Advertisement

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

12:41 AM Nov 19, 2024 | Team Udayavani |

ಹೊಸದಿಲ್ಲಿ: ಇದೇ ಮೊದಲ ಬಾರಿಗೆ ಖೋ ಖೋ ವಿಶ್ವಕಪ್‌ ಪಂದ್ಯಾವಳಿ ನಡೆಯಲಿದೆ. ಮುಂದಿನ ವರ್ಷದ ಜ. 13ರಿಂದ 19ರ ತನಕ ಹೊಸದಿಲ್ಲಿಯ “ಇಂದಿರಾ ಗಾಂಧಿ ಸ್ಟೇಡಿಯಂ’ನಲ್ಲಿ ಈ ಗ್ರಾಮೀಣ ಕ್ರೀಡೆಯ ವಿಶ್ವಕಪ್‌ ನಡೆಯುತ್ತಿರುವುದು ವಿಶೇಷ.

Advertisement

ನೂತನ ಬೆಳವಣಿಗೆಯೆಂದರೆ, ಖೋ ಖೋ ಫೆಡರೇಶನ್‌ ಆಫ್ ಇಂಡಿಯಾದ (ಕೆಕೆಎಫ್ಐ) ಈ ಪ್ರಯತ್ನಕ್ಕೆ ಇಂಡಿಯನ್‌ ಒಲಿಂಪಿಕ್‌ ಅಸೋಸಿಯೇಶನ್‌ (ಐಒಎ) ಬೆಂಬಲ ವ್ಯಕ್ತಪಡಿಸಿರುವುದು. ತನ್ನ ಸಹಭಾಗಿತ್ವವನ್ನು ಐಒಎ ಸೋಮವಾರ ಅಧಿಕೃತವಾಗಿ ಘೋಷಿಸಿತು.

ಈ ಕುರಿತು ಹೇಳಿಕೆಯೊಂದನ್ನು ನೀಡಿರುವ ಕೆಕೆಎಫ್ಐ ಅಧ್ಯಕ್ಷ ಸುಧಾಂಶು ಮಿತ್ತಲ್‌, “ಖೋ ಖೋ ವಿಶ್ವಕಪ್‌ ಪಂದ್ಯಾವಳಿಗೆ ಐಒಎ ತನ್ನ ಬೆಂಬಲದೊಂದಿಗೆ ಸಹಭಾಗಿತ್ವವನ್ನು ಸಾರಿರುವುದು ಸ್ವಾಗತಾರ್ಹ. ಐಒಎ ಬೆಂಬಲದಿಂದ ಈ ಪಂದ್ಯಾವಳಿ ನಿರೀಕ್ಷೆಗೂ ಮೀರಿದ ಯಶಸ್ಸು ಕಾಣುವುದರಲ್ಲಿ ಅನುಮಾನವಿಲ್ಲ. ನಮ್ಮ ಸಾಂಪ್ರದಾಯಿಕ ಕ್ರೀಡೆಯನ್ನು ವಿಶ್ವವ್ಯಾಪಿಗೊಳಿಸುವ ಪ್ರಯತ್ನ ಇದಾಗಿದೆ. ಪಿ.ಟಿ. ಉಷಾ ಅಧ್ಯಕ್ಷತೆಯ ಐಒಎ, ಖೋ ಖೋ ಪಾಲಿಗೆ ಗೇಮ್‌ ಚೇಂಜರ್‌ ಆಗಲಿದೆ’ ಎಂದಿದ್ದಾರೆ.

ಪುರುಷರ ಹಾಗೂ ವನಿತಾ ವಿಭಾಗಗಳೆರಡರಲ್ಲೂ ಖೋ ಖೋ ವಿಶ್ವಕಪ್‌ ನಡೆಯಲಿದೆ. 6 ಖಂಡಗಳ ಸುಮಾರು 25 ದೇಶಗಳು ಪಾಲ್ಗೊಳ್ಳಲಿವೆ.

Advertisement

Udayavani is now on Telegram. Click here to join our channel and stay updated with the latest news.

Next