Advertisement

ಮಾಹೆ ವಿ.ವಿ.ಗೆ ಉತ್ಕೃಷ್ಟ ಸಂಸ್ಥೆ ಸ್ಥಾನಮಾನ

09:39 AM Jul 10, 2018 | |

ಉಡುಪಿ: ವಿಶ್ವವಿದ್ಯಾನಿಲಯ ಅನುದಾನ ಆಯೋಗವು ಸೋಮವಾರ ಆರು ವಿ.ವಿ.ಗಳಿಗೆ “ಉತ್ಕೃಷ್ಟ ಸಂಸ್ಥೆ’ (ಇನ್‌ಸ್ಟಿಟ್ಯೂಟ್‌ ಆಫ್ ಎಮಿನೆನ್ಸ್‌- ಐಒಇ) ಎಂದು ಘೋಷಿಸಿದೆ. ಇದರಲ್ಲಿ ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌ (ಮಾಹೆ) ಒಂದಾಗಿದೆ. ಕೇಂದ್ರ ಮಾನವ ಸಂಪದಭಿವೃದ್ಧಿ ಸಚಿವ ಪ್ರಕಾಶ್‌ ಜಾಬ್ಡೇಕರ್‌ ಟ್ವೀಟ್‌ ಮೂಲಕ ಈ ವಿಚಾರವನ್ನು ಪ್ರಕಟಿಸಿದ್ದಾರೆ. 

Advertisement

ಡೀಮ್ಡ್ ವಿಶ್ವವಿದ್ಯಾನಿಲಯಗಳಲ್ಲಿ ಮಣಿಪಾಲ ವಿ.ವಿ.ಗೆ ವಿಶೇಷ ಸ್ಥಾನ ವನ್ನು ಯುಜಿಸಿ ನೀಡಿದೆ. ನಿರ್ದಿಷ್ಟ ಸಮಯದಲ್ಲಿ ವಿಶ್ವ ದರ್ಜೆಯ ವಿ.ವಿ. ಗಳನ್ನು ನಿರ್ಮಿಸುವ ಉದ್ದೇಶವನ್ನು ಇರಿಸಿ ಈ ಘೋಷಣೆ ಮಾಡಲಾಗಿದೆ. 
ಉತ್ಕೃಷ್ಟ ದರ್ಜೆಯ ಶಿಕ್ಷಣವನ್ನು ನೀಡುವುದು, ಸಂಶೋಧನೆ ನಡೆಸು ವುದು, ವಿವಿಧ ಜ್ಞಾನಶಾಖೆಗಳಲ್ಲಿ ಸ್ನಾತಕೋತ್ತರ, ಪದವಿ, ಸಂಶೋಧನ ಪದವಿ, ಪದವಿ ಪ್ರದಾನ, ಡಿಪ್ಲೊಮಾ, ಇತರ ಶೈಕ್ಷಣಿಕ ಪದವಿಗಳನ್ನು ನೀಡುವುದು ಐಒಇ ಗುರಿಯಾಗಿದೆ.

ಉನ್ನತ ದರ್ಜೆಯ ಬೋಧನೆ, ಸಂಶೋಧನೆ, ಜ್ಞಾನ, ಅಂತರ್‌ಶಿಸ್ತೀಯ ಕ್ಷೇತ್ರಗಳು, ಸಾಕಷ್ಟು ಜಾಗತಿಕ ಸ್ತರದ ವಿದ್ಯಾರ್ಥಿಗಳು, ಸ್ವಾಯತ್ತ ಆಡಳಿತ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಣಕಾಸು ನೆರವು, ಉನ್ನತ ಸ್ತರದ ಆರ್ಥಿಕ ಪೂರೈಕೆ ಉದ್ದೇಶಗಳಾಗಿವೆ. ಮಾಹೆ ವಿ.ವಿ. ಕ್ಯೂಎಸ್‌ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ದೇಶದ ಖಾಸಗಿ ವಿ.ವಿ. ಗಳಲ್ಲಿ ಉನ್ನತ ಮಟ್ಟದಲ್ಲಿದ್ದು, ಹೊಸ ಘೋಷಣೆಯಿಂದ ಈ ದಿನ ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನವಾಯಿತು. ಘೋಷಣೆಯ ಹಿನ್ನೆಲೆಯಲ್ಲಿ ವಿ.ವಿ.ಯಲ್ಲಿ ಕುಲಾಧಿಪತಿಯಿಂದ ಹಿಡಿದು ವಿದ್ಯಾರ್ಥಿಗಳ ವರೆಗೆ ಸಂಭ್ರಮ ಆಚರಿಸಿದರು. ಆ. 1ರಿಂದ ಎಂಬಿಬಿಎಸ್‌ಗೆ ಸೇರ್ಪಡೆಯಾಗುವ ವಿದ್ಯಾರ್ಥಿಗಳೂ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು.

ಘೋಷಣೆಯಿಂದ ಅತೀವ ಸಂತಸವಾಗಿದೆ. ಬೋಧನೆ, ಸಂಶೋಧನೆಯಲ್ಲಿ ಇನ್ನಷ್ಟು ಸಾಧನೆ ಮಾಡಿ ಮುಂದಡಿ ಇಡುವ ವಿಶ್ವಾಸವಿದೆ. ಜಗತ್ತಿನ ಶ್ರೇಷ್ಠ  200 ವಿ.ವಿ.ಗಳಲ್ಲಿ  ನಮ್ಮ ವಿ.ವಿ.ಗೆ ಸ್ಥಾನ ಲಭಿಸಲು ಇದು ಮೈಲುಗಲ್ಲಾಗಲಿದೆ’
-ಡಾ|ರಾಮದಾಸ್‌ ಎಂ. ಪೈ, ಕುಲಾಧಿಪತಿ 

ಜಾಗತಿಕ ಶಿಕ್ಷಣ ಪೂರೈಕೆದಾರರಲ್ಲಿ ಭಾರತಕ್ಕೆ ಮೂರನೆಯ ಸ್ಥಾನವಿದ್ದರೂ ಜಾಗತಿಕ ಶ್ರೇಣಿಯ ವಿ.ವಿ.ಗಳಿಲ್ಲ. ಮಾನವ ಸಂಪನ್ಮೂಲ ಇಲಾಖೆ ನಮ್ಮ ಸಂಪನ್ಮೂಲವನ್ನು ಗುರುತಿಸಿದೆ
-ಡಾ| ಎಚ್‌.ಎಸ್‌. ಬಲ್ಲಾಳ್‌, ಸಹಕುಲಾಧಿಪತಿ

Advertisement

“ಇದೊಂದು ಸ್ಮರಣಾರ್ಹ ಘಟನೆ. ಈ ಸ್ಥಾನ ನಮಗೆ ಬಹಳಷ್ಟು ಜವಾಬ್ದಾರಿ ಯನ್ನು ನೀಡಿದೆ. ನಾವು ಸ್ವಾಯತ್ತೆ, ಸಂಶೋಧನೆಗೆ ಸ್ವಾತಂತ್ರ್ಯ, ಸಾಗರೋತ್ತರ ವಿ.ವಿ.ಗಳೊಂದಿಗೆ ಹೊಸ ಶಾಖೆ, ಪಾಲುದಾರರನ್ನು ಹೊಂದುವುದು ನಮ್ಮ ಗುರಿ. ಇದು ವಿದ್ಯಾರ್ಥಿಗಳಿಗೆ ಬಹಳ ಪ್ರಯೋಜನವಾಗಲಿದೆ
 -ಡಾ|ಎಚ್‌. ವಿನೋದ ಭಟ್‌  ಕುಲಪತಿ

Advertisement

Udayavani is now on Telegram. Click here to join our channel and stay updated with the latest news.

Next