Advertisement

ಬಸವಣ್ಣಗೆ ಅವಮಾನಿಸಿದ್ದು ಖಂಡನೀಯ: ಸಿದ್ದಲಿಂಗಶ್ರೀ

06:05 PM Dec 22, 2021 | Shwetha M |

ಬಸವನಬಾಗೇವಾಡಿ: ಜಗತ್ತಿಗೆ ಪ್ರಜಾಪ್ರಭುತ್ವ ನೀಡಿದ ಸಮಾನತೆ ಹರಿಕಾರ ಬಸವಣ್ಣನವರು ಜನ್ಮವೆತ್ತಿದ ನಾಡಿನಲ್ಲೇ ಅವರ ಭಾವಚಿತ್ರಕ್ಕೆ ಅಪಮಾನ ಮಾಡಿರುವುದು ಖಂಡನೀಯ ಎಂದು ವಿರಕ್ತಮಠದ ಸಿದ್ದಲಿಂಗ ಶ್ರೀಗಳು ಹೇಳಿದರು.

Advertisement

ಮಂಗಳವಾರ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಹಲಸಿ ಗ್ರಾಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಅಪಮಾನ ಮಾಡಿದ್ದನ್ನು ಖಂಡಿಸಿ ಬಸವ ಸೈನ್ಯ ಹಾಗೂ ತಾಲೂಕಿನ ವಿವಿಧ ಮಠಾಧೀಶರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಸಮಾನತೆ ಸಾರಿದ ಬಸವಣ್ಣ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ರಾಯಣ್ಣ, ಧರ್ಮ ರಕ್ಷಕ ಶಿವಾಜಿ ಮಹಾರಾಜರಂತಹ ಮಹಾನ್‌ ಪುರುಷರ ಪ್ರತಿಮೆಗಳಿಗೆ ಅವಮಾನ ಮಾಡುವುದು ಸರಿಯಲ್ಲ. ಇಂಥ ಕೃತ್ಯ ಎಸಗಿದ ಯಾವುದೇ ಧರ್ಮ, ಜಾತಿ ವ್ಯಕ್ತಿ ಇದ್ದರು ಕೂಡಾ ಅವರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಹೇಳಿದರು.

ಮಸಬಿನಾಳ ವಿರಕ್ತಮಠದ ಸಿದ್ದರಾಮ ಶ್ರೀಗಳು ಮಾತನಾಡಿ, ದೇಶದ ಮಹಾನ್‌ ಪುರುಷರ ಬಗ್ಗೆ ಮಾತನಾಡುವುದಾಗಲಿ ಅವರ ಪ್ರತಿಮೆಗಳಿಗೆ ಅಪಮಾನ ಮಾಡುವುದಾಗಲಿ ಸರಿಯಲ್ಲ. ನಾವು ಸಂಪ್ರದಾಯ ಮತ್ತು ಸಂಸ್ಕೃತಿ ನಾಡಿನಲ್ಲಿ ಹುಟ್ಟಿದವರು. ಅದನ್ನು ಅರಿತುಕೊಂಡು ನಡೆಯಬೇಕೆ ಹೊರತು ಉದ್ಧಟತನ ಮಾಡುವುದು ತಪ್ಪು ಎಂದರು.

ನಂತರ ಗ್ರೇಡ್‌ -2 ತಹಶೀಲ್ದಾರ್‌ ಪಿ.ಜೆ. ಪವಾರ ಅವರಿಗೆಉಭಯ ಶ್ರೀಗಳು ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಶಂಕರಗೌಡ ಬಿರಾದಾರ, ಸಂಗಮೇಶ ಓಲೇಕಾರ, ಸುನೀಲ ಚಿಕ್ಕೊಂಡ, ಸಂಜು ಬಿರಾದಾರ, ಜಟ್ಟಿಂಗರಾಯ ಮಾಲಗಾರ, ಪ್ರಶಾಂತ ಮುಂಜಾನೆ, ಗುರು ವಂದಾಲ, ವಿನೋದ ಗಬ್ಬೂರ, ಅರವಿಂದ ಗೊಳಸಂಗಿ, ಮಂಜು ಜಾಲಗೇರಿ, ವೀರೇಶ ಗಬ್ಬೂರ, ಪವನ ರಾಠೊಡ, ಶಂಕರಸಿಂಗ್‌ ರಜಪೂತ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next