿ ನಾಗರಿಕ ವಿಮಾನ ಯಾನ ಕ್ಷೇತ್ರ ಕಾರ್ಯ ನಿರ್ವಹಿಸುತ್ತಿದೆ. ತ್ವರಿತ ಸಾರಿಗೆ ಜಾಲ ವಾಗಿರುವ ವಿಮಾನ ಯಾನದ ಪ್ರಾಮುಖ್ಯವನ್ನು ಗುರುತಿ ಸುವುದು ಹಾಗೂ ಅದನ್ನು ಬಲಪಡಿಸುವಲ್ಲಿ ಐಸಿಎಒ ಪಾತ್ರ ಮಹತ್ವದ್ದಾಗಿದೆ. ಅರ್ಥಪೂರ್ಣ ಉದ್ದೇಶ
ಸುರಕ್ಷತೆ, ಭದ್ರತೆ ಮತ್ತು ವಿಶ್ವಾಸಾರ್ಹ ವಾಯು ಸಾರಿಗೆಗೆ ಯಾವ ಕ್ರಮ ಕೈಗೊಳ್ಳಬೇಕು, ವಿಮಾನ ಯಾನ ಸುರಕ್ಷತೆಗೆ ಅಂತಾರಾಷ್ಟ್ರೀಯ ಮಾನದಂಡಗಳನ್ನು ಅಭಿವೃದ್ಧಿಪಡಿಸು ವುದು, ಇದಕ್ಕೆ ಸಂಬಂಧಿತ ಸಮಸ್ಯೆಗಳನ್ನು ಯಾವ ರೀತಿ ಪರಿಹರಿಸಬಹುದು ಎಂಬುದರ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ.
Related Articles
ಸರಕಾರಗಳು, ಸಂಸ್ಥೆಗಳು, ವ್ಯವಹಾರಗಳು ಮತ್ತು ವ್ಯಕ್ತಿಗಳ ಸಹಯೋಗದೊಂದಿಗೆ ಐಸಿಎಒ ಅಂತಾರಾಷ್ಟ್ರೀಯ ನಾಗರಿಕ ವಿಮಾನ ಯಾನ ದಿನವನ್ನು ವಿವಿಧ ಚಟುವಟಿಕೆಗಳ ಮೂಲಕ ಆಚರಿಸುತ್ತಾ ಬಂದಿದೆ. ವಿಶೇಷವಾಗಿ ಅಂತಾರಾಷ್ಟ್ರೀಯ ನಾಗರಿಕ ವಾಯು ಯಾನ ವಿಷಯಗಳ ಕುರಿತು ವಿಚಾರಗೋಷ್ಠಿಗಳು, ಶೈಕ್ಷಣಿಕ ಉಪನ್ಯಾಸಗಳು, ತರಗತಿಗಳನ್ನು ಹಮ್ಮಿಕೊಳ್ಳುವ ಮೂಲಕ ಅಂತಾರಾಷ್ಟ್ರೀಯ ನಾಗರಿಕ ವಿಮಾನ ಯಾನದ ಮಹತ್ವದ ಬಗೆಗೆ ಜನತೆಗೆ ಮಾಹಿತಿ ಒದಗಿಸಿ ಅವರಲ್ಲಿ ಅರಿವು ಮೂಡಿಸುತ್ತಿದೆ.
Advertisement
ಜಾಗತಿಕ ಬೆಳವಣಿಗೆಯೇ ಧ್ಯೇಯ2020ರಿಂದ 2022ರ ವರೆಗೆ “ಜಾಗತಿಕ ವಿಮಾನ ಯಾನ ಬೆಳವಣಿಗೆಗಾಗಿ ಸುಧಾರಿತ ಆವಿಷ್ಕಾರ’ ಎಂಬ ಧ್ಯೇಯ ವಾಕ್ಯವನ್ನಿರಿಸಿಕೊಳ್ಳಲಾಗಿದೆ.