Advertisement

ಅಂತರ್‌ ಕಾಲೇಜು ಕಬಡ್ಡಿ ಪಂದ್ಯಾಟ

08:04 AM Feb 09, 2019 | |

ಸುಬ್ರಹ್ಮಣ್ಯ : ಸುಬ್ರಹ್ಮಣ್ಯದ ಕೆಎಸ್‌ಎಸ್‌ ಕಾಲೇಜಿನಲ್ಲಿ ಶುಕ್ರವಾರ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್‌ ಕಾಲೇಜ್‌ ಪುರುಷರ ಕಬಡ್ಡಿ ಪಂದ್ಯಾಟದಲ್ಲಿ ಎಸ್‌ಡಿಂಸಿ ಕಾಲೇಜು ಉಜಿರೆ ತಂಡವು ಜಯ ಸಾಧಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

Advertisement

ಅಂತಿಮ ಹಣಾಹಣಿಯಲ್ಲಿ ಕೊಣಾ ಜೆಯ ಉಜಿರೆ ಎಸ್‌ಡಿಎಂಸಿ ಕಾಲೇಜು ತಂಡವು ಮಂಗಳೂರು ವಿಶ್ವವಿದ್ಯಾನಿಲಯ ಕ್ಯಾಂಪಸ್‌ ತಂಡವನ್ನು ಮಣಿಸಿತು.

ಫೈನಲ್‌ ಪಂದ್ಯಾಟದಲ್ಲಿ ಉಜಿರೆ ಎಸ್‌ಡಿಎಂಸಿ ತಂಡವು ಎರಡು ಹಂತದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಕ್ಯಾಂಪಸ್‌ ತಂಡಕ್ಕಿಂತ ಮುನ್ನಡೆ ಸಾಧಿಸಿತು. ಅಂತಿಮವಾಗಿ 38-22 ಅಂಕಗಳನ್ನು ಪಡಕೊಂಡು 16 ಅಂಕಗಳ ಮುನ್ನಡೆಯೊಂದಿಗೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ತೃತೀಯ ಬಹುಮಾನವನ್ನು ಮಂಗಳೂರು ಸೈಂಟ್ ಅಲೋಶಿಯಸ್‌ ಕಾಲೇಜು ತಂಡ ಪಡೆದುಕೊಂಡಿತು. ಚತುರ್ಥ ಬಹುಮಾನವನ್ನು ಸುಳ್ಯ ಎನ್‌ಎಂಸಿ ಕಾಲೇಜು ತಂಡವು ಗೆದ್ದುಕೊಂಡಿತು. ಎಸ್‌ಡಿಎಂ ಕಾಲೇಜು ತಂಡವು ಸೈಂಟ್ ಅಲೋಶಿಯಸ್‌ ಮಂಗಳೂರು ತಂಡವನ್ನು 51-11 ಅಂಕಗಳಿಂದ ಸೋಲಿಸಿ ಫೈನಲ್‌ ಪ್ರವೇಶಿಸಿತು.

ಸುಳ್ಯ ಎನ್‌ಎಂಸಿ ಮತ್ತು ಮಂಗಳೂರು ಯುನಿವರ್ಸಿಟಿ ಕ್ಯಾಂಪಸ್‌ ಕಾಲೇಜು ತಂಡಗಳ ನಡುವೆ ನಡೆದ ಪಂದ್ಯಾದಲ್ಲಿ 11-36 ಅಂಕಗಳ ಅಂತರದಿಂದ ಕ್ಯಾಂಪಸ್‌ ಕಾಲೇಜು ತಂಡ ಜಯಗಳಿಸಿ ಫೈನಲ್‌ ಪ್ರವೇಶಿಸಿತು.

Advertisement

ಪಂದ್ಯಾಟದ ಸರ್ವಾಂಗೀಣ ಆಟಗಾರನಾಗಿ ಕ್ಯಾಂಪಸ್‌ ಕಾಲೇಜು ತಂಡದ ಮನೋಹರ್‌ ಪಡೆದುಕೊಂಡರೆ, ಉಜಿರೆ ಎಸ್‌ಡಿಎಂ ಕಾಲೇಜಿನ ಮಿಥುನ್‌ ಗೌಡ ಅವರು ಉತ್ತಮ ದಾಳಿಗಾರ ಪ್ರಶಸ್ತಿಯನ್ನು ಪಡೆದರು. ಉತ್ತಮ ಹಿಡಿತಗಾರ ಪ್ರಶಸ್ತಿಯನ್ನು ಎಸ್‌ಡಿಎಂ ಕಾಲೇಜಿನ ದೀಕ್ಷಿತ್‌ ಪಡೆದುಕೊಂಡರು.

ಬಹುಮಾನ ವಿತರಣೆ ಸಮಾರಂಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಬಾಲಕೃಷ್ಣ ಬಳ್ಳೇರಿ ಬಹುಮಾನ ವಿತರಿಸಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಮಂಗಳೂರು ವಿಶ್ವವಿದ್ಯಾನಿಲಯದ ದೈ.ಶಿ. ನಿರ್ದೇಶಕ ಕಿಶೋರ್‌ ಕುಮಾರ್‌ ಸಿ.ಕೆ., ಕಡಬ ಸರಕಾರಿ ಕಾಲೇಜು ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಮಾರ್‌ ರೈ, ನಿವೃತ್ತ ದೈ.ಶಿ.ಶಿಕ್ಷಕ ತುಕರಾಮ್‌ ಯೇನೆಕಲ್ಲು, ಜಿಲ್ಲಾ ಧಾರ್ಮಿಕ ಪರಿಷತ್‌ ಸದಸ್ಯೆ ವಿಮಲಾ ರಂಗಯ್ಯ, ರಕ್ಷಕ-ಶಿಕ್ಷಕ ಸಂಘಧ ಅಧ್ಯಕ್ಷ ಮೋಹನದಾಸ್‌ ರೈ, ಮಾಸ್ಟರ್‌ ಪ್ಲಾನ್‌ ಸಮಿತಿ ಸದಸ್ಯ ಶಿವರಾಮ ರೈ, ಉಪಪ್ರಾಂಶುಪಾಲ ಮಂಜುನಾಥ ಭಟ್, ಉಪಸ್ಥಿತರಿದ್ದರು.

ದೈ.ಶಿ. ನಿರ್ದೇಶಕ ದಿನೇಶ್‌ ಕೆ. ಬಹುಮಾನಿತರ ಪಟ್ಟಿ ವಾಚಿಸಿದರು. ರಂಗಯ್ಯ ಶೆಟ್ಟಿಗಾರ್‌ ಸ್ವಾಗತಿಸಿ, ಉಪನ್ಯಾಸಕಿ ಅರತಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next