ಚಿಕ್ಕನಾಯಕನಹಳ್ಳಿ: ಆಲ್ ಇಂಡಿಯಾಗೂಡ್ಸ್ ಲಾರಿ ಚಾಲಕನಾಗಿ ರಾಜ್ಯಗಳನ್ನು ಸುತ್ತುತ್ತಿದ್ದ ಗೌತಮ್, ಈಗ ತಮ್ಮ ತೋಟದಲ್ಲಿ 8 ಹಸು ಸಾಕಿಕೊಂಡು ಹೈನುಗಾರಿಕೆ ಮಾಡುತ್ತಿದ್ದಾರೆ.
ಡ್ರೈವಿಂಗ್ ಬ್ರೇಕ್ ಹಾಕಿ ಪ್ರತಿನಿತ್ಯ 100ಕ್ಕೂ ಅಧಿಕ ಲೀ. ಹಾಲು ಉತ್ಪಾದನೆ ಮಾಡುತ್ತಿದ್ದು, ಸಾವಿರಾರು ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. 2015ರಲ್ಲಿ ಹೈನುಗಾರಿಕೆ ಮಾಡಿ ಕೊಂಡು ಸುಖ ಜೀವನ ನಡೆಸುತ್ತಿದ್ದ ಚಿಕನಾಯಕನಹಳ್ಳಿಪಟ್ಟಣದ ಗೌತಮ್, ತಾಲೂಕಿನಲ್ಲಿ ಭೀಕರ ಬರಗಾಲದಿಂದ ತೋಟದಲ್ಲಿದ್ದ ಬೋರ್‌ವೆಲ್‌ಗಳು ನೀರಿಲ್ಲದೆ ಬತ್ತಿ ಹೋದವು.
ಹೈನುಗಾರಿಕೆಯಲ್ಲಿ ದುಡಿದ ಹಣ ಕೊಳವೆ ಬಾವಿಕೊರೆಯಲು ವಿನಿಯೋಗಿಸಿ ಕೈಸುಟ್ಟು ಕೊಂಡು, ಬೆಂಗ ಳೂರಿನಲ್ಲಿ ಟಿಟಿ ಚಾಲಕನಾಗಿ ನಂತರ 2018ರಲ್ಲಿ ಆಲ್ ಇಂಡಿಯಾ ಗೂಡ್ಸ್ ಲಾರಿಚಾಲಕನಾಗಿ ಪ್ರತಿ ತಿಂಗಳು 30 ಸಾವಿರ ರೂ.ಸಂಬಳ ಪಡೆಯುತ್ತಿದ್ದರು. ಖರ್ಚು ಕಳೆದು ಕನಿಷ್ಠ 15ರಿಂದ 18 ಸಾವಿರರೂ. ಹಣ ಉಳಿತಾಯ ಮಾಡುತ್ತಿ ದ್ದರು.ಆದರೂ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿರಲಿಲ್ಲ.ಕಳೆದ ವರ್ಷ 2020ರಲ್ಲಿ ಲಾಕ್‌ಡೌನ್‌ನಿಂದಲಾರಿಗಳು ಲಾಕ್ ಆದವು. ಅನಿವಾರ್ಯವಾಗಿ ಊರಿಗೆ ಬರಬೇಕಾದ ಪರಿಸ್ಥಿತಿ ಉಂಟಾಯಿತು.
ತಂದೆಯ ಸಹಕಾರ: ಚಿಕ್ಕನಾಯಕನ ಹಳ್ಳಿಗೆಬಂದ ಗೌತಮ್ ತನ್ನ 8 ಎಕರೆ ತೋಟದಲ್ಲಿ ಏನಾದರೂ ಮಾಡಬೇಕು ನಮ್ಮ ಊರಿನಲ್ಲಿಯೇ ದುಡಿಯಬೇಕು ಎಂಬ ಛಲಕ್ಕೆ ನಿಂತ, ಹೈನುಗಾರಿಕೆಯಲ್ಲಿ ಅನುಭವವಿದ್ದ ಕಾರಣ ತಾಲೂಕಿನಲ್ಲಿ ಈ ವರ್ಷ ಉತ್ತಮ ಮಳೆಯೂ ಆಗಿದ್ದರಿಂದ ತೋಟದ ಬೋರ್‌ವೆಲ್‌ನಲ್ಲಿ ನೀರು ಬರುತ್ತಿತ್ತು. ಇದನ್ನುಸದುಪಯೋಗಪಡಿಸಿಕೊಂಡ ಗೌತಮ್, ತನ್ನತಂದೆಯ ಸಹಕಾರದಿಂದ 8 ಹಸು ಖರೀದಿಮಾಡಿ ಹೈನುಗಾರಿಕೆ ಪ್ರಾರಂಭ ಮಾಡಿದ್ದಾರೆ.
ತಿಂಗಳಿಗೆ 45 ಸಾವಿರ ರೂ.ಸಂಪಾದನೆ
8 ಹಸುಗಳ ಪೈಕಿ ಆರು 6 ಹಸು ಹಾಲು ನೀಡುತ್ತಿದ್ದು, ಇವುಗಳಲ್ಲಿ ಒಂದು ದಿನಕ್ಕೆ 100 ಲೀ.ಹಾಲು ಉತ್ಪಾದನೆ ಆಗುತ್ತಿದೆ. ಇದರಿಂದ ಪ್ರತಿನಿತ್ಯ 2,500 ರೂ.ಹಣ ಸಿಗುತ್ತಿದೆ.
ಹಸುಗಳ ಖಚ್ಚು ವೆಚ್ಚ ಕಳೆದು ತಿಂಗಳಿಗೆ 40 ರಿಂದ 45 ಸಾವಿರ ರೂ.ಹಣ ಉಳಿಯುತ್ತಿದೆ. ಕೆಲವೇ ದಿನಗಳಲ್ಲಿ ಇನ್ನು 3 ಹಸು ಕರು ಹಾಕಲಿದ್ದು, ಒಟ್ಟು ಸೇರಿ ಪ್ರತಿದಿನ 140 ಲೀ. ಹಾಲು ಸಿಗುತ್ತದೆ. ಇವುಗಳಿಂದ ತಿಂಗಳಿಗೆ 50 ಸಾವಿರ ರೂ. ಹಣ ಉಳಿಸಬಹುದು ಎನ್ನುತ್ತಾರೆ ಗೌತಮ್.
ಚೇತನ್