Advertisement

Mumbai Indians ತಂಡದಲ್ಲಿ ಒಳ ಜಗಳ..; ರೋಹಿತ್, ಬುಮ್ರಾ, ಸೂರ್ಯ ಪ್ರತ್ಯೇಕ ಸಭೆ

05:09 PM May 09, 2024 | Team Udayavani |

ಮುಂಬೈ: ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಈ ಬಾರಿ ನಿರಾಶಾದಯಕ ಪ್ರದರ್ಶನ ನೀಡುತ್ತಿದೆ. ಇದುವರೆಗೆ ಆಡಿರುವ 12 ಪಂದ್ಯಗಳಲ್ಲಿ ಕೇವಲ ನಾಲ್ಕರಲ್ಲಿ ಮುಂಬೈ ತಂಡವು ಜಯ ಗಳಿಸಿದೆ. ಎಂಟು ಪಂದ್ಯಗಳನ್ನು ಸೋತಿರುವ ಹಾರ್ದಿಕ್ ಪಡೆಯು ಕೂಟದಿಂದ ಹೊರಬಿದ್ದ ಮೊದಲ ತಂಡವಾಗಿದೆ.

Advertisement

ಹೊಸ ನಾಯಕನ ಅಡಿಯಲ್ಲಿ, ಮುಂಬೈ ಯಶಸ್ಸು ಕಾಣಲು ವಿಫಲವಾಗಿದೆ. ನಾಯಕ ಹಾರ್ದಿಕ್ ಪಾಂಡ್ಯ ಅವರು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲಿಂಗ್‌ಗೆ ಒಳಗಾಗಿದ್ದಾರೆ ಮತ್ತು ಋತುವಿನ ಉದ್ದಕ್ಕೂ ಮೈದಾನದಲ್ಲಿ ನಿರಂತರ ನಿಂದನೆಗೆ ಒಳಗಾಗಿದ್ದಾರೆ. ನಾಯಕನಾಗಿ ಐದು ಪ್ರಶಸ್ತಿಗಳನ್ನು ಗೆದ್ದ ರೋಹಿತ್ ಶರ್ಮಾ ಅವರನ್ನು ಫ್ರಾಂಚೈಸಿ ತೆಗೆದುಹಾಕಿದ್ದು ಅಭಿಮಾನಿಗಳಿಗೆ ಇಷ್ಟವಾಗಲಿಲ್ಲ. ಸೂರ್ಯಕುಮಾರ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ಅವರನ್ನು ಬಿಟ್ಟು ಗುಜರಾತ್ ನಲ್ಲಿದ್ದ ಹಾರ್ದಿಕ್ ಅವರನ್ನು ನಾಯಕರಾಗಿ ಆಯ್ಕೆ ಮಾಡಿದ್ದು ಅಭಿಮಾನಿಗಳನ್ನು ಅಸಮಾಧಾನಗೊಳಿಸಿದೆ. ನಾಯಕ ಮತ್ತು ಆಲ್ ರೌಂಡರ್ ಆಗಿ ಹಾರ್ದಿಕ್ ಅವರ ಕಳಪೆ ಪ್ರದರ್ಶನವು ಅಭಿಮಾನಿಗಳಲ್ಲಿ ಈ ಕೋಪವನ್ನು ಹೆಚ್ಚಿಸಿದೆ.

ದಿ ಇಂಡಿಯನ್ ಎಕ್ಸ್‌ಪ್ರೆಸ್‌ ನಲ್ಲಿನ ವರದಿಯ ಪ್ರಕಾರ, ತಂಡದ ಹಿರಿಯ ಆಟಗಾರರು ಕೋಚಿಂಗ್ ಸಿಬ್ಬಂದಿಯೊಂದಿಗೆ ಮಾತನಾಡಿದ್ದಾರೆ. ಡ್ರೆಸ್ಸಿಂಗ್ ರೂಮ್‌ ನಲ್ಲಿ ಉತ್ತಮ ವಾತಾವರಣದ ಕೊರತೆಯ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಹಾರ್ದಿಕ್ ಅವರ ನಾಯಕತ್ವವನ್ನು ದೂಷಿಸಿದ್ದಾರೆ.

ಮುಂಬೈ ತಂಡದ ಅಧಿಕಾರಿಯೊಬ್ಬರು ಇಂಡಿಯನ್ ಎಕ್ಸ್‌ಪ್ರೆಸ್‌ ನೊಂದಿಗೆ ಮಾತನಾಡುವ ವೇಳೆ ಹಾರ್ದಿಕ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ತಂಡವು ವಿಭಿನ್ನ ಶೈಲಿಯ ನಾಯಕತ್ವಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ತಂಡದ ಹಿರಿಯ ಆಟಗಾರರು ಮತ್ತು ಕೋಚಿಂಗ್ ಸ್ಟಾಫ್ ನಡುವೆ ಚರ್ಚೆ ನಡೆದಿದೆ. ಊಟದ ಸಮಯದಲ್ಲಿ ಈ ಚರ್ಚೆ ನಡೆದಿದ್ದು. ರೋಹಿತ್, ಬುಮ್ರಾ, ಸೂರ್ಯ ಮುಂತಾದವರು ಈ ಋತುವಿನಲ್ಲಿ ಏಕೆ ಪಂದ್ಯಗಳನ್ನು ಗೆಲ್ಲಲು ತಂಡಕ್ಕೆ ಸಾಧ್ಯವಾಗಲಿಲ್ಲ ಎಂಬ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next