Advertisement

ಕೊಳಚೆ ನೀರಿನ ಸಮಸ್ಯೆ ಪರಿಹರಿಸಲು ಒತ್ತಾಯ

09:14 PM Aug 02, 2019 | Team Udayavani |

ಹೊಸಕೋಟೆ: ಸಮೀಪದ ದಂಡುಪಾಳ್ಯದಲ್ಲಿರುವ ಎಂವಿಜೆ ವೈದ್ಯಕೀಯ ಆಸ್ಪತ್ರೆ ಪಕ್ಕದ ನಿವಾಸಿಗಳು ಹರಿಸುವ ಕೊಳಚೆ ನೀರು ಸರಾಗವಾಗಿ ಹರಿಯಲು ವ್ಯವಸ್ಥೆಯಿಲ್ಲದೆ ಆಸ್ಪತ್ರೆ ಪ್ರವೇಶದ್ವಾರದಲ್ಲಿಯೇ ಹರಿಯುತ್ತಿದ್ದು, ವೈದ್ಯರು, ರೋಗಿಗಳಿಗೆ ಕಿರಿಕಿರಿಯಾಗುತ್ತಿದೆ ಎಂದು ಆಸ್ಪತ್ರೆ ವೈದ್ಯಾಧಿಕಾರಿಗಳು, ರೋಗಿಗಳು, ಸಾರ್ವಜನಿಕರು ಒತ್ತಾಯಿಸಿದ್ದಾರೆ.

Advertisement

ಕೊಳಚೆ ನೀರು ದಾಟಿಕೊಂಡೇ ಹೋಗಬೇಕು: ಆಸ್ಪತ್ರೆ ಪ್ರವೇಶಿಸಬೇಕಾದರೆ ಈ ಕೊಳಚೆ ನೀರನ್ನು ದಾಟಿಕೊಂಡೇ ಹೋಗಬೇಕು. ಹೀಗಾಗಿ ಆಸ್ಪತ್ರೆಗೆ ಬರುವ ವಾಹನಗಳಿಂದಾಗಿ ಅಲ್ಲಿರುವ ಭದ್ರತೆ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಕೊಳಚೆ ನೀರು ಎರಚಿದಂತಾಗುತ್ತದೆ. ಜತೆಗೆ ದುರ್ನಾತ ಹಾಗೂ ಸೊಳ್ಳೆಗಳ ಉತ್ಪತ್ತಿಯಾಗುವ ತಾಣವಾಗಿ ರೂಪಗುಂಡಿದೆ. ಇದರಿಂದಾಗಿಯೇ ಹಲವು ಬಾರಿ ವೈದ್ಯರೇ ಅನಾರೋಗ್ಯಕ್ಕೆ ತುತ್ತಾಗಿರುವ ಉದಾಹರಣೆಗಳಿವೆ.

ಪ್ರಯೋಜನವಾಗದ ಮನವಿ: ಸಮಸ್ಯೆ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ತಿಳಿಸಿದ್ದರೂ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆದರೆ ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಲ್ಯಾನ್ಕೊ ಸಂಸ್ಥೆಯವರು ಚರಂಡಿ ನಿರ್ಮಿಸಿದ್ದರೂ ಇತ್ತೀಚೆಗೆ ಕೆಸಿ ವ್ಯಾಲಿ ಕಾಮಗಾರಿ ಕೈಗೊಂಡ ಸಂದರ್ಭದಲ್ಲಿ ಸಂಪೂರ್ಣ ಹಾಳಾಗಿದೆ. ಆದರೆ ಸಂಬಂಧಪಟ್ಟವರು ಸರಿಪಡಿಸಲು ನಿರ್ಲಕ್ಷ್ಯ ವಹಿಸಿದ್ದು, ಸಮಸ್ಯೆ ಹೆಚ್ಚಾಗಿದೆ. ಸಮಸ್ಯೆಯನ್ನು ತಾತ್ಕಾಲಿಕವಾಗಿ ತಡೆಯಲು ಆಸ್ಪತ್ರೆಯವರು ಮಣ್ಣು ಹಾಕಿ ನೀರು ಹರಿಯುವುದನ್ನು ತಡೆದಿದ್ದಾರೆ.

ಕೊಳಚೆ ನೀರು ಸುಮಾರು 6 ತಿಂಗಳುಗಳಿಂದ ಆಸ್ಪತ್ರೆ ಪ್ರವೇಶದ್ವಾರದವರೆಗೆ ಹರಿದು ಬರುತ್ತಿದೆ. ಮಳೆ ಬಂದರೆ ಸಂಚರಿಸಲು ಹರಸಾಹಸ ಮಾಡಬೇಕು. ವೈದ್ಯರು, ಭದ್ರತಾ ಸಿಬ್ಬಂದಿ ಸೊಳ್ಳೆಗಳ ಕಡಿತದಿಂದ ಡೆಂಘೀಯಂತಹ ಜ್ವರಕ್ಕೆ ಒಳಗಾಗುತ್ತಿದ್ದಾರೆ. ನಗರಸಭೆ ಈ ಬಗ್ಗೆ ಗಮನ ಹರಿಸಿ ಸಮಸ್ಯೆ ಪರಿಹರಿಸಬೇಕು ಎಂದು ಎಂವಿಜೆ ಆಸ್ಪತ್ರೆ ಸಿಇಒ ಧರಣಿ ಒತ್ತಾಯಿಸಿದ್ದಾರೆ.

ಕೇಸಿ ವ್ಯಾಲಿಗೆ ನೀರು ಹರಿಸುವದಕ್ಕಾಗಿ ಲ್ಯಾನ್ಕೊ ಸಂಸ್ಥೆ ಕೈಗೊಂಡಿರುವ ಕಾಮಗಾರಿಯಿಂದಾಗಿ ಬಹಳಷ್ಟು ಪ್ರದೇಶಗಳಲ್ಲಿ ಇಂತಹ ಸಮಸ್ಯೆ ಉಂಟಾಗಿದೆ. ಶೀಘ್ರವಾಗಿ ಚರಂಡಿ ನಿರ್ಮಿಸುವ ಕಾಮಗಾರಿ ಕೈಗೊಳ್ಳಬೇಕು ಎಂದು ಕೇಸಿ ವ್ಯಾಲಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next