ಕಾರ್ಕಳ: ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರ ಜ್ಞಾನ ಸಚಿವಾಲಯ ನಡೆಸುವ ವಿಜ್ಞಾನ ಮಾದರಿ ತಯಾರಿಕೆಯ (ಇನ್‌ಸ್ಪಾಯರ್ ಅವಾರ್ಡ್) ಸ್ಪರ್ಧೆ ಯಲ್ಲಿ ಕಾರ್ಕಳದ ಗ್ರಾಮೀಣ ಸರಕಾರಿ ಶಾಲೆ ಕಡ್ತಲದ ಅಮೂಲ್ಯಾ ಹೆಗ್ಡೆ, ನಿಕಿತಾ ಹಾಗೂ ಬೈಲೂರು ಸರ ಕಾರಿ ಪ.ಪೂ ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿ ಸ್ವಸ್ತಿಕ್ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅಮೂಲ್ಯಾ ಹೆಗ್ಡೆ ಫ್ಲಡ್ ಡಿಟೆಕ್ಟರ್ ಹಾಗೂ ನಿಕಿತಾ ಅವರ ರೋಪೋ ಮೀಟರ್ ಎಂಬ ಮಾದರಿಗಳನ್ನು ಪ್ರಸ್ತುತಪಡಿಸಿದ್ದರು. ವಿದ್ಯಾರ್ಥಿಗಳ ಈ ಸಾಧನೆಯ ಹಿಂದೆ ಶಾಲೆಯ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಸುರೇಶ್ ಮರಕಾಲರ ಪಾತ್ರವಿದೆ.
ಮಾದರಿ ವಿಶೇಷತೆಯೇನು?
ಫ್ಲಡ್ ಡಿಟೆಕ್ಟರ್ ಮಾದರಿಯು ಪ್ರವಾಹ, ಅತಿವೃಷ್ಟಿಯಂತಹ ಸಂದರ್ಭದಲ್ಲಿ ಹಲವರ ಪ್ರಾಣ ಉಳಿಸಬಲ್ಲದು. ದುಬಾರಿಯಲ್ಲದ ಇದನ್ನು ಎಲ್ಲಿಗೆ ಬೇಕಾದರೂ ಕೊಂಡೊಯ್ದು ಅಳವಡಿಸಬಹುದು.
ರೋಪೋ ಮೀಟರ್ ಎಂಬ ಯಂತ್ರವು ವೈರ್, ಕೇಬಲ್, ಹಗ್ಗ ಮೊದಲಾದ ಉದ್ದ ನೆಯ ವಸ್ತುಗಳನ್ನು ಕ್ಷಣ ಮಾತ್ರದಲ್ಲಿ ಕರಾರು ವಕ್ಕಾಗಿ ಅಳೆಯುತ್ತದೆ.
ಸ್ವಸ್ತಿಕ್ ಅವರು “ಸ್ಲೈಡಿಂಗ್ ಮೆಕ್ಯಾ ನಿಸಂ ತ್ರೆಡ್ ಸೈಕಲ್’ ಎಂಬ ಮಾದರಿ ಯನ್ನು ತಯಾರಿ ಸಿದ್ದು, ಇದರಲ್ಲಿ ಪೆಡಲ್ ಬದಲಾಗಿ ಸ್ಲೈಡಿಂಗ್ ಮೆಕ್ಯಾನಿಸಂ ಅನ್ನು ಬಳಸುವುದರಿಂದ ಮಕ್ಕಳು ಮತ್ತು ಅಶಕ್ತರಿಗೆ ಅನುಕೂಲವಾಗಿದೆ.