Advertisement
ನಗರದ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯದಲ್ಲಿ ಮೂರು ದಿನಗಳ ಕಾಲ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
Related Articles
Advertisement
ಎಲ್ಲಕ್ಕಿಂತ ಮಿಗಿಲಾಗಿ, ಪ್ರತಿಯೊಂದು ವಿಚಾರ ಸಂಕಿರಣ, ವಿಷಯ ಮಂಡನೆ ವೇಳೆ ಅವರೆಲ್ಲರೂ ಹಿರಿಯರು, ಕಿರಿಯರ ಜತೆಗೆ ಸಂವಾದದಲ್ಲಿ ಪಾಲ್ಗೊಂಡಿದ್ದು ವಿಶೇಷವೆನಿಸಿತು ಎಂದು ಹೇಳಿದರು.
ಅಂತಾರಾಷ್ಟ್ರೀಯ ಸಮ್ಮೇಳವನ್ನು ಅಚ್ಚುಕಟ್ಟಾಗಿ ನಡೆಸಿದ ಕೀರ್ತಿ ವಿಶ್ವವಿದ್ಯಾಲಯಕ್ಕೆ ಸಲ್ಲಬೇಕು. ನಾಯಕನಂತಿರುವ ವಿಷ್ಣುಕಾಂತ ಚಟಪಲ್ಲಿ ಅವರ ದೂರದೃಷ್ಟಿತ್ವದಿಂದ ಇದು ಸಾಧ್ಯವಾಗಿದೆ. ಸಮ್ಮೇಳನ ಯಶಸ್ವಿಯಾಗಿದೆ. ನಿರ್ಣಯಗಳೂ ಮಂಡನೆಯಾಗಿವೆ. ಈಗ ಅವುಗಳನ್ನು ಅನುಸರಿಸಿ, ಅಳವಡಿಸಿಕೊಂಡು ಸ್ವರಾಜ್ಯ ಕಟ್ಟಬೇಕಿದೆ. ಪ್ರತಿಯೊಬ್ಬರೂ ಇದನ್ನು ಗುರಿಯಾಗಿಸಿಕೊಳ್ಳಬೇಕೆಂದು ಹೇಳಿದರು.
ಪ್ರೊ|ಕಿರಣ್ ಅವರು ವಿಶ್ವವಿದ್ಯಾಲಯದ ಜತೆಗಿನ ಪಾಲುದಾರಿಕೆಯ ದ್ಯೋತಕವಾಗಿ ಸಿ-20 (ಸಿವಿಲ್ ಸೊಸೈಟಿ 20) ಧ್ವಜವನ್ನು ಪ್ರೊ|ವಿಷ್ಣುಕಾಂತ ಎಸ್.ಚಟಪಲ್ಲಿ ಅವರಿಗೆ ಹಸ್ತಾಂತರಿಸಿದರು. ಪ್ರಾಚಿ ಫೌಂಡೇಶನ್ ಅಧ್ಯಕ್ಷ ಶ್ರೀನಿವಾಸ ಭಗವತಲು ಮಾತನಾಡಿ, ಮೂರು ದಿನಗಳ ಸಮ್ಮೇಳನದಲ್ಲಿ 14 ದೇಶಗಳ 52 ಪ್ರತಿನಿ ಗಳು ಭಾಗವಹಿಸಿದ್ದರು. ದೇಶದ ವಿವಿಧ ರಾಜ್ಯಗಳಿಂದ 220 ಮಂದಿ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು. ನಾಲ್ಕು ಮಂದಿ ಪದ್ಮಶ್ರೀ ಪುರಸ್ಕೃತರು, ಹಲವು ಪ್ರತಿಷ್ಟಿತ ವಿಶ್ವವಿದ್ಯಾಲಯಗಳ ಕುಲಪತಿಗಳು ಉಪಸ್ಥಿತರಿದ್ದರು ಎಂದು ವಿವರಿಸಿದರು.