Advertisement

Kanguva Movie: ಪ್ರೇಕ್ಷಕರ ಮನದಲ್ಲಿ ಕಂಗೊಳಿಸಿದ ʼಕಂಗುವʼ..ಸಿನಿಮಾ ನೋಡಿದವರು ಹೇಳಿದ್ದೇನು?

02:20 PM Nov 14, 2024 | Team Udayavani |

ಚೆನ್ನೈ: ಪ್ಯಾನ್‌ ಇಂಡಿಯಾ ʼಕಂಗುವʼ (Kanguva) ಗುರುವಾರ (ನ.14 ರಂದು) ವರ್ಲ್ಡ್‌ ವೈಡ್‌ ರಿಲೀಸ್‌ ಆಗಿದೆ. ಕಾಲಿವುಡ್‌ ಸ್ಟಾರ್‌ ಸೂರ್ಯ (Suriya) ಫ್ಯಾಂಟಸಿ ಲುಕ್‌ನಲ್ಲಿ ಅಬ್ಬರಿಸಿದ್ದಾರೆ.

Advertisement

ನೂರಾರು ಥಿಯೇಟರ್‌ಗಳಲ್ಲಿ ಸಿನಿಮಾ ಅದ್ಧೂರಿ ಆಗಿ ತೆರೆಕಂಡಿದೆ. ಸಿನಿಮಾ ನೋಡಿದವರು ಸಿನಿಮಾದ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇಲ್ಲಿದೆ ʼಕಂಗುವʼ ನೋಡಿದವರ ಕೆಲ ಟ್ವಿಟರ್‌ ರಿವ್ಯೂ..

“ಸೂರ್ಯ ಅವರ ʼಕಂಗುವʼದಲ್ಲಿ ಭರ್ಜರಿ ಆ್ಯಕ್ಷನ್ ನಲ್ಲಿ ಮಿಂಚಿದ್ದಾರೆ. ಪಾತ್ರವು ಸ್ಫೋಟಕ ಆ್ಯಕ್ಷನ್ ಕೊರಿಯೋಗ್ರಫಿ ಉನ್ನತ ದರ್ಜೆಯದ್ದಾಗಿದೆ. ಆಶ್ಚರ್ಯಕರವಾದ ಕ್ಯಾಮಿಯೋ ಮನಸ್ಸಿಗೆ ಮುದ ನೀಡುತ್ತದೆ. ಛಾಯಾಗ್ರಹಣ ಮತ್ತು ವಸ್ತ್ರ ವಿನ್ಯಾಸವು ಆಕರ್ಷಕವಾಗಿದೆ” ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.

“ಎರಡೂ ಟೈಮ್‌ಲೈನ್‌ಗಳಲ್ಲಿ ಸೂರ್ಯ ಒನ್ ಮ್ಯಾನ್ ಶೋ ಆಗಿ ಸ್ಕ್ರೀನ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಫನ್ ಆ್ಯಂಗಲ್‌ನಲ್ಲೂ ಸಿನಿಮಾ ಮನರಂಜನೆ ನೀಡುತ್ತವೆ. ಮಗುವಿನ ಪಾತ್ರ ಭಾವನಾತ್ಮಕವಾಗಿ ಸಂಪರ್ಕಿಸುತ್ತವೆ” ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

Advertisement

“ಸೂರ್ಯ ಇಡೀ ಸಿನಿಮಾವನ್ನು ಒಂಟಿಯಾಗಿ ಹೊತ್ತಿದ್ದಾರೆ. ಎರಡು ಶೇಡ್‌ನಲ್ಲಿ ಸೂರ್ಯ ಅವರ ಇಂಟ್ರೋ ಅದ್ಭುತವಾಗಿದೆ. ಸಿನಿಮಾ ಪೈಸಾ ವಸೂಲ್ ಮಾಡುವುದು ಗ್ಯಾರಂಟಿ. ದೃಶ್ಯಗಳು ಮತ್ತು ಛಾಯಾಗ್ರಹಣ ಅತ್ಯುತ್ತಮವಾಗಿದೆ. ಇಂತಹ ಮೊಸಳೆ ಕಾದಾಟವನ್ನು ಹಿಂದೆಂದೂ ನೋಡಿಲ್ಲ. ಈ ಸಿನಿಮಾದಲ್ಲಿ ವರ್ಷದ ಅತ್ಯುತ್ತಮ ಇಂಟರ್‌ ವಲ್‌ ಇದೆ” ಎಂದು 5ರಲ್ಲಿ 4 ಸ್ಟಾರ್ ರೇಟಿಂಗ್‌ ನ್ನು ಒಬ್ಬರು ನೀಡಿದ್ದಾರೆ.

“ಆಲ್‌ ಟೈಮ್ ಸ್ಟೈಲಿಶ್ ಆಗಿ ಸೂರ್ಯ ಭಾಯಿ ಕಾಣಿಸಿಕೊಂಡಿದ್ದಾರೆ. ಅವರ ಕ್ಯಾಲಿಬರ್ ಮತ್ತು ಎನರ್ಜಿ ಲೆವೆಲ್ ಅನ್ನು ಯಾರೂ ಹೊಂದಿಸಲು ಆಗುವುದಿಲ್ಲ. ಕಂಗುವ ಮೊದಲಾರ್ಧವನ್ನು ನೋಡಲು ಸಾರ್ವಜನಿಕರು ಹುಚ್ಚರಾದರು ಆದರೆ ಎರಡನೇ ಭಾಗವು ಅಕ್ಷರಶಃ ರೋಮಾಂಚನವಾಗಿತ್ತು” ಎಂದು ಒಬ್ಬರು ಬರೆದುಕೊಂಡಿದ್ದಾರೆ.

ಮೊದಲಾರ್ಧ ಹಾಗೂ ಸೆಕೆಂಡ್‌ ಹಾಫ್‌ ನಿಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತದೆ. ಕ್ಲೈಮ್ಯಾಕ್ಸ್‌ ಮಾತ್ರ ಬೆಂಕಿ ಆಗಿದೆ. ಇದು ನನ್ನ ಪ್ರಾಮಾಣಿಕ ವಿಮರ್ಶೆ ಎಂದು ಒಬ್ಬರು ಬರೆದುಕೊಂಡಿದ್ದಾರೆ.

ಮೊದಲಾರ್ಧ ಮತ್ತು ದ್ವಿತೀಯಾರ್ಧ ಚೆನ್ನಾಗಿದೆ. ಎಂಗೇಜಿಂಗ್‌ ಆಗಿ ಸಿನಿಮಾ ಮೂಡಿಬಂದಿದೆ. ನ್ಯೂನತೆಗಳು ಕೆಲವೇ ಕೆಲವೊಂದಿಷ್ಟಿದೆ. ಉಳಿದ ಭಾಗ ನಿಮ್ಮನ್ನು ಬೆರಗುಗೊಳಿಸುತ್ತದೆ. ವಿಎಫ್‌ ಎಕ್ಸ್‌ ವಿಭಾಗಕ್ಕೆ ಒಂದು ಸೆಲ್ಯೂಟ್ ಎಂದು ಪ್ರೇಕ್ಷಕರೊಬ್ಬರು ಬರೆದುಕೊಂಡಿದ್ದಾರೆ.‌

ಸಿನಿಮಾದ ಪಾಸಿಟಿವ್‌ ಅಂಶಗಳು, ಇದೊಂದು ಮಾಸ್‌ ಜಾನರ್.‌ ಸೂರ್ಯ ಅವರ ಅಭಿನಯ. ನಿರ್ದೇಶಕ ಶಿವ ಅವರ ರೈಟಿಂಗ್.‌ ಮೊಸಳೆ ಜತೆಗಿನ ಸಾಹಸ. ಟೈಟಲ್‌ ಕಾರ್ಡ್‌, ಇಂಟರ್‌ ವಲ್‌ ಸೀನ್ಸ್, ಹೈ ಎನರ್ಜಿ ನೀಡುವ ಸಾಂಗ್ಸ್.‌ ಎಮೋಷನ್‌ ಗಳು ಒಳ್ಳೆಯ ರೀತಿ ಕನೆಕ್ಟ್‌ ಆಗಿದೆ. ಕ್ಯಾಮಿಯೋ. ನೆಗೆಟಿವ್‌ ಹೇಳೋದಾದ್ರೆ ಸಿನಿಮಾದ ಆರಂಭ ಸ್ವಲ್ಪ ನಿಧಾನವಾಗಿದೆ ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.

ಸಾಧಾರಣವಾದ ವಿಎಫ್‌ ಎಕ್ಸ್‌ ಇದ್ದರೂ ಅದು ಅದ್ಭುತವಾಗಿ ಮೂಡಿಬಂದಿದೆ. ಸ್ಟೋರಿ ಚೆನ್ನಾಗಿದೆ ಆದರೆ ನಿರ್ದೇಶನ ಸ್ವಲ್ಪ ವೀಕ್‌ ಆಗಿದೆ. ಸೂರ್ಯ, ಬಾಬಿ ಅಭಿನಯ ಚೆನ್ನಾಗಿದೆ. ದಿಶಾ ಪಟಾನಿ ನಿರಾಶೆ ಮೂಡಿಸಿದ್ದಾರೆ. ಮ್ಯೂಸಿಕ್‌ ಚೆನ್ನಾಗಿದೆ ಆದರೆ ಅದು ತುಂಬಾ ಜೋರಾಗಿ ಕೇಳುತ್ತದೆ.  ಒಟ್ಟಾರೆ ಸಿನಿಮಾ ನೋಡಬಹುದು ಎಂದು ಒಬ್ಬರು ಬರೆದುಕೊಂಡಿದ್ದಾರೆ.

ಇದೇ ಮೊದಲ ಬಾರಿ ಸೂರ್ಯ ಅವರಿಗೆ ಶಿವ ಆ್ಯಕ್ಷನ್ ಹೇಳಿದ್ದಾರೆ. ಬುಡಕಟ್ಟು ಜನಾಂಗದ ಸುತ್ತ ಸಾಗುವ  ಈ ಕಥೆಯಲ್ಲಿ ಬಾಬಿ ಡಿಯೋಲ್‌, ದಿಶಾ ಪಟಾನಿ, ಯೋಗಿ ಬಾಬು, ರೆಡಿನ್ ಕಿಂಗ್ಸ್ಲಿ, ಮತ್ತು ಆರಾಶ್ ಶಾ ಇತರರು ನಟಿಸಿದ್ದಾರೆ. ವರದಿಗಳು ಪ್ರಕಾರ ಕ್ಯಾಮಿಯೋ ಪಾತ್ರದಲ್ಲಿ ಕಾರ್ತಿ ನಟಿಸಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next