Advertisement

ಚೆಕ್‌ಪೋಸ್ಟ್‌ ಗಳಲ್ಲಿ ತಡರಾತ್ರಿವರೆಗೂ ತಪಾಸಣೆ 

05:19 PM Apr 19, 2018 | Team Udayavani |

ಗುಳೇದಗುಡ್ಡ: ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ಕಮತಗಿ ನಾಕಾ ಚೆಕ್‌ಪೋಸ್ಟ್‌ನಲ್ಲಿ ತಡರಾತ್ರಿವರೆಗೂ ವಾಹನಗಳ ತಪಾಸಣೆ ನಡೆಯಿತು.

Advertisement

ಚೆಕ್‌ಪೋಸ್ಟ್‌ನಲ್ಲಿ ಕಂದಾಯ ಇಲಾಖೆ, ಅರಣ್ಯ ಇಲಾಖೆ, ಪೊಲೀಸ್‌ ಇಲಾಖೆ, ಅಬಕಾರಿ ಇಲಾಖೆ ಹಾಗೂ ಇನ್ನಿತರ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಬಿಡುಬಿಟ್ಟಿದ್ದು, ನಿತ್ಯ ಬೆಳಗಿನ ಜಾವದವರೆಗೂ ಚೆಕ್‌ಪೋಸ್ಟ್‌ ತಪಾಸಣೆ ನಡೆಯುತ್ತಿದೆ. ಆದರೆ ಕಳೆದ ಹದಿನೈದು ದಿನಗಳಿಂದ ನಿತ್ಯವೂ ಚೆಕ್‌ಪೋಸ್ಟ್‌ನಲ್ಲಿ ಕಠಿಣ ಕ್ರಮಕೈಗೊಳ್ಳಲಾಗಿದ್ದು, ಪ್ರತಿ ವಾಹನವನ್ನು ತಪಾಸಣೆ ಮಾಡಲಾಗುತ್ತಿದೆ. 

ದಾಖಲೆ ಇಲ್ಲದ ಬಾಂಡೆ ಸಾಮಗ್ರಿ ವಶ
ಬಾಗಲಕೋಟೆ: ಸೂಕ್ತ ದಾಖಲೆ ಇಲ್ಲದೇ ಬಾಂಡೆ ಸಾಮಗ್ರಿ ಸಾಗಿಸುತ್ತಿದ್ದ ವೇಳೆ ಇಲ್ಲಿನ ಹೊಸೂರ ಚೆಕ್‌ಪೋಸ್ಟ್‌ನಲ್ಲಿ ಚುನಾವಣೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಸುಮಾರು 2 ಲಕ್ಷ ಮೊತ್ತದ ಬಾಂಡೆ ಸಾಮಗ್ರಿಗಳನ್ನು ಹುಬ್ಬಳ್ಳಿಯಿಂದ ಹುಣಸಗಿಗೆ ಸಾಗಿಸಲಾಗುತ್ತಿತ್ತು. ಹೊಸೂರ ಕ್ರಾಸ್‌ ಬಳಿ ತಹಶಿಲ್ದಾರ ವಿನಯ ಕುಲಕರ್ಣಿ ನೇತೃತ್ವದ ಅಧಿಕಾರಿಗಳ ತಂಡ, ಗೂಡ್ಸ ವಾಹನ, ಚಾಲಕ ಹಾಗೂ 2 ಲಕ್ಷ ಮೊತ್ತದ ಬಾಂಡಗೆ ಸಾಮಾನು ವಶಕ್ಕೆ ಪಡೆದಿದ್ದಾರೆ.ಪ್ರಕರಣ ದಾಖಲಿಸಲು ಎಂಸಿಸಿ ಕಮೀಟಿಗೆ ಶಿಫಾರಸು ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next