Advertisement

ಮಿಥಾಲಿ ಗ್ಲಾಮರ್‌ ಫೋಟೋಗೆ ಟೀಕೆ

10:06 AM Sep 08, 2017 | Team Udayavani |

ನವದೆಹಲಿ: ಇತ್ತೀಚೆಗೆ ಟ್ವೀಟರ್‌ನಲ್ಲಿ ತನ್ನ ಫೋಟೋ ಪ್ರಕಟಿಸಿ ಅಭಿಮಾನಿಯೊಬ್ಬನಿಂದ ಟೀಕೆಗೊಳಗಾಗಿದ್ದ ಭಾರತ ಕ್ರಿಕೆಟ್‌ ತಂಡದ ನಾಯಕಿ ಮಿಥಾಲಿ ರಾಜ್‌ ಮತ್ತೂಮ್ಮೆ ಇಂತಹುದೇ ವಿಷಯದಲ್ಲಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

Advertisement

ಕಳೆದ ಸಲ ಮಿಥಾಲಿ ಫೋಟೋಗೆ ಅಭಿಮಾನಿ ಯೊಬ್ಬ “ನಿಮ್ಮ ಕಂಕುಳ ಬೆವರು ಅಸಹ್ಯ ವಾಗಿ ಕಾಣಿಸುತ್ತಿದೆ’ ಎಂದು ಅಸಭ್ಯ ಟ್ವೀಟ್‌ ಮಾಡಿದ್ದ. ಇದಕ್ಕೆ ಭಾರೀ ಟೀಕೆ ಕೇಳಿ ಬಂದಿತ್ತು. ಸ್ವತಃ ಮಿಥಾಲಿ ಆತನಿಗೆ ತಿರುಗೇಟು ಕೂಡ ನೀಡಿದ್ದರು. ಇದೀಗ ಮಿಥಾಲಿ ತನ್ನ ಗ್ಲಾಮರ್‌ ಫೋಟೋವೊಂದನ್ನು ಟ್ವೀಟರ್‌ನಲ್ಲಿ ಗುರುವಾರ ಪ್ರಕಟಿಸಿದ್ದಾರೆ. ಫೋಟೋದಲ್ಲಿ ಇವರ ಜತೆಗೆ ಸ್ನೇಹಿತರೂ ಇದ್ದಾರೆ. ಈ ಫೋಟೋ ಪ್ರಕಟಿಸುತ್ತಿದ್ದಂತೆ ಕೆಲವರು ಮಿಥಾಲಿ
ಪರ ಇನ್ನೂ ಕೆಲವರು ವಿರೋಧವಾಗಿಯೂ ಟ್ವೀಟ್‌ ಮಾಡಿದ್ದಾರೆ. “ಮೇಡಂ..ಈ ಡ್ರೆಸ್‌ ನಿಮಗೆ ಚೆನ್ನಾಗಿ ಕಾಣುವುದಿಲ್ಲ. ಮೊದಲು ನೀವು ಫೋಟೋ ಡಿಲಿಟ್‌ ಮಾಡಿ ‘ಎಂದು ಒಬ್ಬ ಹೇಳಿದ್ದಾನೆ. 

“ನೀವು ದೇಶದ ಹೆಣ್ಣು ಮಕ್ಕಳಿಗೆ ಮಾದರಿ. ಹೀಗೆ ಬಟ್ಟೆ ತೊಡಬಾರದು’ ಎಂದು ಮತ್ತೂಬ್ಬ  ಟ್ವೀಟ್‌ ಮಾಡಿದ್ದಾನೆ. ದೇಶದಲ್ಲಿ ಹೆಣ್ಣಿಗೆ ತನಗಿಷ್ಟವಾದ ಬಟ್ಟೆ ತೊಡುವ ಹಕ್ಕಿದೆ ಎಂದು ಮತ್ತೂಬ್ಬರು ಪ್ರತಿಕ್ರಿಯಿಸಿದ್ದಾರೆ. ಹೀಗೆ ಹಲವಾರು ಮಂದಿ ಪರ-ವಿರೋಧವಾಗಿ ಇಲ್ಲಿ ಚರ್ಚೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next