Advertisement

ಕಾರಾಗೃಹ ಇಲಾಖೆ ಹೆಸರು ಬದಲು

11:52 PM Jul 29, 2019 | Lakshmi GovindaRaj |

ಬೆಂಗಳೂರು: ಕಾರಾಗೃಹ ಮತ್ತು ಬಂದೀಖಾನೆ ಇಲಾಖೆಯನ್ನು “ಕಾರಾಗೃಹ ಮತ್ತು ಸುಧಾರಣಾ ಸೇವೆಗಳು’ ಎಂದು ಮರು ನಾಮಕರಣ ಮಾಡಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ. ಸುಪ್ರೀಂ ಕೋರ್ಟ್‌ ಸೂಚನೆ ಮೇರೆಗೆ “ಮಾದರಿ ಕಾರಾಗೃಹ ಕೈಪಿಡಿ’-2016ರ ಪ್ರಕಾರ ಕಾರಾಗೃಹ ಮತ್ತು ಬಂದೀಖಾನೆ ಇಲಾಖೆ ಬದಲಿಗೆ ಕಾರಾಗೃಹ ಮತ್ತು ಸುಧಾರಣಾ ಸೇವೆಗಳು (ಡಿಪಾರ್ಟ್‌ಮೆಂಟ್‌ ಆಫ್ ಪ್ರಿಸನ್ಸ್‌ ಆಂಡ್‌ ಕರೆಕ್ಷನಲ್‌ ಸರ್ವಿಸಸ್‌) ಎಂದು ಮರು ನಾಮಕರಣ ಮಾಡಲಾಗಿದೆ.

Advertisement

ಅಲ್ಲದೆ, ಇನ್ಮುಂದೆ ಕಾರಾಗೃಹ ಇಲಾಖೆಯ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು ಎಂದು ಉಲ್ಲೇಖೀಸುವ ಬದಲು ಮಹಾನಿರ್ದೇಶಕರು ಕಾರಾಗೃಹ ಮತ್ತು ಸುಧಾರಣಾ ಸೇವೆಗಳು ಎಂದು ನಮೂದಿಸುವಂತೆ ಸೂಚಿಸಲಾಗಿದೆ. ಈಗಾಗಲೇ ದೇಶದ ಕೆಲ ರಾಜ್ಯಗಳಲ್ಲಿ ಕಾರಾಗೃಹ ಮತ್ತು ಬಂದೀಖಾನೆ ಇಲಾಖೆಯ ಹೆಸರನ್ನು ಮರುನಾಮಕರಣ ಮಾಡಲಾಗಿದೆ.

ಅದರಂತೆ ರಾಜ್ಯದಲ್ಲಿಯೂ ಮಾಡಲಾಗಿದೆ ಎಂದು ಸರ್ಕಾರ ಆದೇಶದಲ್ಲಿ ಉಲ್ಲೇಖೀಸಿದೆ. ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಜೈಲು ಸೇರುವ ಕೈದಿಗಳನ್ನು ಕಾರಾಗೃಹಗಳಲ್ಲಿ ಪರಿವರ್ತನೆ ಮಾಡಲಾಗುತ್ತದೆ. ಹೀಗಾಗಿ ಬಂದೀಖಾನೆ ಎಂಬ ಪದದ ಬದಲಿಗೆ ಸುಧಾರಣಾ ಸೇವೆಗಳು ಎಂದು ಬದಲಿಸಲಾಗಿದೆ ಎಂದು ಕಾರಾಗೃಹ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next