Advertisement
ಈ ಸಂಚು ರೂಪಿಸಿದ ಆರೋಪ ಸಂಬಂಧ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ನಾಲ್ವರು ಶಂಕಿತ ಉಗ್ರರು ವಿಚಾರಣೆ ವೇಳೆ ನೀಡಿದ್ದ ಮಾಹಿತಿ ಆಧರಿಸಿ ಮುಂಬೈನ ಆರ್ಥರ್ ಜೈಲಿನಲ್ಲಿದ್ದ ಉಗ್ರ ಜೈನುಲ್ಲಾಬ್ಬೀನ್ ಎಂಬಾತನನ್ನು ವಶಕ್ಕೆ ಪಡೆದು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ದ ಎಸಿಪಿ ವೆಂಕಟೇಶ್ ಪ್ರಸನ್ನ ಮತ್ತವರ ತಂಡ ತೀವ್ರ ವಿಚಾರಣೆ ನಡೆಸುತ್ತಿದೆ.
Related Articles
Advertisement
ಈ ಬೆನ್ನಲ್ಲೇ ಜೈನುಲ್ಲಾಬ್ಬೀನ್ ಮುಂಬೈನಲ್ಲಿ 2011ರಲ್ಲಿ ಜವೇರಿ ಬಜಾರ್, ಖಬೂತರ್ ಖಾನಾ ಸೇರಿ ಮೂರು ಕಡೆ ನಡೆದಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅರ್ಥರ್ ರಸ್ತೆ ಜೈಲಿನಲ್ಲಿರುವ ಬಗ್ಗೆ ಮಾಹಿತಿ ಖಚಿತವಾಗಿತ್ತು. ಈ ಮಾಹಿತಿ ಆಧರಿಸಿ ನ್ಯಾಯಾಲಯಕ್ಕೆ ಬಾಡಿವಾರೆಂಟ್ ಸಲ್ಲಿಸಿ ಆತನನ್ನು ವಶಕ್ಕೆ ಪಡೆದು ಕರೆತರಲಾಗಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಐಎಂ ಸಂಘಟನೆಯ ಸ್ಥಾಪಕ ರಿಯಾಜ್ ಭಟ್ಕಳ್‍ನ ಆಪ್ತನಾಗಿರುವ ಜೈನುಲ್ಲಾಬ್ಬೀನ್ ಆತನ ಸೂಚನೆ ಮೇರೆಗೆ ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ಐಎಂ ಸಂಘಟನೆ ಬಲಗೊಳಿಸುತ್ತಿದ್ದ. 2011ರಿಂದ 2014ರವರೆಗೆ ದೇಶದಲ್ಲಿ ನಡೆದ ಬಾಂಬ್ ಸ್ಫೋಟ ಕೃತ್ಯಗಳಿಗೆ ಸಹಚರರ ಮೂಲಕ ಸ್ಫೋಟಕ ರವಾನಿಸಿದ್ದಾನೆ. ಅಷ್ಟೇ ಅಲ್ಲದೆ, ಫ್ರೆಜರ್‌ಟೌನ್‌ನಲ್ಲಿ ಬಂಧಿತರಾದ ಆರೋಪಿಗಳ ಜತೆ ನೇರ ಸಂಪರ್ಕ ಹೊಂದಿರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಮಹಾರಾಷ್ಟ್ರ ಜೈಲಿನಲ್ಲಿದ್ದ ಐಎಂ ಸಂಘಟನೆಯ ಸದಸ್ಯ ಜೈನುಲ್ಲಾಬ್ಬೀನ್‌ನನ್ನು ಹೆಚ್ಚಿನ ವಿಚಾರಣೆ ಸಲುವಾಗಿ ವಶಕ್ಕೆ ಪಡೆಯಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ.-ಕುಲದೀಪ್ ಕುಮಾರ್ ಜೈನ್, ಸಿಸಿಬಿ ಡಿಸಿಪಿ