Advertisement

ಬುದ್ದಿಜೀವಿಗಳು ದೇಶದ ಬಗ್ಗೆ ಯೋಚನೆ ಮಾಡುವುದಿಲ್ಲ: ಆರಗ ಜ್ಞಾನೇಂದ್ರ

12:00 PM Mar 31, 2022 | Team Udayavani |

ಕೊಪ್ಪಳ: ಬುದ್ದಿ ಜೀವಿಗಳು ಹಿಜಾಬ್ ಬಗ್ಗೆ ಏನಾದರೂ ಮಾತನಾಡಿದ್ದಾರಾ? ಅವರು ದೇಶದ ಬಗ್ಗೆ ಯೋಚನೆ ಮಾಡುವ ಬುದ್ದಿವಂತರಲ್ಲ. ಈಗ ಹಲಾಲ್ ಬಗ್ಗೆ ಕರಪತ್ರ ಹಂಚುವ 60 ಜನ ಸಾಹಿತಿಗಳು ಹಿಜಾಬ್ ಬಗ್ಗೆ ಹೇಳಬೇಕಿತ್ತಲ್ಲವೇ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

Advertisement

ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆ ಕಾಲೇಜಿನಲ್ಲಿ ಬ್ರಿಟಿಷರ ಕಾಲದಿಂದ ಸಮವಸ್ತ್ರವಿತ್ತು. ಇದು ಬಿಜೆಪಿ ಸರ್ಕಾರ ತಂದಿರುವುದಲ್ಲ. ಶಾಲೆ ಒಳಗೆ ಮತೀಯ ಭಾವನೆಗಳನ್ನು ತುಂಬಿಕೊಂಡು ಹೊರಗೆ ಬರುವುದಾದರೆ ಈ 60 ಜನ ಬುದ್ದಿಜೀವಿಗಳು ಯೋಚನೆ ಮಾಡಬೇಕು. ಆ 60 ಸಾಹಿತಿಗಳಿಗೆ ಯಾವ ಸಮಯದಲ್ಲಿ ಮಾತನಾಡಬೇಕು? ಯಾವಾಗ ಮೌನವಾಗಿರಬೇಕು ಎನ್ನುವುದು ಗೊತ್ತಿಲ್ಲ. ಅವರು ಯಾವ ಬುದ್ದಿಜೀವಿಗಳು ಎಂದು ಪ್ರಶ್ನಿಸಿದರು.

ಸೆಕ್ಯೂಲರಿಸಂ ನಮ್ಮ ರಕ್ತದಲ್ಲಿ ಬಂದಿದೆ. ನಮ್ಮ ದೇಶದ ಸಂವಿಧಾನ ಒಪ್ಪುವುದಿಲ್ಲ, ಕೋರ್ಟ್ ತೀರ್ಪು ಒಪ್ಪುವುದಿಲ್ಲ ಎನ್ನುವವರಿಗೆ ನಾವು ಪಾಠ ಮಾಡಬೇಕಾಗಿದೆ. ಕೋರ್ಟ್ ತೀರ್ಪು ಒಪ್ಪದವರಿಗೆ ಈ ಬುದ್ದಿ ಜೀವಿಗಳು ಬುದ್ದಿ ಹೇಳುವ ಕೆಲಸ ಮಾಡಬೇಕಿತ್ತು. ಆದರೆ ಆ ಕೆಲಸವನ್ನು ಅವರು ಮಾಡಲಿಲ್ಲ, ದೇಶದ ಭವಿಷ್ಯದ ಬಗ್ಗೆ ಯೋಚಿಸದವರು ಯಾವ ಬುದ್ದಿವಂತರು ಎಂದು ಟೀಕಿಸಿದರು.

ಇದನ್ನೂ ಓದಿ:ಪರಿಷತ್ ಸ್ಥಾನಕ್ಕೆ ಸಿ.ಎಂ.ಇಬ್ರಾಹಿಂ ರಾಜೀನಾಮೆ: ಅಂಗೀಕರಿಸಿದ ಸಭಾಪತಿ

ರಾಜಕಾರಣಿಗಳು ನಾವು ವೋಟಿಗಾಗಿ ಮಾತನಾಡುತ್ತೇವೆ. ಆದರೆ ಸಾಹಿತಿಗಳು ಹಾಗೆ ಮಾತನಾಡಬಾರದು ಎಂದು ಗೃಹ ಸಚಿವರು ಹೇಳಿದರು.

Advertisement

ಸರ್ಕಾರದ ಕೆಲಸವಲ್ಲ: ಹಲಾಲ್, ಜಟ್ಕಾ ಧಾರ್ಮಿಕ ಭಾವನೆಗಳ ತಾಕಲಾಟ. ಹಲಾಲ್ ಕಟ್ ಇದೊಂದು ಧಾರ್ಮಿಕ, ಭಾವನಾತ್ಮಕ ವಿಷಯ. ಇದರಲ್ಲಿ ಸರ್ಕಾರದ ಕೆಲಸ ಏನೂ ಇಲ್ಲ. ಈ ವಿವಾದ ಆದಷ್ಟು ಬೇಗ ಸರಿ ಹೋಗತ್ತದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯನ ಬಗ್ಗೆ ಮಾತಾಡಲ್ಲ. ಅವರು ಎಲ್ಲವೂ ವೋಟ್ ಬ್ಯಾಂಕ್ ಗಾಗಿ ಮಾತನಾಡುತ್ತಾರೆ. ಅವರು ವೋಟ್ ಬ್ಯಾಂಕ್ ಗಾಗಿ ಮಾತಾಡಿ ಮಾತಾಡಿ ಈ ದೇಶದಲ್ಲಿ ಕಳೆದು ಹೋಗುತ್ತಿದ್ದಾರೆ. ಕಾಂಗ್ರೆಸ್ ಒಬ್ಬರನ್ನು ಎತ್ತಿ ಕಟ್ಟುತ್ತದೆ, ಒಬ್ಬರನ್ನು ಕಟ್ಟಿ ಹಾಕುತ್ತದೆ. ಕಾಂಗ್ರೆಸ್ ಬರಿ ಇದೇ ಕೆಲಸ ಮಾಡುತ್ತಾ ಬಂದಿದೆ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next