Advertisement

ತಮಿಳು ನಾಡು ರೈತರಿಗೆ 3 ವಿಮಾ ಕಂಪೆನಿಗಳಿಂದ 928 ಕೋಟಿ ಪರಿಹಾರ

12:21 PM Jun 26, 2017 | udayavani editorial |

ತಂಜಾವೂರು : ಬೆಳೆ ವಿಮೆ ಯೋಜನೆಯಡಿ ತಮಿಳು ನಾಡಿನ ರೈತರಿಗೆ 2016-17ರ ಹಣಕಾಸು ವರ್ಷದಲ್ಲಿ  ಮೂರು ವಿಮಾ ಕಂಪೆನಿಗಳು 928 ಕೋಟಿ ರೂ. ಪರಿಹಾರ ಮಂಜೂರು ಮಾಡಿವೆ ಎಂದು ಕೃಷಿ ಸಚಿವ ಆರ್‌ ದುರೈಕಣ್ಣು ತಿಳಿಸಿದ್ದಾರೆ. 

Advertisement

ಮುಂದಿನ ಹತ್ತು ದಿನಗಳ ಒಳಗಾಗಿ ರೈತರ ಖಾತೆಗಳಿಗೆ ಅವರಿಗೆ ಮಂಜೂರಾಗಿರುವ ಪರಿಹಾರ ಧನವನ್ನು ಜಮೆ ಮಾಡಲಾಗುವುದು ಎಂದವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ತಮಿಳು ನಾಡು ಸರಕಾರ ರೈತರಿಗೆ ಕೃಷಿ ಬಿತ್ತನೆ ಬೀಜ, ಸಾವಯವ ಗೊಬ್ಬರ ಮತ್ತು ನೀರಾವರಿ ಪರಿಕರಗಳನ್ನು ಖರೀದಿಸಲು ಕುರುವಾಯಿ ವಿಶೇಷ ಪ್ಯಾಕೇಜ್‌ ರೂಪದಲ್ಲಿ ಈಗಾಗಲೇ 56.92 ಕೋಟಿ ರೂ.ಗಳನ್ನು ಪ್ರಕಟಿಸಿದೆ ಎಂದವರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next