Advertisement

Intel: ಆರ್ಥಿಕ ಬಿಕ್ಕಟ್ಟು- ಇಂಟೆಲ್‌ ನ 18,000 ನೌಕರರ ವಜಾ, 20 ಬಿಲಿಯನ್‌ ವೆಚ್ಚ ಕಡಿತ!

02:48 PM Aug 02, 2024 | Team Udayavani |

ಸ್ಯಾನ್‌ ಫ್ರಾನ್ಸಿಸ್ಕೋ: ಆರ್ಥಿಕ ನಷ್ಟಕ್ಕೆ ಗುರಿಯಾಗಿರುವ ಅನೇಕ ಬೃಹತ್‌ ಕಂಪನಿಗಳು ಈಗಾಗಲೇ ಉದ್ಯೋಗಿಗಳನ್ನು ಕಡಿತಗೊಳಿಸಿದೆ. ಇದೀಗ ಅದಕ್ಕೊಂದು ಸೇರ್ಪಡೆ ಎಂಬಂತೆ ಅಮೆರಿಕದ ಪ್ರತಿಷ್ಠಿತ ಚಿಪ್‌ (Chip) ತಯಾರಿಕಾ ಕಂಪನಿ ಇಂಟೆಲ್‌ ಶೇ.15ಕ್ಕೂ ಅಧಿಕ ಉದ್ಯೋಗಿಗಳನ್ನು ವಜಾಗೊಳಿಸಿರುವುದಾಗಿ ವರದಿ ತಿಳಿಸಿದೆ.

Advertisement

ಇತ್ತೀಚೆಗೆ ಕೊನೆಗೊಂಡ ತ್ರೈಮಾಸಿಕ ವರದಿಯಲ್ಲಿ ಇಂಟೆಲ್‌ ಕಾರ್ಪೋರೇಶನ್‌ ಬರೋಬ್ಬರಿ 1.6 ಬಿಲಿಯನ್‌ ಡಾಲರ್‌ ನಷ್ಟ ಅನುಭವಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 20 ಬಿಲಿಯನ್‌ ಡಾಲರ್‌ ನಷ್ಟು ಬೃಹತ್‌ ಮೊತ್ತವನ್ನು ಕಡಿತಗೊಳಿಸಲು ಚಿಂತನೆ ನಡೆಸಿರುವುದಾಗಿ ವರದಿ ವಿವರಿಸಿದೆ.

“ ನಮ್ಮ 2ನೇ ತ್ರೈಮಾಸಿಕ ಆರ್ಥಿಕ ಪ್ರಗತಿ ತುಂಬಾ ನಿರಾಶದಾಯಕವಾಗಿದ್ದು, ನಮ್ಮ ಪ್ರಮುಖ ಉತ್ಪಾದನೆ ಮತ್ತು ತಾಂತ್ರಿಕ ಪ್ರಗತಿಯ ಗುರಿ ಮುಟ್ಟುವಲ್ಲಿ ವಿಫಲವಾಗಿರುವುದಾಗಿ ಇಂಟೆಲ್‌ ನ ಚೀಫ್‌ ಎಕ್ಸಿಕ್ಯೂಟಿವ್‌ ಪ್ಯಾಟ್‌ ಗೆಲ್ಸಿಂಗರ್‌” ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಂಪನಿಯ ವೆಚ್ಚವನ್ನು ಕಡಿತಗೊಳಿಸುವ ಮೂಲಕ ನಮ್ಮ ಲಾಭವನ್ನು ಸುಧಾರಿಸುವ ಮೂಲಕ ಆರ್ಥಿಕ ಲಾಭವನ್ನು ಬಲಗೊಳಿಸಲು ಉದ್ಯೋಗಿಗಳನ್ನು ಕಡಿತಗೊಳಿಸಲು ಮುಂದಾಗಿರುವುದಾಗಿ ಇಂಟೆಲ್‌ ತಿಳಿಸಿದೆ.

Advertisement

ಇಂಟೆಲ್‌ ವರದಿಯ ಪ್ರಕಾರ, ಕಳೆದ ವರ್ಷ 1,24,800 ಸಾವಿರ ಉದ್ಯೋಗಿಗಳನ್ನು ಹೊಂದಿದೆ. ಅಂದರೆ ಸುಮಾರು 18,000 ಉದ್ಯೋಗಿಗಳು ವಜಾಗೊಳ್ಳುವ ಸಾಧ್ಯತೆ ಇದ್ದಿರುವುದಾಗಿ ವರದಿ ವಿವರಿಸಿದೆ.

ಜೂನ್‌ ನಲ್ಲಿ ಇಸ್ರೇಲ್‌ ನಲ್ಲಿ ಪ್ರಾರಂಭವಾಗಬೇಕಿದ್ದ ಪ್ರಮುಖ ಫ್ಯಾಕ್ಟರಿ ಯೋಜನೆಯನ್ನು ಕೈಬಿಡುವುದಾಗಿ ಇಂಟೆಲ್‌ ಘೋಷಿಸಿತ್ತು. ಈ ಚಿಪ್‌ ಪ್ಲ್ಯಾಂಟ್‌ ಗೆ ಹೆಚ್ಚುವರಿ 15 ಬಿಲಿಯನ್‌ ಡಾಲರ್‌ ವ್ಯಯಿಸಬೇಕಾಗಿತ್ತು ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next